ಸಿಎಂ ಬೊಮ್ಮಾಯಿ ಬಹಿರಂಗ ಕ್ಷಮೆಯಾಚಿಸಲಿ
Team Udayavani, Oct 22, 2021, 2:24 PM IST
ದಾವಣಗೆರೆ: ಮುಖ್ಯಮಂತ್ರಿ ಬಸವರಾಜಬೊಮ್ಮಾಯಿಯವರು ನೈತಿಕ ಪೊಲೀಸ್‌ಗಿರಿಸಮರ್ಥಿಸುವಂತೆ ನೀಡಿರುವ ಹೇಳಿಕೆಯನ್ನು ಕೂಡಲೇಹಿಂಪಡೆದು ಬಹಿರಂಗ ಕ್ಷಮೆ ಯಾಚಿಸಬೇಕುಎಂದು ಒತ್ತಾಯಿಸಿ ಗುರುವಾರ ನೆರಳು ಬೀಡಿಕಾರ್ಮಿಕರ ಯೂನಿಯನ್ ಪದಾಧಿಕಾರಿಗಳು, ಇತರೆಮುಖಂಡರು ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರುಅ. 13 ರಂದು ಮಂಗಳೂರಿನಲ್ಲಿ ನಾವು ನೈತಿಕತೆ ಇಲ್ಲದೆಬದುಕೋಕೆ ಆಗಲ್ಲ. ನಮ್ಮೆಲ್ಲರ ಸಂಬಂಧಗಳು ಮತ್ತುಶಾಂತಿ ಸುವ್ಯವಸ್ಥೆ ನಿಂತಿರುವುದು ನಮ್ಮ ನೈತಿಕತೆ ಮೇಲೆ.ಅದು ಇಲ್ಲದೇ ಹೋದಾಗ ಆ್ಯಕ್ಷನ್-ರಿಯಾಕ್ಷನ್‌ಆಗುತ್ತದೆ.
ಅದು ಸಹಜ ಎಂದು ನೈತಿಕ ಪೊಲೀಸ್‌ಗಿರಿ ಸಮರ್ಥಿಸುವಂತೆ ಹೇಳಿಕೆ ನೀಡಿರುವುದುಅವರು ತೆಗೆದುಕೊಂಡಿರುವಂತಹ ಪ್ರಮಾಣವಚನಕ್ಕೆವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರುದೂರಿದರು.ರಾಜ್ಯದಲ್ಲಿ ಹಿಂದುತ್ವ ಸಂಘಟನೆಗಳ ಮತೀಯಸಂಘರ್ಷದ ಕಾರಣಕ್ಕೆ ಕೋಮು ಸೌಹಾರ್ದತೆ ಹದಗೆಟ್ಟಿದೆ.
ಮಹಿಳೆಯರು, ದಲಿತರು,ಅಲ್ಪಸಂಖ್ಯಾತರನ್ನ ಇನ್ನಷ್ಟು ಪ್ರತ್ಯೇಕಿಸಿ ಮೂಲೆಗುಂಪುಮಾಡಲಾಗುತ್ತಿದೆ. ಭಾತೃತ್ವ ಮತ್ತು ಜಾತ್ಯತೀತತೆ,ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾದಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಇಂತಹಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೀಡಿರುವಆ್ಯಕ್ಷನ್-ರಿಯಾಕ್ಷನ್ ಹೇಳಿಕೆ ನೈತಿಕ ಪೊಲೀಸ್‌ಗಿರಿಮಾಡುವರಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಸಂವಿಧಾನವನ್ನ ಎತ್ತಿ ಹಿಡಿಯಲಿದೆ.ಧರ್ಮ, ಜಾತಿಯ ಹೆಸರಿನಲ್ಲಿ ನಡೆಯುವಅಪರಾಧಗಳನ್ನ ತಡೆಗಟ್ಟಲು ಮತ್ತು ಅಂತಹಅಪರಾಧಗಳಲ್ಲಿ ಭಾಗಿಯಾಗಿದವರ ವಿರುದ್ಧ ಸೂಕ್ತಕ್ರಮ ತೆಗೆದುಕೊಳ್ಳಲಿದೆ ಎಂಬುದನ್ನ ಖಚಿತಪಡಿಸಬೇಕುಎಂದು ಒತ್ತಾಯಿಸಿದರು. ಸರ್ವೋತ್ಛ ನ್ಯಾಯಾಲಯವುಅಂತರ್ಜಾತಿ, ಅಂತರ್ಧರ್ಮಿಯ ವಿವಾಹಗಳನ್ನುರಕ್ಷಿಸಲು ನೀಡಿರುವ ನಿರ್ದೇಶನಗಳ ಪಾಲಿಸಬೇಕು.ನೈತಿಕ ಪೊಲೀಸ್‌ಗಿರಿಯಲ್ಲಿ ತೊಡಗುವವರ ವಿರುದ್ಧಸರ್ಕಾರ ಸೂಕ್ತ ಕ್ತಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಉಪ ವಿಭಾಗಾಧಿಕಾರಿ ಕಚೇರಿಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆಜಬೀನಾ ಖಾನಂ, ಪ್ರಧಾನ ಕಾರ್ಯದರ್ಶಿ ಎಂ. ಕರಿಬಸಪ್ಪ,ಹಿರಿಯ ವಕೀಲ ಅನೀಸ್ ಪಾಷಾ, ಡಿಎಸ್-4 ಅಧ್ಯಕ್ಷಹೆಗ್ಗೆರೆ ರಂಗಪ್ಪ, ಅಬ್ದುಲ್ ಘನಿತಾಹೀರ್, ಅಣ್ಣಯ್ಯ,ಅಣ್ಣಪ್ಪ, ಗುಡ್ಡಪ್ಪ, ಜಯಪ್ಪ, ಶಾಹೀನಾ, ನಸೀÅನ್‌ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.