ಜೋಳಕ್ಕೆ ನೀರು ಪೂರೈಸಲು ಆಗ್ರಹಿಸಿ ಧರಣಿ
Team Udayavani, Oct 21, 2021, 12:51 PM IST
ಸಿಂಧನೂರು: ಒಣಗುತ್ತಿರುವ ಜೋಳದ ಬೆಳೆಗೆ ತಕ್ಷಣವೇ ನೀರು ಪೂರೈಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ತಹಶೀಲ್ ಕಚೇರಿ ಎದುರು ರೈತರ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಬಾದರ್ಲಿ ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ಮಾತನಾಡಿ, ಕಳೆದ ಹದಿನೈದು ದಿನಗಳಿಂದ ಜೋಳಕ್ಕೆ ನೀರು ಪೂರೈಸುವಂತೆ, ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಕೇಳಲಾಗುತ್ತಿದೆ. ಆದರೂ, ಯಾರೊಬ್ಬರೂ ಸ್ಪಂದಿಸಿಲ್ಲ. ಕಡಿಮೆ ವೋಲ್ಟೇಜ್ ವಿದ್ಯುತ್ ನೀಡುತ್ತಿರುವುದರಿಂದ ಪಂಪ್‌ಸೆಟ್‌ಗಳು ಕೆಲಸ ಮಾಡುತ್ತಿಲ್ಲ. ಹೀಗೆ ನಿರ್ಲಕ್ಷ್ಯ ತೋರಿದರೆ, ನಾಲ್ಕೈದು ದಿನಗಳಲ್ಲಿ ಬೆಳೆ ಒಣಗುತ್ತವೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡರ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಜನಪ್ರತಿನಿಧಿಗಳು ನಂತರದಲ್ಲಿ ಮರೆತ್ತಿದ್ದಾರೆ. ಒಂದು ವಾರ ನೀರು ಕೊಟ್ಟರೆ, ಜೋಳದ ಬೆಳೆ ಬದುಕುತ್ತವೆ. ಈ ಬಗ್ಗೆ ಗಮನ ಹರಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ಲಿಂಗಪ್ಪ ದಢೇಸುಗೂರು ಮಾತನಾಡಿ, ನೀರಿನ ರಾಜಕೀಯದಲ್ಲಿ ಅಧಿಕಾರಕ್ಕೆ ಬಂದಿರುವ ಶಾಸಕ ವೆಂಕಟರಾವ್ ನಾಡಗೌಡ ಅವರು ರೈತರತ್ತ ತಿರುಗಿ ನೋಡಬೇಕು. ಬೆಳೆ ಒಣಗಿದರೆ, ರೈತರು ಏನು ಮಾಡಬೇಕು. ಅವರನ್ನು ಮೊದಲು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ
ಈ ವೇಳೆ ಎಇಇ ದಾವಲಸಾಬ್, ಸ್ಥಳಕ್ಕೆ ಭೇಟಿ ವಿದ್ಯುತ್ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಹುಸಿ ಭರವಸೆ ನೀಡದಂತೆ ಈ ವೇಳೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಮಂಜುನಾಥ ಭೋಗಾವತಿ ಮನವಿ ಸ್ವೀಕರಿಸಿ, ಜಮೀನುಗಳಿಗೆ ನೀರು ಒದಗಿಸುವಂತೆ ಎಇಇ ಈರಣ್ಣ ಅವರಿಗೆ ಸೂಚನೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಕಾಂಗ್ರೆಸ್ ಮುಖಂಡರಾದ ಬಸನಗೌಡ ಗೋಮರ್ಸಿ, ಶರಣಪ್ಪ ಮಳ್ಳಿ, ನಾಗಪ್ಪ ಗೋಮರ್ಸಿ, ಬಾಬಾ ಖಾದ್ರಿ, ಮರೇಗೌಡ, ಪಂಪನಗೌಡ, ಬೂದಿಹಾಳ ವಿಎಸ್‌ಎಸ್‌ಎನ್ ಅಧ್ಯಕ್ಷ ಮಲ್ಲಯ್ಯ ಮಾಡಸಿರವಾರ ಸೇರಿದಂತೆ ಗೋಮರ್ಸಿ, ಮಾಡಸಿರವಾರ ಸೇರಿದಂತೆ ಇತರೆ ಹಳ್ಳಿಯ ರೈತರು ಇದ್ದರು.
ರೈತ ಮಹಿಳೆಯರಿಂದಲೂ ಆಕ್ರೋಶ
ಜೋಳಕ್ಕೆ ನೀರು ಪೂರೈಸುವಂತೆ ಒತ್ತಾಯಿಸಿದ ಪ್ರತಿಭಟನೆಯಲ್ಲಿ ರೈತ ಮಹಿಳೆಯರು ಪಾಲ್ಗೊಂಡಿದ್ದರು. ಅಧಿಕಾರಿಗಳು ಉತ್ತರ ನೀಡಿದಾಗ ತೃಪ್ತರಾಗದ ಮಹಿಳೆಯರು, ನಾಳೆಯಿಂದಲೇ 54ನೇ ಉಪಾಕಾಲುವೆಯ ಕೊನೆಭಾಗಕ್ಕೆ ನೀರು ಕೊಡಬೇಕೆಂದು ಒತ್ತಾಯಿಸಿದರು. ತಹಶೀಲ್ದಾರ್ ಮನವಿ ಸ್ವೀಕರಿಸಿದ ಬಳಿಕ ಮಹಿಳಾ ಪಿಎಸ್‌ಐರನ್ನು ನೋಡಿದ ರೈತ ಮಹಿಳೆಯರು, ತಮ್ಮ ಸಂಕಷ್ಟ ಹೇಳಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Air Balloon: ಹೈದರಾಬಾದ್‌ನಲ್ಲಿ ಹಾರಿಸಿದ ‘ಏರ್ ಬಲೂನ್’ ಹುಮನಾಬಾದ್ ನಲ್ಲಿ ಬಿತ್ತು…
ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಸರಕಾರದಿಂದ ಅಸಹಕಾರ: ಎಚ್.ಡಿ.ಕುಮಾರಸ್ವಾಮಿ
Bidar ದರೋಡೆ ಕೇಸ್: ಆರೋಪಿಗಳ ಗುರುತು ಪತ್ತೆ, ಶೀಘ್ರ ಬಂಧನ: ಎಡಿಜಿಪಿ ಹರಿಶೇಖರನ್
Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ
Bidar: ಶೂಟೌಟ್: ಸಿಬಂದಿ ಹತ್ಯೆಗೈದು 93 ಲಕ್ಷ ರೂ.ಎಟಿಎಂ ಹಣದ ಪೆಟ್ಟಿಗೆ ಲೂಟಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.