ಪಬ್‌ನಲ್ಲಿ ಶಿಳ್ಳೆ ಹೊಡೆದಿದ್ದಕ್ಕೆ ಗಲಾಟೆ
Team Udayavani, Oct 23, 2021, 10:19 AM IST
Representative Image used
ಬೆಂಗಳೂರು: ಪಬ್‌ನಲ್ಲಿ ಶಿಳ್ಳೆ ಹೊಡೆದ ವಿಚಾರಕ್ಕೆ ಗಲಾಟೆ ಉಂಟಾಗಿ ಬೀರು ಬಾಟಲಿನಿಂದ ರಿಯಲ್ ಎಸ್ಟೇಟ್ ಏಜೆಂಟ್ ತಲೆಗೆ ಹೊಡೆದಿರುವ ಘಟನೆ ಎಚ್‌ಎಸ್‌ಆರ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೇಗೂರು ನಿವಾಸಿಯಾಗಿರುವ ರಿಯಲ್ ಎಸ್ಟೇಟ್ ಏಜೆಂಟ್ ಸೂರ್ಯಕಾಂತ್ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಮಾರು 18 ಹೊಲಿಗೆಗಳನ್ನು ಹಾಕಲಾಗಿದೆ ಎಂದು ತಿಳಿದು ಬಂದಿದೆ. ಎಚ್‌ಎಸ್‌ಎಸ್ 3ನೇ ಹಂತದ 17ನೇ ಅಡ್ಡರಸ್ತೆ ಯಲ್ಲಿರುವ ಪಬ್‌ವೊಂದರಲ್ಲಿ ಬುಧವಾರ ರಾತ್ರಿ 9.30ರ ಸುಮಾರಿಗೆ ಕೇರಳ ಮೂಲದ 15 ಮಂದಿ ಯುವಕರು ಬರ್ತಡೇ ಪಾರ್ಟಿ ಮಾಡಲು ಆಗಮಿಸಿದ್ದರು. ಇದೇ ವೇಳೆ ಸೂರ್ಯಕಾಂತ್ ತನ್ನ ಸ್ನೇಹಿತರೊಂದಿಗೆ ಊಟ ಮಾಡಲು ಪಬ್‌ಗ ಹೋಗಿದ್ದರು.
ಇದನ್ನೂ ಓದಿ:- ಈ ಶಾಲಾ ಮಕ್ಕಳಿಗೆ ಮರದ ಕೆಳಗೆ ನಿತ್ಯ ಬೋಧನೆ
ಸೂರ್ಯಕಾಂತ್ ಶೌಚಾಲಯಕ್ಕೆ ಹೋಗಿ ಶಿಳ್ಳೆ ಹೊಡೆದುಕೊಂಡು ಹಾಡು ಹೇಳುತ್ತಿದ್ದ. ಇದನ್ನು ಶೌಚಾಲಯದಲ್ಲಿದ್ದ ಕೇರಳ ಮೂಲಕ ವ್ಯಕ್ತಿ ಮಲ ಯಾಳಂನಲ್ಲಿ ಪ್ರಶ್ನಿಸಿದ್ದಾನೆ. ಇದನ್ನು ಬೈಯುತ್ತಿದ್ದಾನೆ ಎಂದು ಭಾವಿಸಿದ ಸೂರ್ಯಕಾಂತ್, ತಾನು ಏನಾದರೂ ಮಾಡುತ್ತೇನೆ, ನಿನಗೇನು ಎಂದು ಕನ್ನಡದಲ್ಲಿ ಹೇಳಿ ದ್ದಾನೆ. ಹೀಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.
ಹೀಗೆ ಮಾತು ಮುಂದುವರಿದು ಜಗಳಕ್ಕೆ ತಿರುಗಿದ್ದು, ಕೇರಳ ಮೂಲದ ಯುವಕರು ಬಿಯರ್ ಬಾಟಲಿನಿಂದ ಸೂರ್ಯಕಾಂತ್ ತಲೆಗೆ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದ ಸೂರ್ಯಕಾಂತ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ಎಚ್‌ಎಸ್‌ಆರ್ ಠಾಣೆ ಪೊಲೀಸರು, ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.