‘ಇಲ್ಲಿಂದ ಆರಂಭವಾಗಿದೆ…’ ತೆಲುಗು ನಿರ್ಮಾಪಕನ ಕನ್ನಡ ಸಿನಿಮಾ
Team Udayavani, Oct 21, 2021, 8:57 AM IST
“ಇಲ್ಲಿಂದ ಆರಂಭವಾಗಿದೆ’ – ಹೀಗೊಂದು ಸಿನಿಮಾ ಸದ್ದಿಲ್ಲದೇ ಆರಂಭವಾಗಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಟಾಲಿವುಡ್ ನಿರ್ಮಾಪಕ ಬಿ.ನರಸಿಂಹ ರೆಡ್ಡಿ ಸಿನಿಮಾಕ್ಕೆ ಕತೆ ಚಿತ್ರಕತೆ ಬರೆದು ನಿರ್ಮಾಣ ಮಾಡುವುದರ ಜೊತೆಗೆ ರಾಜ್ ಕುಮಾರ್ ಹೆಸರಿನಲ್ಲಿ ಸಿಐಡಿ ಪಾತ್ರವನ್ನು ನಿಭಾಯಿಸಿದ್ದಾರೆ. ಲಕ್ಷಣ ಚಪರ್ಲ ನಿರ್ದೇಶನವಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಎರಡು ಸ್ನೇಹಿತ ಕುಟುಂಬಗಳ ಮಧ್ಯೆ ಮಗ, ಮಗಳನ್ನು ತಂದುಕೊಡಬೇಕೆಂದು ನಿರ್ಣಯ ತೆಗೆದುಕೊಂಡಿರುತ್ತಾರೆ. ಆದರೆ ದುರಳನೊಬ್ಬ ಒಡಕು ತಂದ ಕಾರಣ ಇಬ್ಬರು ಬೇರೆಯಾಗುತ್ತಾರೆ. ಇವರ ಮನಸ್ಸಿನಲ್ಲಿ ಇದ್ದಂತ ಆಸೆ, ಆಕಾಂಕ್ಷೆಗಳು ಈಡೇರುತ್ತದಾ? ಅವರುಗಳು ಮತ್ತೆ ಒಂದಾಗುತ್ತಾರಾ? ಇವೆಲ್ಲವುಗಳು ಸೆಸ್ಪನ್ಸ್, ಹಾರರ್, ನವಿರಾದ ಪ್ರೀತಿ, ಜೊತೆಗೊಂದು ತಾಯಿ ಮಗಳ ಬಾಂಧವ್ಯ ಕತೆಯೊಂದಿಗೆ ಸಾಗುತ್ತದೆ. ಜೊತೆಗೆ ಸತ್ಯ ನ್ಯಾಯಕ್ಕೆ ಎಂದಿಗೂ ಗೆಲುವು ಸಿಗಲಿದೆ ಅಂತ ಹೇಳಲಾಗಿದೆಯಂತೆ.
ಕೀರ್ತಿ ಕೃಷ್ಣ ಈ ಚಿತ್ರದ ನಾಯಕ. ನಿಖೀತಾ ಸ್ವಾಮಿ ಮತ್ತು ಮಧುಬಾಲ ನಾಯಕಿಯರು. ಇವರೊಂದಿಗೆ ಬಾಲಿವುಡ್ ನಟರಾದ ಪ್ರದೀಪ್ ರಾವತ್, ಶಾಹುರಾಜಿ ಶಿಂಧೆ, ದೇವ್‌ಗಿಲ್ ಹಾಗೂ ಕನಕಪುರದ ಸ್ಥಳೀಯ ಪ್ರತಿಭೆಗಳು ನಟಿಸಿದ್ದಾರೆ. ಬೆಂಗಳೂರು, ಮಂಗಳೂರು, ಕನಕಪುರ, ಪಾವಗಡ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಇದನ್ನೂ ಓದಿ:ಭಯ ಹುಟ್ಟಿಸುವ ಭಯಾನಕ ಪಾತ್ರಗಳು : ಭಜರಂಗಿ 2 ಟ್ರೇಲರ್ ಔಟ್
ಚಿತ್ರಕ್ಕೆ ರಾಜ್ ಕಿರಣ್ ಸಂಗೀತ, ಜಯರಾಮ್ ಛಾಯಾಗ್ರಹಣ, ಸೀನು ಸಂಕಲನವಿದೆ. ಪುಷ್ಪ ಫಿಲಂಸ್ ಬ್ಯಾನರ್‌ನಡಿಯಲ್ಲಿ ಈ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Pani movie: ಕನ್ನಡದಲ್ಲಿ ಜೋಜು ಜಾರ್ಜ್ ಪಣಿ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.