ಶತಕೋಟಿ ಡೋಸ್ ದಾಖಲೆ
Team Udayavani, Oct 22, 2021, 6:20 AM IST
ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ಭಾರತ ಹೊಸ ದಾಖಲೆಯನ್ನೇ ನಿರ್ಮಾಣ ಮಾಡಿದೆ. ಗುರುವಾರ ಬೆಳಗಿನ ವೇಳೆಗೆ ದೇಶದಲ್ಲಿ ಸರಿಯಾಗಿ 100 ಕೋಟಿ ಮಂದಿಗೆ ಕೊರೊನಾ ಲಸಿಕೆ ಡೋಸ್ ನೀಡಲಾಗಿದೆ. ಅಂದರೆ ಜ.16ರಂದು ಲಸಿಕಾ ಪ್ರಕ್ರಿಯೆ ಆರಂಭವಾಗಿದ್ದು, 275 ದಿನಗ ಳಲ್ಲಿ ಶತಕ ಕೋಟಿ ಬಾರಿಸಿದೆ. ಹೆಚ್ಚು ಲಸಿಕೆ ಕೊಟ್ಟ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಪುದುಚೇರಿ ಕಡೆಯ ಸ್ಥಾನದಲ್ಲಿದೆ. ಇದು ಎರಡೂ ಡೋಸ್‌ಗಳನ್ನು ಸೇರಿಸಿ ಹಾಕಿರುವ ಲೆಕ್ಕಾಚಾರ.
ಪ್ರಕ್ರಿಯೆ ನಡೆದುಬಂದ ದಾರಿ… :
ಭಾರತದಲ್ಲಿ ಲಸಿಕಾ ಪ್ರಕ್ರಿಯೆ ಆರಂಭ ಅಷ್ಟೇನೂ ಸಮಾಧಾನಕರವಾಗಿರಲಿಲ್ಲ. ಇದಕ್ಕೆ ಪ್ರಮುಖ ಕಾರಣ ಜನರಲ್ಲಿ ಲಸಿಕೆ ಕುರಿತಾಗಿ ಇದ್ದ ನಿರ್ಲಕ್ಷ್ಯ. ಲಸಿಕೆ ನೀಡುವ ಪ್ರಕ್ರಿಯೆ ಆರಂಭಿಸಿದ ಹೊತ್ತಲ್ಲಿ ದೇಶದಲ್ಲಿ ಕೊರೊನಾ ಮೊದಲನೇ ಅಲೆ ಬಂದು ಹೋಗಿಯಾಗಿತ್ತು. ಇನ್ನೂ ಎರಡನೇ ಅಲೆ ಆರಂಭವಾಗಿರಲಿಲ್ಲ. ಕೊರೊನಾ ಸಂಪೂರ್ಣವಾಗಿ ಹೋಗಿದೆಯೇನೋ ಎಂದು ಭಾವಿಸಿದ್ದ ಜನ, ಲಸಿಕೆ ಪಡೆಯಲು ಹಿಂದೇಟು ಹಾಕಿದರು. ಆ ಸಮಯದಲ್ಲಿ ಕೇಂದ್ರ ಸರಕಾರ, ಉತ್ಪಾದಿಸಿದ್ದ ಲಸಿಕೆಯನ್ನು ಬೇರೆ ದೇಶಗಳಿಗೆ ರಫ್ತು ಮಾಡಲು ಶುರು ಮಾಡಿತ್ತು. ಆದರೆ ಮಾರ್ಚ್ ಅನಂತರದಲ್ಲಿ 2ನೇ ಅಲೆ ಆರಂಭವಾದ ತತ್‌ಕ್ಷಣ ಲಸಿಕೆಗೆ ದಿಢೀರ್ ಬೇಡಿಕೆ ಬಂದಿತು. ಆಗ ಜನರಿಗೆ ಲಸಿಕೆ ಕೊಡಲು ದಾಸ್ತಾನು ಇರಲಿಲ್ಲ. ಈ ಸಂದರ್ಭದಲ್ಲಿ ಒಂದಷ್ಟು ಪ್ರಮಾಣದಲ್ಲಿ ಗೊಂದಲವೂ ಆಯಿತು. 2ನೇ ಅಲೆ ಮುಗಿಯುವ ಹೊತ್ತಿಗೆ, ಲಸಿಕೆ ದಾಸ್ತಾನು ಕೂಡ ಸಾಕಷ್ಟು ಲಭ್ಯವಾಯಿತು. ಇತ್ತೀಚೆಗಷ್ಟೇ ಒಂದೇ ದಿನ 2.5 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಿ ದಾಖಲೆ ನಿರ್ಮಿಸಲಾಗಿದೆ.
ಯಾವ್ಯಾವ ಲಸಿಕೆ? :
ಸದ್ಯ ದೇಶದಲ್ಲಿ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್‌ಗಳನ್ನು ಮಾತ್ರ ನೀಡಲಾಗುತ್ತಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ರಷ್ಯಾದ ಸ್ಪುಟ್ನಿಕ್ ಕೂಡ ಸಿಗುತ್ತಿದೆ. ಆದರೆ ಹೆಚ್ಚಾಗಿ ಬಳಕೆಯಾಗುತ್ತಿರುವುದು ದೇಶೀಯವಾಗಿ ಉತ್ಪಾದಿಸಲಾಗುತ್ತಿರುವ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳನ್ನೇ.
ಕರ್ನಾಟಕದಲ್ಲಿ 6.21 ಕೋಟಿ:
ಸೆಪ್ಟಂಬರ್‌ನಿಂದ ನಡೆದ ಸಾಲು ಸಾಲು ಲಸಿಕೆ ಮೇಳಗಳಿಂದ ಕರ್ನಾಟಕದಲ್ಲಿ ಲಸಿಕೆ ಅಭಿಯಾನ ಸಾಕಷ್ಟು ವೇಗವಾಗಿ ಸಾಗುತ್ತಿದೆ. ಈವರೆಗೂ ರಾಜ್ಯದಲ್ಲಿ ಬರೋಬ್ಬರಿ 6.21 ಕೋಟಿ ಡೋಸ್‌ನಷ್ಟು ಲಸಿಕೆ ಹಂಚಿಕೆ ಮಾಡಲಾಗಿದೆ.
ಮೇಳದಲ್ಲಿ 1 ಕೋಟಿ :
ಆರೋಗ್ಯ ಇಲಾಖೆಯು ಪ್ರತೀ ಬುಧವಾರ ಹಮ್ಮಿಕೊಳ್ಳಲು ನಿರ್ಧರಿಸಿತು. ಸೆಪ್ಟಂಬರ್‌ನಲ್ಲಿ ಪ್ರಧಾನಿ ಮೋದಿ ಹುಟ್ಟು ಹಬ್ಬ ಸೇರಿ ರಾಜ್ಯದಲ್ಲಿ ಐದು ದಿನ ಲಸಿಕೆ ಮೇಳ ನಡೆಯಿತು. ಈ ಮೇಳಗಳಲ್ಲಿಯೇ ಒಂದು ಕೋಟಿಗೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆೆ.
ಜಿಲ್ಲೆ ಡೋಸ್
ಬೆಂಗಳೂರು:
(ಬಿಬಿಎಂಪಿ ಸೇರಿ) 1.46 ಕೋಟಿ
ಬೆಳಗಾವಿ 43.5 ಲಕ್ಷ
ಮೈಸೂರು 31.3 ಲಕ್ಷ
ಬಳ್ಳಾರಿ 24.3 ಲಕ್ಷ
ತುಮಕೂರು 24 ಲಕ್ಷ
ರಾಜ್ಯ ಲಸಿಕೆ ಹಾದಿ
ತಿಂಗಳು ಡೋಸ್
ಜನವರಿ 3.3 ಲಕ್ಷ
ಫೆಬ್ರವರಿ 6.2 ಲಕ್ಷ
ಮಾರ್ಚ್ 38 ಲಕ್ಷ
ಎಪ್ರಿಲ್ 58 ಲಕ್ಷ
ಮೇ 37.8
ಜೂನ್ 88 ಲಕ್ಷ
ಜುಲೈ 75 ಲಕ್ಷ
ಆಗಸ್ಟ್ 1.2 ಕೋಟಿ
ಸೆಪ್ಟಂಬರ್ 1.4 ಕೋಟಿ
ಅಕ್ಟೋಬರ್ (21ರ ವರೆಗೂ) 54 ಲಕ್ಷ
(ನಿತ್ಯ- 2.24 ಲಕ್ಷ ಡೋಸ್ ವಿತರಣೆ)
ಅತೀ ಕಡಿಮೆ ಡೋಸ್ ಕೊಟ್ಟ ರಾಜ್ಯಗಳು :
ಪುದುಚೇರಿ
11,00,117
ನಾಗಾಲ್ಯಾಂಡ್
11,59,233
ಮಿಜೋರಾಂ
12,01,995
ಅರುಣಾಚಲ ಪ್ರದೇಶ
12,67,639
ಚಂಡೀಗಢ
14,37,739
ಮೇಘಾಲಯ
16,72,601
ಅತೀ ಹೆಚ್ಚು ಡೋಸ್ ಕೊಟ್ಟ ರಾಜ್ಯಗಳು :
ಉತ್ತರ ಪ್ರದೇಶ
12,23,62,158
ಮಹಾರಾಷ್ಟ್ರ
9,36,10,561
ಪಶ್ಚಿಮ ಬಂಗಾಲ
6,86,93,594
ಗುಜರಾತ್
6,77,81,319
ಮಧ್ಯ ಪ್ರದೇಶ
6,74,83,387
ಬಿಹಾರ
6,36,08,814
ಕರ್ನಾಟಕ
6,21,45,106
ರಾಜಸ್ಥಾನ
6,10,52,275
18ರಿಂದ 44- ಉತ್ತಮ ಸ್ಪಂದನೆ:
18-44
55,64,75, 276
45-60
27,01,85,858
60+
17,07,25,633
88,20,86,260
ಕೊವಿಶೀಲ್ಡ್
11,42,50,936
ಕೊವ್ಯಾಕ್ಸಿನ್
ಸಾಗಬೇಕಾದ ದಾರಿ ಇನ್ನೂ ಇದೆ… :
ಎರಡೂ ಡೋಸ್‌ಗಳ ಲೆಕ್ಕಾಚಾರದಲ್ಲಿ ನಾವಿಂದು 100 ಕೋಟಿಯ ಗಡಿ ದಾಟಿದ್ದೇವೆ. ಆದರೆ, ಈ ನೂರು ಕೋಟಿಯಲ್ಲಿ ಮೊದಲ ಡೋಸ್ ಪಡೆದವರ ಸಂಖ್ಯೆಯೇ ಶೇ.70ರಷ್ಟಿದೆ. ಆದರೆ, ಮೊದಲನೇ ಮತ್ತು ಎರಡನೇ ಡೋಸ್ ಪಡೆದವರ ಸಂಖ್ಯೆ ಶೇ.30ರಷ್ಟಿದೆ. ಶೇ.70ರಷ್ಟು ಮಂದಿಗೆ ಇನ್ನೂ ಒಂದು ಡೋಸ್ ನೀಡಬೇಕು. ಕೇಂದ್ರ ಸರಕಾರ ಈ ವರ್ಷಾಂತ್ಯದೊಳಗೆ ಈ ಗುರಿ ಮುಟ್ಟಲಿದ್ದೇವೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.