![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 21, 2021, 11:40 AM IST
ವಾಷಿಂಗ್ಟನ್: ಕೆಲವೊಮ್ಮೆ ದೃಶ್ಯ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದ ವೇಳೆ ನಡೆಯುವ ಅವಾಂತರದ ಬಗ್ಗೆ ಓದಿರುತ್ತೀರಿ. ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆ ವಾಷಿಂಗ್ಟನ್ ನಲ್ಲಿ ವೀಕ್ಷಕರು ಸ್ಥಳೀಯ ನ್ಯೂಸ್ ಚಾನೆಲ್ ನಲ್ಲಿ ಹವಾಮಾನ ವರದಿ ವೀಕ್ಷಿಸುತ್ತಿದ್ದಾಗ ದಿಢೀರನೆ ಅಶ್ಲೀಲ(ನಗ್ನ) ಚಿತ್ರಗಳ ಕ್ಲಿಪ್ಪಿಂಗ್ ಪ್ರಸಾರವಾದ ಘಟನೆ ನಡೆದಿತ್ತು.
ಇದನ್ನೂ ಓದಿ:ಜೈಲಿಗೆ ಬಂದು ಪುತ್ರನ ಭೇಟಿಯಾದ ಶಾರುಖ್; ಹೈಕೋರ್ಟ್ ನಲ್ಲಿ ಜಾಮೀನು?
ವಾಷಿಂಗ್ಟನ್ ನಲ್ಲಿನ ಸ್ಪೋಕೇನ್ ನಲ್ಲಿರುವ ಸ್ಥಳೀಯ ಸಿಬಿಎಸ್ ಸಂಯೋಜಿತ ಸುದ್ದಿವಾಹಿನಿಯಲ್ಲಿ ಸಂಜೆ 6ಗಂಟೆಗೆ ಹವಾಮಾನ ವರದಿ ಪ್ರಸಾರವಾದ ಸಂದರ್ಭದಲ್ಲಿ 13 ಸೆಕೆಂಡುಗಳ ಅಶ್ಲೀಲ ದೃಶ್ಯ ಪ್ರಸಾರಗೊಂಡಿತ್ತು
ಎಂದು ವರದಿ ತಿಳಿಸಿದೆ.
ಹವಾಮಾನ ತಜ್ಞೆ ಮಿಶೆಲ್ ಬಾಸ್ ಹವಾಮಾನದ ಕುರಿತು ವಿವರಣೆ ನೀಡುತ್ತಿದ್ದಾಗ ಬ್ಯಾಗ್ ಗ್ರೌಂಡ್ ನಲ್ಲಿ ಅಶ್ಲೀಲ ವಿಡಿಯೋ ತುಣುಕು ಪ್ರಸಾರವಾಗುತ್ತಿತ್ತು. ಈ ಸಂದರ್ಭದಲ್ಲಿ ಸಹ ನಿರೂಪಕಿಗೂ ಕೂಡಾ ಅಶ್ಲೀಲ ವಿಡಿಯೋ ಕ್ಲಿಪ್ ಬಗ್ಗೆ ಗಮನಕ್ಕೆ ಬಂದಿರಲಿಲ್ಲವಾಗಿತ್ತು.
ಭಾನುವಾರ ಸಂಜೆ 6ಗಂಟೆ ಸಮಯದಲ್ಲಿ ಹವಾಮಾನ ವರದಿ ಪ್ರಸಾರದ ಸಮಯದಲ್ಲಿ ಪ್ರಕಟವಾದ ಅಸಮರ್ಪಕ ವಿಡಿಯೋಕ್ಕಾಗಿ ಕ್ಷಮೆಯಾಚಿಸುವುದಾಗಿ ರಾತ್ರಿ 11 ಗಂಟೆ ಸುದ್ದಿ ಪ್ರಸಾರದ ವೇಳೆ ಘೋಷಿಸಿತ್ತು ಎಂದು ವರದಿ ವಿವರಿಸಿದೆ.
6ಗಂಟೆಯ ನಮ್ಮ ಸುದ್ದಿ ಪ್ರಸಾರದ ವೇಳೆ ಏನಾದರು ಸಂಭವಿಸಿದ್ದರೆ, ಆ ಬಗ್ಗೆ ಕ್ಷಮೆ ಕೇಳಲು ಬಯಸುತ್ತೇವೆ ಎಂದು ಕೆಆರ್ ಇಎಂ 2 ತಿಳಿಸಿತ್ತು. ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸುವುದಾಗಿ ವೀಕ್ಷಕರಿಗೆ ಭರವಸೆ ನೀಡಿರುವುದಾಗಿ ವರದಿ ಹೇಳಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.