ಆರಂಭಿಕ ಪಂದ್ಯಗಳಿಗೆ ಕೇನ್ ವಿಲಿಯಮ್ಸನ್ ಗೈರು?
Team Udayavani, Oct 22, 2021, 6:21 AM IST
ಅಬುಧಾಬಿ: ಮೊಣಕೈ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ನಾಯಕ ಕೇನ್ ವಿಲಿಯಮ್ಸನ್ ಐಸಿಸಿ ಟಿ20 ವಿಶ್ವಕಪ್ ಸೂಪರ್-12 ಹಂತದ ಮೊದಲ ಕೆಲವು ಪಂದ್ಯಗಳಲ್ಲಿ ಆಡುವುದು ಅನುಮಾನ ಎಂದು ನ್ಯೂಜಿಲ್ಯಾಂಡ್ ತಂಡದ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.
“ಕೇನ್ ವಿಲಿಯಮ್ಸನ್ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಹಾದಿಯಲ್ಲಿ ವೈದ್ಯಕೀಯ ಸಿಬಂದಿ ಕಾರ್ಯ ನಿರ್ವ ಹಿಸುತ್ತಿದೆ. ಆದ್ದರಿಂದ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಆಡಿರಲಿಲ್ಲ. ಅವರ ಅನುಪಸ್ಥಿತಿಗಿಂತ ನಮಗೆ ನಾಯಕನ ಗಾಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿದೆ.
ಇದರ ಹೊರತಾಗಿಯೂ ತಂಡದ ಇನ್ನುಳಿದ ಆಟಗಾರರೊಂದಿಗೆ ಉತ್ತಮ ಸಂಯೋಜನೆಯೊಂದಿಗೆ ಹೋರಾಡುವ ಬಗ್ಗೆ ನಮಗೆ ವಿಶ್ವಾಸವಿದೆ. ಕೇನ್ ಆರಂಭದ ಕೆಲವು ಪಂದ್ಯಗಳಲ್ಲಿ ಆಡುವುದು ಅನುಮಾನ’ ಎಂದು ಗ್ಯಾರಿ ಸ್ಟೆಡ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.