ಬಿಲ್ ಬಾಕಿ; ಹಾಸ್ಟೆಲ್ ಗಳಿಗೆ ಕರೆಂಟ್ ಕಟ್
ವಾರದಲ್ಲಿ ವಿದ್ಯುತ್ ಬಿಲ್ ಪಾವತಿಸುವ ಗಡುವು ನೀಡಿ, ಪುನಃ ಸಂಪರ್ಕ ಕಲ್ಪಿಸಿದರು.
Team Udayavani, Oct 23, 2021, 9:09 PM IST
ಬಾಗಲಕೋಟೆ: ಹಾಸ್ಟೆಲ್‌ಗಳ ವಿದ್ಯುತ್ ಬಿಲ್ ಲಕ್ಷ ಲಕ್ಷ ಮೊತ್ತದ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ನವನಗರ ಹಾಗೂ ನಗರ ಹೊರ ವಲಯದ ಒಟ್ಟು ಮೂರು ಹಾಸ್ಟೆಲ್‌ಗಳ ವಿದ್ಯುತ್ ಸಂಪರ್ಕ ಹೆಸ್ಕಾಂ ಅಧಿಕಾರಿಗಳು ಕಟ್ ಮಾಡಿದ್ದು, ಇದರಿಂದ ವಿದ್ಯಾರ್ಥಿಗಳು ಪರದಾಡುವಂತಾಯಿತು.
ನವನಗರದ ಡಿಟಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಮೆಟ್ರಿಕ್ ನಂತರ ಮಾದರಿ ವಸತಿ ನಿಲಯ ಹಾಗೂ ಶಿಗಿಕೇರಿ ಬಳಿಯ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳ ವಿದ್ಯುತ್ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಈ ಎಲ್ಲ ಹಾಸ್ಟೆಲ್‌ಗಳಿಗೆ ಮುಖ್ಯಸ್ಥರಂತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಕಚೇರಿಯ ವಿದ್ಯುತ್ ಬಿಲ್ ಬಾಕಿ ಇದ್ದು, ತಾಲೂಕು ಕಚೇರಿ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ಹೀಗಾಗಿ ಮೂರು ಹಾಸ್ಟೆಲ್, ಒಂದು ತಾಲೂಕು ಕಚೇರಿಯ ವಿದ್ಯುತ್ ಸಂಪರ್ಕ ಮಧ್ಯಾಹ್ನವೇ ಕಡಿತಗೊಳಿಸಿದರೂ, ತಡರಾತ್ರಿವರೆಗೂ ಅಧಿಕಾರಿಗಳು, ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಯತ್ನ ಮಾಡಲಿಲ್ಲ.
ಸದ್ಯ ಡಿಪ್ಲೊಮಾ ವಿದ್ಯಾರ್ಥಿಗಳ ಪರೀಕ್ಷೆ ನಡೆದಿದ್ದು, ತಡರಾತ್ರಿವರೆಗೂ ಕರೆಂಟ್ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಯಿತು. ಎಲ್ಲ ವಿದ್ಯಾರ್ಥಿಗಳು, ಆಯಾ ಹಾಸ್ಟೆಲ್ ವಾರ್ಡನ್‌ಗೆ ಮನವಿ ಮಾಡಿದರು. ಎಲ್ಲ ಹಾಸ್ಟೆಲ್ ವಾರ್ಡನ್‌ಗಳು, ನಿಯಮಾನುಸಾರ ವಿದ್ಯುತ್ ಬಾಕಿ ಬಿಲ್ ಪಾವತಿಸಲು, ತಾಲೂಕು ಕಚೇರಿಗೆ ಬಿಲ್ ಸಲ್ಲಿಸಿದ್ದಾರೆ. ತಾಲೂಕು ಕಚೇರಿಯಿಂದ ಖಜಾನೆ ಇಲಾಖೆಗೆ ಆ ಬಿಲ್ ಮೊತ್ತ ವರ್ಗಗೊಳ್ಳಬೇಕು. ಖಜಾನೆ ಇಲಾಖೆಯಿಂದ ಹೆಸ್ಕಾಂಗೆ ಹಣ ಸಂದಾಯವಾಗಬೇಕು. ಇದು ಇಲಾಖೆ ನಿಯಮ. ಆದರೆ, ತಾಲೂಕು ಕಚೇರಿ ಅಧಿಕಾರಿಗಳ ನಿರ್ಲಕ್ಷéದಿಂದ
ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಕರೆಂಟ್ ಇಲ್ಲದೇ ಸಮಸ್ಯೆ ಅನುಭವಿಸಿದರು.
ರಾತ್ರಿವರೆಗೂ ಕರೆಂಟ್ ಬಾರದ ಹಿನ್ನೆಲೆಯಲ್ಲಿ ವಾರ್ಡನ್‌ಗಳ ಸಮೇತ ವಿದ್ಯಾರ್ಥಿಗಳು ತಾಲೂಕು ಕಚೇರಿ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಬಳಿಕ ನವನಗರದ ಹೆಸ್ಕಾಂ ಕಚೇರಿಗೆ ತೆರಳಿ ಮನವಿ ಮಾಡಿದರು. ಹೆಸ್ಕಾಂ ಹಿರಿಯ ಅಧಿ ಕಾರಿಗಳು, ವಿದ್ಯಾರ್ಥಿಗಳು- ವಾರ್ಡನ್‌ಗಳ ಮನವಿ ಮೇರೆಗೆ ವಾರದಲ್ಲಿ ವಿದ್ಯುತ್ ಬಿಲ್ ಪಾವತಿಸುವ ಗಡುವು ನೀಡಿ, ಪುನಃ ಸಂಪರ್ಕ ಕಲ್ಪಿಸಿದರು.
ನಮ್ಮ ಹಾಸ್ಟೆಲ್‌ನಲ್ಲಿ ಒಟ್ಟು 3 ಮೀಟರ್ ಇವೆ. ಗೀಸರ್, ಕೊಳವೆಬಾವಿ ಹಾಗೂ ಹಾಸ್ಟೆಲ್‌ಗೆ ಬಳಸುವ 3 ಮೀಟರ್ ಗಳ ಮಾಸಿಕ ಬಿಲ್ ಸುಮಾರು 20-25 ಸಾವಿರ ಬರುತ್ತದೆ. ಕಳೆದ 2020ರ ನವ್ಹೆಂಬರ್‌ನಿಂದ ಕರೆಂಟ್ ಬಿಲ್ ಬಾಕಿ ಇದ್ದು, ಅದು ಸುಮಾರು 1.80 ಲಕ್ಷವಾಗಿದೆ. ಈ ಬಿಲ್ ಪಾವತಿಸಲು ತಾಲೂಕು ಕಚೇರಿಗೆ ಬಿಲ್ ಸಲ್ಲಿಸಲಾಗಿದೆ. ಪಾವತಿಯಾಗದ ಕಾರಣ, ಹೆಸ್ಕಾಂನಿಂದ ನೋಟಿಸ್ ನೀಡಿ ವಿದ್ಯುತ್ ಕಡಿತಗೊಳಿಸಿದ್ದರು. ಈ ಕುರಿತು ಇಲಾಖೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಶೀಘ್ರ ಬಾಕಿ ಪಾವತಿಸುವುದಾಗಿ ಅಧಿಕಾರಿಗಳು ತಿಳಿಸಿದ್ದು, ಹೆಸ್ಕಾಂ ಅಧಿ ಕಾರಿಗಳಿಗೆ ಮನವಿ ಮಾಡಿಕೊಂಡ ಬಳಿಕ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ ಎಂದು ನವನಗರದ ಹಾಸ್ಟೆಲ್ ವೊಂದರ ವಾರ್ಡನ್ ಪತ್ರಿಕೆಗೆ ತಿಳಿಸಿದರು.
ವಿದ್ಯಾರ್ಥಿಗಳ ಆಕ್ರೋಶ
ಹಾಸ್ಟೆಲ್ ನಿರ್ವಹಣೆಗೆ ಸರ್ಕಾರ ಪ್ರತಿ ತಿಂಗಳು ಅನುದಾನ ನೀಡುತ್ತದೆ. ಕಳೆದ ವರ್ಷ ಹಾಸ್ಟೆಲ್ ನಿರ್ವಹಣೆ ಕೋಟ್ಯಂತರ ಅನುದಾನದಲ್ಲಿ ದುಬಾರಿ ಬೆಲೆಯ ಟಿವಿ, ಫ್ರಿಡ್ಜ್, ತರಕಾರಿ ಇಡುವ ರ್ಯಾಕ್, 300ಕ್ಕೂ ಹೆಚ್ಚು ಬೆಲೆ ಊಟದ ತಟ್ಟೆ ಹೀಗೆಲ್ಲ
ಖರೀದಿಸಿದ ಲೆಕ್ಕ ತೋರಿಸಿದ್ದಾರೆ. ಕೆಲವು ಹಾಸ್ಟೆಲ್‌ಗಳಿಗೆ ಸಾಮಗ್ರಿಗಳೇ ಬಂದಿಲ್ಲ. ಈ ಭ್ರಷ್ಟಾಚಾರದ ಕುರಿತು ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥ ಅಧಿ ಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಬಿಸಿಎಂ ಇಲಾಖೆ ಜಿಲ್ಲಾ ಅಧಿ ಕಾರಿ ಮತ್ತು ತಾಲೂಕು ಅಧಿ ಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ವಿದ್ಯಾರ್ಥಿ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.