ಮೃತ್ಯುಕೂಪವಾಗಿರುವ ಸಾಣಾಪೂರ ಕೆರೆ: ಪ್ರವಾಸಿಗರ ಜೀವ ಉಳಿಸಲು ಜಿಲ್ಲಾಡಳಿತ ಮುಂದಾಗಲಿ


Team Udayavani, Oct 20, 2021, 12:11 PM IST

Untitled-1

ಗಂಗಾವತಿ:  ಪ್ರವಾಸಿಗರ ಸ್ವರ್ಗ ಎಂದೂ ಕರೆಯಲ್ಪಡುವ ಕಿಷ್ಕಿಂದಾ ಪ್ರದೇಶದಲ್ಲಿರುವ ಸಾಣಾಪೂರ ಲೇಕ್(ಕೆರೆ) ಕಳೆದ ಹಲವು ವರ್ಷಗಳಿಂದ ಮೃತ್ಯುಕೂಪವಾಗುತ್ತಿದ್ದರೂ ಜಿಲ್ಲಾಡಳಿತ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರ ಪ್ರವಾಸಿಗರ ಜೀವ ಉಳಿಸುವ ಕ್ರಮಕೈಗೊಳ್ಳದೇ ಮೌನವಹಿಸಿದ್ದು ಕೂಡಲೇ ಪ್ರವಾಸಿಗರ ಜೀವನ ಸಂರಕ್ಷಣೆಗೆ ಮುಂದಾಗಬೇಕಿದೆ. ಪ್ರತಿ ಎರಡ್ಮೂರು ತಿಂಗಳಿಗೊಮ್ಮೆ ಇಲ್ಲಿಗೆ ಈಜಾಡಲು ಬರುವ ದೇಶ ವಿದೇಶಿ ಪ್ರವಾಸಿಗರು ಕೆರೆಯ ನೀರಿನ ಆಳ ಅರಿಯದೇ ಜೀವ ಕಳೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಸಾಣಾಪೂರ ಹತ್ತಿರದ ಕಿಷ್ಕಿಂದಾ ಏಳುಗುಡ್ಡ ಪ್ರದೇಶದಲ್ಲಿ ಹರಿಯುವ ತುಂಗಭದ್ರಾ ಎಡದಂಡೆ ಕಾಲುವೆ ನೀರು ಇಕ್ಕಟಾದ ಸ್ಥಳದಲ್ಲಿ ಹೋಗುವಾಗ ನೈಸರ್ಗಿಕವಾಗಿ ಕೆರೆ ನಿಮಾರ್ಣವಾಗುತ್ತಿದ್ದು ಎರಡು ಕಡೆ  ಬೃಹತ್ ಪ್ರಮಾಣದ ನೀರು ನಿಂತಿರುವುದರಿಂದ  ಎರಡು ಕೆರೆಗಳು ನಿರ್ಮಾಣವಾಗಿವೆ. ಸುತ್ತಲೂ ಗುಡ್ಡ ಕಲ್ಲುಬಂಡೆ ಇರುವುದರಿಂದ ಪ್ರವಾಸಿ ತಾಣವಾಗಿ ಕಳೆದ ಎರಡು ದಶಕಗಳಿಂದ ಆಕರ್ಷಿಣೀಯ ಸ್ಥಳವಾಗಿದೆ. ವಿರೂಪಾಪೂರಗಡ್ಡಿಯಲ್ಲಿ ರೆಸಾರ್ಟ್ ಗಳು ಇದ್ದ ಸಂದರ್ಭದಲ್ಲಿ ವಿದೇಶ ಪ್ರವಾಸಿಗರು ಹಾಗೂ ದೇಶಿಯ ಐಟಿಬಿಟಿ ಉದ್ಯೋಗಿಗಳು ವೀಕ್ ಎಂಡ್ ನೆಪದಲ್ಲಿ ಇಲ್ಲಿಗೆ ಆಗಮಿಸಿ ಇಲ್ಲಿ  ತಂಗಿ ನಿತ್ಯವೂ ಸಾಣಾಪೂರ ಕೆರೆಯಲ್ಲಿ ಈಜಾಡಲು ಮತ್ತು ಬೋಟಿಂಗ್(ತೆಪ್ಪ) ಮಾಡುತ್ತಿದ್ದರು. ಪ್ರವಾಸಿಗರನ್ನು ಸ್ಥಳೀಯ  ಯುವಕರು ಕೆರೆಯಲ್ಲಿ ಬೋಟಿಂಗ್ (ತೆಪ್ಪ ಅಥವಾ ಹರಿಗೋಲಿನಲ್ಲಿ) ಮಾಡಿಸುತ್ತಿದ್ದರು.

ಬೋಟಿಂಗ್ ಮಾಡಿದ ಪೊಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರಿಂದ ಸಾಣಾಪೂರ ಲೇಕ್ ಬೋಟಿಂಗಿಗೆ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ಕಿಷ್ಕಿಂದಾಕ್ಕೆ ಬರುವ ಪ್ರವಾಸಿಗರು ಕೆರೆಯ ಬದಿ ಕಲ್ಲು ಬಂಡೆಗಳ ಮೇಲಿಂದ ನೀರಿಗೆ ಧುಮಿಕಿ ಸಂತೋಷಪಡುತ್ತಿದ್ದರು. ಧುಮುಕುವುದನ್ನು ಪ್ರವಾಸಿಗರಿಗೆ ಕಲಿಸಲು ಮತ್ತು ಬೋಟಿಂಗ್ ನಲ್ಲಿ ಸುತ್ತಾಡಿಸಲು ಸ್ಥಳೀಯ ಕೆಲ ಯುವಕರು ಸಾವಿರಾರು ರೂ.ಗಳನ್ನು ಪಡೆಯುತ್ತಾರೆ. ಸರಿಯಾಗಿ ಈಜಲು ಬಾರದ ಪ್ರವಾಸಿಗರು ಕಲ್ಲಿನ ಮೇಲಿಂದ ಧುಮುಕಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಕೆರೆಯಲ್ಲಿ ಬೋಟಿಂಗ್ ಮತ್ತು ನೀರಿನಲ್ಲಿ ಜಂಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ನೀರಿನ ಆಳ ಗೊತ್ತಿಲ್ಲದ ಹಲವು ಪ್ರವಾಸಿಗರು ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದಾರೆ.

ಜಿಲ್ಲಾಡಳಿತ ಈ ಪ್ರದೇಶವನ್ನು ನಿರ್ವಾಹಣೆ ಮಾಡುವ ಹಂಪಿ ಅಭಿವೃದ್ಧಿ ಪ್ರಾಧಿಕಾರ ಸಾಣಾಪೂರ ಕೆರೆಯ ಸುತ್ತಲೂ ಪ್ರವಾಸಿಗರು ಹೋಗದಂತೆ ಸೂಕ್ತ ಸಿಬ್ಬಂದಿ ನಿಯೋಜನೆ ಮಾಡಬೇಕು. ಇಲ್ಲವೇ ಈಜಾಡಲು ಮತ್ತು ಬೋಟಿಂಗ್ ಮಾಡದಂತೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕಿದೆ. ಕೆರೆಯ ಸುತ್ತ ಆಳೆತ್ತರದ ಕಬ್ಬಿಣದ ತಡೆಗೋಡೆ ನಿರ್ಮಿಸಬೇಕು. ಇಲ್ಲವೇ ಪ್ರವಾಸೋದ್ಯಮ ಇಲಾಖೆಯಿಂದ ಬೋಟಿಂಗ್ ಮತ್ತು ಈಜಾಡಲು ತರಬೇತಿ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಪ್ರವಾಸಕ್ಕೆ ಆಗಮಿಸಿದ ಮತ್ತು ಹೋಳಿ, ನೂತನ ವರ್ಷ, ಸಂಕ್ರಾಂತಿ  ಹಬ್ಬದ ಸಂದರ್ಭದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರು ಪ್ರಾಣ ಕಳೆದುಕೊಳ್ಳುವುದು ಇನ್ನೂ ಹೆಚ್ಚಾಗಬಹುದಾಗಿದೆ.

ಅಕ್ರಮ ಬೋಟಿಂಗ್ ನಿಲ್ಲಿಸಲಿ: ಸಾಣಾಪೂರ ಕೆರೆ ಅತ್ಯಂತ ಅಪಾಯಕಾರಿಯಾಗಿದೆ ಇಲ್ಲಿ ಸದ್ಯ ಬೋಟಿಂಗ್(ತೆಪ್ಪಗಳಲ್ಲಿ) ನಿಷೇಧವಿದ್ದರೂ ಜೀವ ಸಂರಕ್ಷಕ ಸಲಕರಣೆ ಇಲ್ಲದೇ ಸ್ಥಳೀಯ ಕೆಲವರು ಅಕ್ರಮವಾಗಿ ಬೋಟಿಂಗ್ ನಡೆಸುತ್ತಿದ್ದಾರೆ. ಕೆರೆಯಲ್ಲಿ ಮೇಲಿಂದ ಜಂಪಿಂಗ್  ಮಾಡುವ ದೃಶ್ಯ ಮೊಬೈಲ್‌ಗಳಲ್ಲಿ ಸೆರೆ ಹಿಡಿಯಲು ಮೇಲಿಂದ ಜಂಪಿಂಗ್ ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಬಹುತೇಕ ಯುವಕರಾಗಿದ್ದು ಅವರ ಕುಟುಂಬ ಇಡೀ ಜೀವನ ಪರ್ಯಾಂತ ಪರಿತಪಿಸುವಂತಾಗಿದೆ. ಕೂಡಲೇ ಸರಕಾರ ಸಾಣಾಪೂರ ಕೆರೆಯಲ್ಲಿ ಸುರಕ್ಷತಾ ಕ್ರಮಕೈಗೊಳ್ಳಬೇಕು. ಸ್ಥಳೀಯರ ಬೋಟಿಂಗ್ ನಿಷೇಧ ಮಾಡಿದ್ದರೂ ಅರಿಗೋಲಿನಲ್ಲಿ ಪ್ರವಾಸಿಗರನ್ನು ಕೆರೆಯಲ್ಲಿ ಈಜಾಡುವವರ ವಿರುದ್ಧ  ಸ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲಿ ಈಜಾಡಲು ಅವಕಾಶ ನೀಡಬಾರದೆಂದು  ಸ್ಥಳೀಯರಾದ  ಮಹೇಶ ಸಾಗರ ಒತ್ತಾಯಿಸಿದ್ದಾರೆ .

ಕಠಿಣ ಕ್ರಮ: ಸಾಣಾಪೂರ ಕೆರೆಯಲ್ಲಿ ಬೋಟಿಂಗ್ ನಿಷೇಧ ಮಾಡಿ ಹಲವು ಸಲ ಅರಿಗೋಲುಗಳನ್ನು ಸೀಜ್ ಮಾಡಲಾಗಿದೆ. ಸ್ಥಳೀಯರು ರಾಜಕಾರಣಿಗಳ ಪ್ರಭಾವ ಬಳಸಿ ಅರಿಗೋಲು ತೆಗೆದುಕೊಂಡು ಹೋಗಿ ಪುನಹ ಕೆರೆಯಲ್ಲಿ ಅರಿಗೋಲು ಹಾಕುತ್ತಿದ್ದಾರೆ. ಇಲ್ಲಿ ಈಜಾಡಲು ನಿಷೇಧ ಅಪಾಯಕಾರಿ ಎಂದು ಹಲವು ಕಡೆ  ಬರೆಸಿದ್ದರೂ ಇಲ್ಲಿಗೆ ಬರುವ ಪ್ರವಾಸಿಗರು ಕಲ್ಲುಗಳ ಮೇಲಿಂದ ಜಂಪಿಂಗ್ಗ್  ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದು ಅರಿಗೋಲು ಹಾಕುವವರ ವಿರುದ್ಧ ಇನ್ನೂ ನಿರ್ದಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಸಾಣಾಪುರ ಗ್ರಾಪಂ ಪಿಡಿಒ ಬಬಸವರಾಜಗೌಡ ನಾಯಕ ಉದಯವಾಣಿ ಗೆ ತಿಳಿಸಿದ್ದಾರೆ.

-ಕೆ.ನಿಂಗಜ್ಜ

ಟಾಪ್ ನ್ಯೂಸ್

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-gadag

Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್

Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್

Raghvendra-Hitnal

Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್‌ ಶಾಸಕ

Kushtagi-patte

Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.