![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 23, 2021, 1:54 PM IST
ನವದೆಹಲಿ: ʼಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸೈನ್ಸಸ್ʼ (ಐಐಪಿಎಸ್) ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಗುರುವಾರ ಹೊಸ ಜಂಟಿ ಅಧ್ಯಯನದ ಸಂಶೋಧನೆಗಳನ್ನು ಬಿಡುಗಡೆ ಮಾಡಿದೆ. COVID-19 ನಿಂದಾಗಿ ಭಾರತದಲ್ಲಿ 2020 ರಲ್ಲಿ ಜನನದ ಜೀವಿತಾವಧಿಯು ಎರಡು ವರ್ಷಗಳಷ್ಟು ಕಡಿಮೆಯಾಗಿದೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ.
ವಿದ್ಯಾರ್ಥಿ ಲೇಖಕರ ಪ್ರಕಾರ, 35 ರಿಂದ 79 ವಯೋಮಾನದವರಲ್ಲಿ COVID-19 ನಿಂದ ಉಂಟಾದ ಹೆಚ್ಚಿನ ಸಾವುಗಳಿಂದಾಗಿ ಈ ಬದಲಾವಣೆ ಉಂಟಾಗಿವೆ.ಈ ಅಧ್ಯಯನವನ್ನು ಗುರುವಾರ ಬಿಎಂಸಿ ಪಬ್ಲಿಕ್ ಹೆಲ್ತ್ ಎಂಬ ಪೀರ್-ರಿವ್ಯೂಡ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಸಾಂಕ್ರಾಮಿಕ ರೋಗದಿಂದ ಉಂಟಾಗುದ ವ್ಯತಿರಿಕ್ತ ಪರಿಣಾಮದಿಂದಾಗಿ ಮಹಿಳೆಯರಿಗಿಂತ ಪುರುಷರ ಜೀವಿತಾವಧಿಯ ಮೇಲೆ ಹೆಚ್ಚು ಪ್ರಭಾವ ಬೀರಿವೆ.
ಇದನ್ನೂ ಓದಿ:-ಕೂಳೂರು: ನಾಗನ ಕಟ್ಟೆಗೆ ದುಷ್ಕರ್ಮಿಗಳಿಂದ ಹಾನಿ
ಹಿಂದೂಸ್ತಾನ್ ಟೈಮ್ಸ್‌ನ ವರದಿಯು ಐಐಪಿಎಸ್‌ನ ಪತ್ರಿಕೆಯ ಲೇಖಕರಾದ ಸೂರ್ಯಕಾಂತ್ ಯಾದವ್ ಅವರ ಮಾತನ್ನು ಉಲ್ಲೇಖಿಸಿದ್ದಾರೆ. “ಯುವ ಗುಂಪುಗಳ ಸಾವಿನಲ್ಲಿ ಪುರುಷ ಪ್ರಮಾಣವೇ ಹೆಚ್ಚಿದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರು ಬಾಹ್ಯ ವಾತಾವರಣಗಳಿಗೆ ಹೆಚ್ಚು ಒಗ್ಗಿಕೊಂಡಿದ್ದರಿಂದ ಅವರ ಜೀವಿತಾವಧಿ ಕಡಿಮೆಯಾಗಲು ಕಾರಣವಾಗಿರಬಹುದು.” ಎಂದು ಸೂರ್ಯಕಾಂತ್ ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜೀವಿತಾವಧಿಯು ಜನಸಂಖ್ಯೆಯ ಒಟ್ಟಾರೆ ಮರಣ ಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದೆ.
ಈ ಅಧ್ಯಯನವನ್ನು ನಡೆಸಲು, ಲೇಖಕರು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿರುವ COVID-19-ಇಂಡಿಯಾ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಪೋರ್ಟಲ್‌ನಿಂದ ಜನವರಿ 30, 2020 ಮತ್ತು ಡಿಸೆಂಬರ್ 31, 2020 ರ ನಡುವಿನ ಜೀವಿತಾವಧಿ ಡೇಟಾವನ್ನು ಅಧ್ಯಯನಕ್ಕೆ ಪರಿಗಣಿಸಿದ್ದಾರೆ.
“ನಾವು ಈ ದತ್ತಾಂಶ ಸೆಟ್‌ಗಳನ್ನು ಒಟ್ಟುಗೂಡಿಸಿದ್ದೇವೆ ಮತ್ತು ಒಟ್ಟಾರೆಯಾಗಿ ಕೋವಿಡ್ -19 ಸೇರ್ಪಡೆಯೊಂದಿಗೆ ಸಾವಿಗೆ 22 ಕಾರಣಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದೇವೆ. ಕೋವಿಡ್ -19 ರ ಪರಿಣಾಮವನ್ನು ವಿಶ್ಲೇಷಿಸಲು ನಾವು ಲೈಫ್ ಟೇಬಲ್ ವಿಧಾನವನ್ನು ಬಳಸಿದ್ದೇವೆ ಮತ್ತು ಈ ಅಧ್ಯಯನದಿಂದ ಜನರ ಜೀವಿತಾವಧಿಯಲ್ಲಿ ಎರಡು ವರ್ಷಗಳ ಕುಸಿತವನ್ನು ಕಂಡುಕೊಂಡಿದ್ದೇವೆ”ಎಂದು ಯಾದವ್ ಹೇಳಿದರು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.