ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಿಂದ ಮಿತ್ರಾಕ್ಲಿಪ್ ಯಶಸ್ವಿ ಬಳಕೆ
Team Udayavani, Oct 23, 2021, 11:04 AM IST
ಬೆಂಗಳೂರು: ನಗರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ವೈದ್ಯರ ತಂಡ ತೀವ್ರ ತರಹದ ಮಿಟ್ರಲ್ ವಾಲ್ಟ್ ರಿಗರ್ಗಿಟೇಶನ್ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಯಶಸ್ವಿಯಾಗಿ ಮಿತ್ರಾಕ್ಲಿಪ್ ಅಳವಡಿಕೆ ಮಾಡಿದೆ.
ಅಸ್ಸಾಂ ಮೂಲದ 54 ವರ್ಷದ ವ್ಯಕ್ತಿಗೆ ನಾರಾಯಣ ಹೆಲ್ತ್ ಸಿಟಿಯ ಹೃದ್ರೋಗ ವಿಭಾಗದ ಮಿತ್ರಾಕ್ಲಿಪ್ ಪ್ರಕ್ರಿಯೆನ್ನು ಯಶಸ್ವಿಯಾಗಿ ಬಳಕೆ ಮಾಡಿದೆ. ಕಳೆದ ಮೂರು ತಿಂಗಳ ಹಿಂದೆ ರೋಗಿಯು ಸಾಮಾನ್ಯರ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದ. ಆಗ ಅವರಿಗೆ ಉಸಿರಾಟದ ತೊಂದರೆ ಅನುಭವ ಆಗತೊಡಗಿತು. ಅತಿ ಬೇಗನೆ ಆಯಾಸವಾಗುವುದರ ಜತೆಗೆ ಹೆಜ್ಜೆ ಹಾಕಲು ಕೂಡ ಕಷ್ಟವಾಗುತ್ತಿತ್ತು.
ವಿಶ್ರಾಂತಿ ಸಮಯದಲ್ಲೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿತ್ತು. ಆಗ ಅವರು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ದಾಖಲಾದರು. ಕೂಡಲೇ ಆಸ್ಪತ್ರೆಯ ಹೃದಯರೋಗ ತಜ್ಞರು ಪರೀಕ್ಷೆ ನಡೆಸಿ ಮಿತ್ರಕ್ಲಿಪ್ ಸಾಧ್ಯತೆ ಬಗ್ಗೆ ಮೌಲ್ಯಮಾಪನ ಮಾಡಿದರು. ಆಸ್ಪತ್ರೆಯ ನಾನ್ ಇನ್ವೇಸಿವ್ ಕಾರ್ಡಿಯಾಲಜಿ ಮುಖ್ಯಸ್ಥ ಡಾ.ಸತೀಶ್ ಗೋವಿಂದ್ ನೇತೃತ್ವದ ತಂಡ 2ಡಿ ಎಕೋ ಡಾಪ್ಲರ್ ಮೌಲ್ಯಮಾಪನ ನಡೆಸಿತು.
ಇದನ್ನೂ ಓದಿ:- 2023ರಲ್ಲೂ ಬಿಜೆಪಿ ಸರ್ಕಾರ: ಶೆಟ್ಟರ್
ಇದು ರೋಗಿಯ ಮಿತ್ರಕ್ಲಿಪಗೆ ರೋಗಿಯ ಅರ್ಹತೆಯನ್ನು ದೃಢಪಡಿಸಿತು. ಕೂಡಲೇ ರೋಗಿಗಳ ಕುಟುಂಬದವರ ಒಪ್ಪಿಗೆ ಪಡೆದು ಮಿತ್ರಾಕ್ಲಿಪ್ ಅನ್ನು ಯಶಸ್ವಿಯಾಗಿ ಅಳವಡಿಕೆ ಮಾಡಲಾಯಿತು.ಇದು ಸೋರಿಕೆ ತಡೆಯುವುದರ ಜತೆಗೆ ಹೃದಯದ ಮೂಲಕ ಸಾಮಾನ್ಯ ರಕ್ತದ ಹರಿವನ್ನು ಪುನಃ ಸ್ಥಾಪಿಸುತ್ತದೆ.
ಆಸ್ಪತ್ರೆಯ ಹಿರಿಯ ಹೃದ್ರೋಗ ಸಲಹಾ ತಜ್ಞರ ತಂಡದ ಡಾ.ಉದಯ್ ಬಿ ಖಾನೋಲ್ಕರ್, ಹಿರಿಯ ಸಲಹೆಗಾರ ಡಾ.ಭಗೀರಥ್ ರಘುರಾಮನ್, ಡಾ.ಸಂಜಯ್ ಮೆಹ್ರೋತ್ರ ತಂಡ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಉದಯ್ ಬಿ ಖಾನೋಲ್ಕರ್, ಈ ರೋಗಿಯ ಪ್ರಕರಣ ಭಿನ್ನವಾಗಿದೆ.
ಕರ್ನಾಟಕದಲ್ಲಿ ಈ ಪ್ರಕ್ರಿಯೆಗೆ ಒಳಗಾದ ಮೊದಲ ರೋಗಿ ಎಂದು ಪರಿಗಣಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಈ ವೇಳೆ ಸಂತಸ ಹಂಚಿಕೊಂಡ ಅಸ್ಸಾಂ ಮೂಲದ 54 ವರ್ಷದ ರೋಗಿ, ನಾನೀಗ ಕ್ರಿಯಾಶೀಲ ವ್ಯಕ್ತಿಯಾಗಿದ್ದೇನೆ. ಈ ಹಿಂದೆ ಉಸಿರಾಟದ ತೊಂದರೆ ಮತ್ತು ನಿದ್ರಿಗೆ ಅಡ್ಡಿ ಉಂಟಾಗಿತ್ತು. ಈಗ ಸಾಮಾನ್ಯ ಸ್ಥಿತಿಗೆ ಬಂದಿದ್ದು ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.