ಕೋವಿಡ್ 3ನೇ ಅಲೆ ಭೀಕರವಾಗಿರದು
ಸೋಂಕು ಎಂಡೆಮಿಕ್ ಆಗಿಲ್ಲವೆಂದು ತಜ್ಞರ ಅಭಿಪ್ರಾಯ
Team Udayavani, Oct 23, 2021, 6:15 AM IST
ಹೊಸದಿಲ್ಲಿ: ಎರಡನೇ ಅಲೆಯಷ್ಟು ಭೀಕರವಾದ ಕೋವಿಡ್ ಅಲೆ ಇನ್ನು ದೇಶದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಿದೆ. ಆದರೆ ಈಗ ಸೋಂಕು ಪ್ರಕರಣ ಕಡಿಮೆಯಾಗಿದೆ ಎಂಬ ಮಾತ್ರಕ್ಕೆ ಸಾಂಕ್ರಾಮಿಕವು “ಸಾಮಾನ್ಯ ಸೋಂಕು'(ಎಂಡೆಮಿಕ್) ಆಗಿ ಪರಿವರ್ತನೆಯಾಗಿದೆ ಎಂದರ್ಥವಲ್ಲ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೀಪಾವಳಿ ಹಬ್ಬವು ಸಮೀಪಿಸುತ್ತಿದ್ದಂತೆ, ತಜ್ಞರಿಂದ ಇಂಥ ಹೇಳಿಕೆ ಹೊರಬಿದ್ದಿದೆ. ಗಂಭೀರವಾದ ಅಲೆಯು ಅಪ್ಪಳಿಸುವ ಸಾಧ್ಯತೆಯಿಲ್ಲ ಎನ್ನುವ ಮೂಲಕ ಸಮಾಧಾನದ ಸುದ್ದಿ ನೀಡಿದರೂ, ಹಬ್ಬಗಳ ವೇಳೆ ಮೈಮರೆಯಬಾರದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
ಶೇ.90 ಪರಿಣಾಮಕಾರಿ: ಫೈಜರ್ ಲಸಿಕೆಯು ಮಕ್ಕಳ ಮೇಲೆ ಶೇ.90ರಷ್ಟು ಪರಿಣಾಮಕಾರಿ ಎಂದು ಅಧ್ಯಯನ ವರದಿ ಹೇಳಿದೆ. 5-11ರ ವಯೋಮಾನದ ಮಕ್ಕಳ ಮೇಲೆ ನಡೆಸಿದ ಪ್ರಯೋಗದಿಂದ ಈ ವಿಚಾರ ತಿಳಿದುಬಂದಿದ್ದು, ಸೋಂಕು ತಡೆಯುವಲ್ಲಿ ಇದು ಶೇ.91ರಷ್ಟು ಪರಿಣಾಮಕತ್ವ ಹೊಂದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಕೇರಳದಲ್ಲಿ ಇನ್ನೂ 2 ವಾರ ಮಳೆ; 9 ಆಣೆಕಟ್ಟಿಗೆ ರೆಡ್, 7 ಜಿಲ್ಲೆಗೆ ಯೆಲ್ಲೋ ಅಲರ್ಟ್
ಚೀನದಲ್ಲಿ ಮತ್ತೆ ಕೋವಿಡ್ ಆತಂಕ
ಚೀನದಲ್ಲಿ ಮತ್ತೊಮ್ಮೆ ಕೋವಿಡ್ ಸೋಂಕು ಅಬ್ಬರಿಸತೊಡಗಿದೆ. ಸತತ 5 ದಿನಗಳಿಂದ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗ ತೊಡಗಿದ್ದು, ಈ ಹಿನ್ನೆಲೆಯಲ್ಲಿ ಚೀನ ಸರಕಾರ ಹಲವು ವಿಮಾನಗಳ ಸಂಚಾರವನ್ನು ರದ್ದು ಮಾಡಿದೆ. ಶಾಲೆಗಳನ್ನು ಮುಚ್ಚಲು ಆದೇಶಿಸಿದೆ. ಜತೆಗೆ ಸಾಮೂಹಿಕ ಕೋವಿಡ್ ಪರೀಕ್ಷೆ ಆರಂಭಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.