ಮೆಟ್ರೋ : ವರ್ಷದಲ್ಲಿ ಸೆಂಚುರಿ
2022ರ ಅಂತ್ಯಕ್ಕೆ ನೂರು ಕಿ.ಮೀ. ಮಾರ್ಗ ಕ್ರಮಿಸುವ ಗುರಿ: ಅಂಜುಂ
Team Udayavani, Oct 21, 2021, 11:07 AM IST
ಬೆಂಗಳೂರು: “ಹಲವಾರು ಏಳು-ಬೀಳುಗಳನ್ನು ಕಂಡ ನಮ್ಮ ಮೆಟ್ರೋ ಮುಂದಿನ ಹಾದಿ ಸ್ವಲ್ಪ ಸುಗಮ ಆಗಿರಲಿದೆ. ಯಾಕೆಂದರೆ, ಹಿಂದಿನ ಅನುಭವ ಎಲ್ಲವನ್ನೂ ಧಾರೆಯೆರೆದು ನಾವು ಮುಂದೆ ಸಾಗುತ್ತಿದ್ದೇವೆ. ವರ್ಷದಲ್ಲಿ ಮೆಟ್ರೋ ತನ್ನ ಜಾಲದಲ್ಲಿ ಸೆಂಚ್ಯುರಿ ಬಾರಿಸಲಿದೆ. ಆಗ, ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಲಿದೆ’.
10 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ ಸಿಎಲ್)ದ ಎಂಡಿ ಅಂಜುಂ ಪರ್ವೇಜ್ ಅವರು “ಉದಯವಾಣಿ’ ಯೊಂದಿಗೆ ತಮ್ಮ ಕಾರ್ಯನಿರ್ವಹಣೆಯ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಹತ್ತು ವರ್ಷಗಳಲ್ಲಿ ನೀವು ಕ್ರಮಿಸಿದ್ದು ಕೇವಲ 56 ಕಿ.ಮೀ. ಮುಂದಿನ 1 ವರ್ಷದಲ್ಲಿ 44 ಕಿ.ಮೀ. ಸಾಧ್ಯವೇ?
ಹಾಗೆ ನಾವು ಹೋಲಿಕೆ ಮಾಡಲು ಆಗುವುದಿಲ್ಲ. ಆರಂಭದಲ್ಲಿ ನಮಗೆ ಅನುಭವದ ಕೊರತೆ ಇತ್ತು. ಮಾರ್ಗ, ಭೂಸ್ವಾಧೀನ, ಮರಗಳ ತೆರವು, ಸುರಂಗದಲ್ಲಿ ಮಣ್ಣಿನ ಲಕ್ಷಣ ಸೇರಿದಂತೆ ಎಲ್ಲವೂ ಹೊಸದಾಗಿತ್ತು. ಈಗ ಆ ಸಮಸ್ಯೆಗಳಿಲ್ಲ. ಎರಡನೇ ಹಂತದಲ್ಲಿ ಭೂಸ್ವಾಧೀನ ಮುಗಿದಿದೆ. ಮರಗಳ ತೆರವಿಗೆ ಇದ್ದ ಅಡತಡೆ ಬಗೆಹರಿ ದಿದೆ. ಟೆಂಡರ್ ಪ್ರಕ್ರಿಯೆಗಳು ಮುಗಿದಿವೆ. ಹಾಗಾಗಿ, ಅನಾಯಾಸ ವಾಗಿ ಪೂರೈಸುತ್ತೇವೆ. ಆ ಮೂಲಕ ಹೈದರಾಬಾದ್ ಮೆಟ್ರೋ ಅನ್ನು ಹಿಂದಿಕ್ಕುತ್ತೇವೆ.
ಈ ನಿಟ್ಟಿನಲ್ಲಿ ನಿಮ್ಮ ಆದ್ಯತೆಯ ಮಾರ್ಗಗಳು ಯಾವುವು? ಆರ್.ವಿ. ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಮೂಲಕ ಬೊಮ್ಮಸಂದ್ರ ಹಾಗೂ ಬೈಯಪ್ಪನಹಳ್ಳಿಯಿಂದ ವೈಟ್ ವಲ್ಡ್ ಆಗಿರುತ್ತದೆ. ತದನಂತರ ತುಮಕೂರು ರಸ್ತೆ ಸೇರ್ಪಡೆಗೊಳ್ಳಲಿದೆ. ಅಷ್ಟೊತ್ತಿಗೆ ನಾವು ನೂರು ಕಿ.ಮೀ. ಸಮೀಪಿಸುತ್ತೇವೆ. ಅಷ್ಟೇ ಅಲ್ಲ, ಮುಖ್ಯ ಮಂತ್ರಿಗಳು ನೀಡಿದ ಡೆಡ್‌ಲೈನ್‌ಗೂ ನಾವು ಬದ್ಧವಾ ಗಿದ್ದು, 2024ಕ್ಕೇ ಎಲ್ಲ 175 ಕಿ.ಮೀ. ಪೂರ್ಣಗೊಳಿಸ ಲಿದ್ದೇವೆ. ಇದಕ್ಕಾಗಿ ಈಗಿನಿಂದಲೇ ಅಧಿಕಾರಿಗಳು, ಗುತ್ತಿಗೆದಾರರಿಗೆ ಹಲವು ಸುತ್ತಿನ ಸಭೆಗಳಲ್ಲಿ ಸೂಚನೆ ನೀಡಲಾಗಿದೆ. ತಯಾರಿಯೂ ನಡೆದಿದೆ.
10 ವರ್ಷಗಳಲ್ಲಿ ಟೆಂಡರ್‌ಗೆ ನೀವು ಸಾಕಷ್ಟು ಕಾಲಹರಣ ಮಾಡಿದ್ದೀರಿ… ಕಾಲಹರಣವೆನ್ನಲಾಗದು. ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಆರಂಭದಲ್ಲಿದ್ದವು. ಅದೆಲ್ಲವನ್ನೂ ದಾಟಿ ನಾವು ಗುರಿ ತಲುಪಿದ್ದೇವೆ. ಅಲ್ಲದೆ, ಹಿಂದಿನ ತಪ್ಪುಗಳು ಪುನರವರ್ತನೆ ಆಗದಂತೆ ನೋಡಿಕೊಂಡಿದ್ದೇವೆ. ಉದಾಹರಣೆಗೆ ಹೊರವರ್ತುಲ ರಸ್ತೆಯಲ್ಲಿ ತ್ವರಿತ ಗತಿಯಲ್ಲಿ ಎಲ್ಲ ಟೆಂಡರ್ ಪ್ರಕ್ರಿಯೆಗಳನ್ನು ಮುಗಿಸಿದ್ದೇವೆ. “2ಬಿ’ಗೆ ಕೂಡ ಶೀಘ್ರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. 3ನೇ ಹಂತದಲ್ಲೂ ಈ ಕ್ರಮವನ್ನು ಅನುಸರಿಸಲಾಗುವುದು.
ಭವಿಷ್ಯದಲ್ಲಿ ಮೆಟ್ರೋ ಜಾಲ ಎಷ್ಟು ವಿಸ್ತರಿಸುವ ಗುರಿ ಇದೆ ಹಾಗೂ ಯಾವಾಗ ಪೂರ್ಣ? ಸುಮಾರು 375 ಕಿ.ಮೀ. ಉದ್ದದ ಮಾಸ್ಟರ್ ಪ್ಲಾನ್ ಈಗಾಗಲೇ ನಮ್ಮ ಬಳಿ ಇದೆ. 2024ಕ್ಕೆ 2ನೇ ಹಂತ ಪೂರ್ಣಗೊಳ್ಳಲಿದೆ. ಅದಕ್ಕೂ ಮೊದಲೇ ಮೂರನೇ ಹಂತಕ್ಕೆ ಅನುಮೋದನೆ ಪಡೆದು, ಟೆಂಡರ್ ಪ್ರಕ್ರಿಯೆ ಶುರು ಮಾಡುವ ಗುರಿ ಇದೆ. ಈ ಮಧ್ಯೆ ಬೇಡಿಕೆ, ಸಂಚಾರದಟ್ಟಣೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ವಿನ್ಯಾಸಗಳನ್ನು ಅಂತಿಮಗೊಳಿಸಲಾಗುವುದು.
ಇದನ್ನೂ ಓದಿ;- 50 ಕೋಟಿ ರೂ.ಯೋಜನೆಗೆ ಗ್ರಹಣ
ಪ್ರಾಪರ್ಟಿ ಡೆವಲಪ್‌ಮೆಂಟ್‌ನಲ್ಲಿ ಮೆಟ್ರೋ ಸಾಕಷ್ಟು ಹಿಂದೆಬಿದ್ದಿದೆಯೇ? ನಿಜ. ಆದರೆ, ಇದುವರೆಗೆ ನಮ್ಮ ಆದ್ಯತೆ ಸಾಧ್ಯವಾದಷ್ಟು ಮಾರ್ಗಗಳ ವಿಸ್ತರಣೆ ಹಾಗೂ ಸೇವೆ ಆಗಿತ್ತು. ಇದಕ್ಕೆ ಪೂರಕವಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗವನ್ನು ವೃದ್ಧಿಸುತ್ತಾ ಹೋಗಬೇಕಾಯಿತು. ಮುಂದಿನ ದಿನಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಸೇರಿದಂತೆ ವಿವಿಧ ಮಾದರಿಗಳಲ್ಲಿ ಇದನ್ನು ಅಭಿವೃದ್ಧಪಡಿಸಲಾಗುವುದು.
ಸಿಲಿಕಾನ್ ಸಿಟಿಯಲಿ ಮೆಟ್ರೋ ವಿಸ್ತರಣೆಗಿರುವ ಅವಕಾಶಗಳ ಬಗ್ಗೆ ಹೇಳಿ?
ಬೆಂಗಳೂರು ಐಟಿ ಹಬ್ ಹಾಗೂ ಶಿಕ್ಷಣದ ಹಬ್ ಆಗಿದೆ. ಇಲ್ಲಿದ್ದಷ್ಟು ಶಿಕ್ಷಣ ಸಂಸ್ಥೆಗಳು, ಟೆಕ್ ಪಾರ್ಕ್‌ಗಳು ಬೇರೆ ಎಲ್ಲಿಯೂ ಇಲ್ಲ. ಅದಕ್ಕೆ ಪೂರಕವಾಗಿ ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿ, ಮೈಸೂರು ರಸ್ತೆ, ತುಮಕೂರು ರಸ್ತೆ ಹೀಗೆ ವಿವಿಧೆಡೆ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕೆ ದೊರೆತೆ ಸ್ಪಂದನೆ ಕೂಡ ನಾವು ನೋಡಿದ್ದೇವೆ. ಆದ್ದರಿಂದ ಮೆಟ್ರೋ ವಿಸ್ತರಣೆಗೆ ಇಲ್ಲಿ ವಿಪುಲ ಅವಕಾಶಗಳಿವೆ. ಇದರ ಅಗತ್ಯತೆಯೂ ಇಲ್ಲಿ ಹೆಚ್ಚಿದೆ. ಯಾಕೆಂದರೆ, ವಿಶ್ವದಲ್ಲಿ ಅತಿಹೆಚ್ಚು ವಾಹನದಟ್ಟಣೆ ಹೊಂದಿರುವ ನಗರ ಕೂಡ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.