ಸರ್ಕಾರಿ ನೌಕರರ ಕ್ರೀಡಾಕೂಟದ ಕಲರವ
Team Udayavani, Oct 22, 2021, 2:37 PM IST
ದಾವಣಗೆರೆ: ಬೆಣ್ಣೆ ನಗರಿ, ಶಿಕ್ಷಣ ನಗರಿ, ನಡುಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ, ಪ್ರಥಮಬಾರಿಗೆ ನಡೆಯುತ್ತಿರುವ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಸಕಲರೀತಿಯಲ್ಲಿ ಸಜ್ಜಾಗಿದೆ.
1997 ರಲ್ಲಿ ದಾವಣಗೆರೆ ನೂತನ ಜಿಲ್ಲೆಯಾಗಿ ಅಸ್ತಿತ್ವಕ್ಕೆಬಂದ ನಂತರ ಹಲವಾರು ಕ್ರೀಡಾಕೂಟಗಳು ನಡೆದಿವೆ.ಆದರೆ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆದಿರಲಿಲ್ಲ. ಸರ್ಕಾರಿನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಪಾಲಾಕ್ಷಿ ಅಧಿಕಾರದಅವಧಿಯಲ್ಲಿ ಒದಗಿ ಬಂದಿರುವ ಅವಕಾಶವನ್ನುಸ್ಮರಣೀಯವನ್ನಾಗಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಮಾಡಲಾಗಿದೆ.
ಅ. 22 ರಿಂದ 24 ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿನಡೆಯಲಿರುವ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 2,150 ಮಹಿಳೆಯರುಒಳಗೊಂಡಂತೆ 7,150 ನೌಕರರು ಭಾಗವಹಿಸುವರು.ಎಲ್ಲ ಸ್ಪರ್ಧಿಗಳಿಗೆ ವಸತಿ, ಊಟೋಪಚಾರದ ವ್ಯವಸ್ಥೆಮಾಡಲಾಗಿದೆ.
ಬೆಣ್ಣೆದೋಸೆ ಜೊತೆಗೆ ಕಾರ-ಮಂಡಕ್ಕಿ,ಮಿರ್ಚಿ, ಉತ್ತರ ಮತ್ತು ದಕ್ಷಿಣ ಕರ್ನಾಟಕದ ಊಟಕ್ಕೆಹೆಸರುವಾಸಿಯಾಗಿರುವ ದಾವಣಗೆರೆಯ ಖ್ಯಾತಿಗೆತಕ್ಕಂತೆ ಮೂರು ದಿನಗಳ ಕಾಲ ಊಟೋಪಚಾರನಡೆಯಲಿದೆ.ಶುಕ್ರವಾರ ಸಂಜೆ 4:30ಕ್ಕೆ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಕ್ರೀಡಾ ಮತ್ತು ಸಾಂಸ್ಕೃತಿಕಸ್ಪರ್ಧೆಗಳನ್ನು ಉದ್ಘಾಟಿಸುವರು.
ಕ್ರೀಡೆ ಮತ್ತುಯುವಜನ ಸೇವೆ, ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್,ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಮುಖ್ಯಮಂತ್ರಿಗಳರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ,ಶಾಸಕರಾದ ಎಸ್.ಎ. ರವೀಂದ್ರನಾಥ್, ಶಾಮನೂರುಶಿವಶಂಕರಪ್ಪ, ಎಸ್.ವಿ. ರಾಮಚಂದ್ರ, ಪ್ರೊ| ಎನ್.ಲಿಂಗಣ್ಣ, ಕೆ. ಮಾಡಾಳ್ ವಿರೂಪಾಕ್ಷಪ್ಪ, ವಿಧಾನಪರಿಷತ್ ಸದಸ್ಯರು, ಇತರೆ ಗಣ್ಯರು, ಮುಖಂಡರುಭಾಗಹಿಸುವರು. ಸಂಜೆ 6:30ಕ್ಕೆ ಖ್ಯಾತ ಗಾಯಕರಾದವಿಜಯಪ್ರಕಾಶ್, ಶಮಿತಾ ಮಲಾ°ಡ್, ಚೈತ್ರಾಇತರರು ಸಂಗೀತ ಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮನಡೆಸಿಕೊಡುವರು. 23ರಂದು ಶನಿವಾರ ಸಂಜೆ6:30ಕ್ಕೆ ಚಿತ್ರರಂಗದ ಕಲಾವಿದರು, ಕಾಮಿಡಿ ಕಿಲಾಡಿ,ಸರಿಗಮಪ ಖ್ಯಾತಿಯ ಕಲಾವಿದರಿಂದ ಹಾಸ್ಯ, ನೃತ್ಯ,ಗಾಯನಗಳ ಮನೋರಂಜನಾ ಮಹಾಸಂಗಮ ನಡೆಯಲಿದೆ.
24ರಂದು ಭಾನುವಾರ ಮಧ್ಯಾಹ್ನ 3ಕ್ಕೆಸಮಾರೋಪ ಸಮಾರಂಭವಿದ್ದು, ಬಹುಮಾನ ವಿತರಣೆನಡೆಯಲಿದೆ. ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್,ಹಾಕಿ, ಕಬಡ್ಡಿ, ಟೇಬಲ್‌ಟೆನ್ನಿಸ್, ಟೆನ್ನಿಸ್, ಬ್ಯಾಡ್ಮಿಂಟನ್,ಕೇರಂ, ಚೆಸ್, ಬಾಲ್‌ಬಾÂಡ್ಮಿಂಟನ್, ಟೆನ್ನಿಕಾಯ್r,ಥ್ರೋಬಾಲ್, ಈಜು, ಅಥ್ಲೆಟಿಕ್ಸ್, ಕುಸ್ತಿ, ಭಾರ ಎತ್ತುವ,ಪವರ್ ಲಿμrಂಗ್, ದೇಹದಾಡ್ಯì ಮೊದಲಾದ ಕ್ರೀಡಾಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.ಸಾಂಸ್ಕೃತಿಕ ಸ್ಪರ್ಧೆಗಳ ವಿಭಾಗದಲ್ಲಿ ಹಿಂದೂಸ್ತಾನಿ,ಶಾಸ್ತ್ರೀಯ, ಕರ್ನಾಟಕ, ಲಘು ಶಾಸ್ತ್ರೀಯ, ಜಾನಪದಗೀತೆ, ಕಥಕ್, ಮಣಿಪುರಿ, ಕೂಚುಪುಡಿ, ಒಡಿಸಿ,ಭರತನಾಟ್ಯ, ವಾದ್ಯ ಸಂಗೀತ ಒಳಗೊಂಡಂತೆ ಹಲವಾರುಸಾಂಸ್ಕೃತಿಕ ಸ್ಪರ್ಧೆಗಳು ವಿವಿಧ ಸ್ಥಳಗಳಲ್ಲಿ ನಡೆಯಲಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.