ವಿದ್ಯಾರ್ಥಿಗಳ ಖಿನ್ನತೆಗೆ ಕಾಲೇಜಲ್ಲೇ ಕೌನ್ಸೆಲಿಂಗ್!
ಪ್ರಾಧ್ಯಾಪಕರಿಗೆ ನಿಮ್ಹಾನ್ಸ್‌ನಿಂದಲೇ ತರಬೇತಿ
Team Udayavani, Oct 21, 2021, 6:30 AM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಕೋವಿಡ್, ಕೌಟುಂಬಿಕ ಸಮಸ್ಯೆ ಮೊದಲಾದ ಕಾರಣಗಳಿಂದ ಖಿನ್ನತೆ ಎದು ರಿಸುತ್ತಿರುವ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲೇ ತಜ್ಞರಿಂದ ಕೌನ್ಸೆಲಿಂಗ್ ಸಿಗಲಿದೆ.
2021-22ನೇ ಸಾಲಿನ ಶೈಕ್ಷಣಿಕ ತರಗತಿಗಳು ಈಗಷ್ಟೇ ಆರಂಭವಾಗುತ್ತಿವೆ. ಕೋವಿಡ್ ಕಾರಣದಿಂದ ಕಳೆದ ಸಾಲಿನಲ್ಲಿ ಭೌತಿಕ ತರಗತಿ ಸರಿಯಾಗಿ ನಡೆದಿಲ್ಲ. ಇದರಿಂದ ಅನೇಕ ವಿದ್ಯಾರ್ಥಿಗಳು ನಾನಾ ರೀತಿಯ ಸಮಸ್ಯೆ ಒಳಗಾಗಿದ್ದಾರೆ. ಆದ್ದರಿಂದ ಕಾಲೇಜುಗಳಲ್ಲೇ ಕೌನ್ಸೆಲಿಂಗ್ ಮೂಲಕ ನೋವಿಗೆ ಪರಿಹಾರ ಕಂಡುಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆಯಿಂದಲೇ ವ್ಯವಸ್ಥೆ ಮಾಡಲಾಗುತ್ತಿದೆ.
ಎನ್‌ಎಸ್‌ಎಸ್ ಘಟಕದ ಮೂಲಕ ಪ್ರತೀ ಕಾಲೇಜಿನಿಂದಲೂ ಒಬ್ಬರು ಅಥವಾ ಇಬ್ಬರು ಪ್ರಾಧ್ಯಾಪಕರಿಗೆ ನಿಮ್ಹಾನ್ಸ್‌ನಲ್ಲಿ ತರಬೇತಿ ನಡೆಯಲಿದೆ. ಬಳಿಕ ಅವರು ಕಾಲೇಜುಗಳಲ್ಲಿ ಕೌನ್ಸೆಲಿಂಗ್ ಆರಂಭಿಸಲಿದ್ದಾರೆ. ಅಲ್ಲದೆ ನಿಮ್ಹಾನ್ಸ್‌ನ ಜಿಲ್ಲಾ ಕೇಂದ್ರದ ಪ್ರತಿನಿಧಿಗಳ ಜತೆ ಸಂಯೋಜನೆ ನಡೆಸಿ, ಅವರನ್ನು ಕಾಲೇಜಿಗೆಕರೆಸಿ, ಅವರಿಂದ ಕೌನ್ಸೆಲಿಂಗ್ ಹಾಗೂ ವಿಶೇಷ ಉಪನ್ಯಾಸ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಅಗತ್ಯ
ನಿರಂತರ ಆನ್‌ಲೈನ್ ತರಗತಿ, ಕೌಟುಂಬಿಕ ಸಮಸ್ಯೆ, ಸ್ನೇಹಿತರೊಂದಿಗೆ ಬೆರೆಯಲು ಸಾಧ್ಯ ವಾಗದೇ ಇರುವುದು ಸೇರಿದಂತೆ ಅನೇಕ ಕಾರಣದಿಂದ ಕಾಲೇಜು ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿರುವ ಸಾಧ್ಯತೆಯಿದೆ.
ಇದನ್ನೂ ಓದಿ:ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’
ಅದರಲ್ಲೂ ಕೋವಿಡ್ ಭಯ ಹಾಗೂ ಮನೆಯ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿರುವ ವಿದ್ಯಾರ್ಥಿಗಳು ಅನೇಕರಿದ್ದಾರೆ. ಅಂಥವರನ್ನು ಗುರುತಿಸಿ, ಸೂಕ್ತ ರೀತಿಯ ಕೌನ್ಸೆಲಿಂಗ್ ನೀಡುವ ಅಗತ್ಯವಿದೆ.
ಎನ್‌ಇಪಿ ಸಲಹೆಯೂ ಸಿಗಲಿದೆ
ಕೌನ್ಸೆಲಿಂಗ್ ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶೈಕ್ಷಣಿಕವಾಗಿ ಆಗುವ ಅನುಕೂಲತೆಗಳ ಬಗ್ಗೆಯೂ ಸಮಗ್ರ ಮಾಹಿತಿ ನೀಡಲಿದ್ದಾರೆ. ಪದವಿ ಮುಗಿದ ಅನಂತರ ಏನು ಮಾಡಬಹುದು, ಸಂಶೋಧನೆ, ಉದ್ಯೋಗ ಇತ್ಯಾದಿ ಎಲ್ಲರ ವಿವರವೂ ಕೌನ್ಸೆಲಿಂಗ್ ವೇಳೆ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.