ದೇಗುಲ ಹಣ ಹಿಂದೂ ಸಮಾಜೋದ್ಧಾರಕ್ಕಿರಲಿ

ವಿಹಿಂಪ ಕೇಂದ್ರೀಯ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌

Team Udayavani, Oct 24, 2021, 6:57 AM IST

ದೇಗುಲ ಹಣ ಹಿಂದೂ ಸಮಾಜೋದ್ಧಾರಕ್ಕಿರಲಿ

ಬೆಳ್ತಂಗಡಿ: ಸರಕಾರಗಳು ಹಿಂದೂ ದೇವಸ್ಥಾನಗಳ ಮೇಲಿನ ಹಿಡಿತವನ್ನು ಬಿಟ್ಟು ಮರಳಿ ಹಿಂದೂ ಸಮಾಜಕ್ಕೆ ಒಪ್ಪಿಸಬೇಕು. ಅಲ್ಲಿ ಸಂಗ್ರಹ ವಾಗುವ ಹಣವನ್ನು ಹಿಂದೂ ಸಮಾಜದ ಏಳಿಗೆಗೆ ವಿನಿಯೋಗಿಸುವಂತಾಗಬೇಕು ಎಂದು ವಿಶ್ವ ಹಿಂದೂ ಪರಿಷತ್‌ನ ಕೇಂದ್ರೀಯ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಧರ್ಮಸ್ಥಳದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಸರಕಾರಗಳು ಮಸೀದಿ, ಚರ್ಚ್‌, ಗುರುದ್ವಾರಗಳ ಮೇಲೆ ಹಿಡಿತವನ್ನು ಹೊಂದಿಲ್ಲವೋ ಅದೇ ರೀತಿ ಹಿಂದೂ ದೇವಸ್ಥಾನಗಳ ಮೇಲಿನ ಹಿಡಿತ ವನ್ನು ಬಿಟ್ಟು ಬಿಡಬೇಕು. ಇದಕ್ಕಾಗಿ ಕೇಂದ್ರೀಯ ಕಾನೂನನ್ನು ರಚಿಸಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸು ತ್ತೇವೆ. ವಿಹಿಂಪ ದೇಶಾದ್ಯಂತ ಜನಜಾಗರಣ ಅಭಿಯಾನವನ್ನು ಶೀಘ್ರವೇ ಕೈಗೊಳ್ಳಲಿದೆ ಎಂದು ಪ್ರಕಟಿಸಿದರು.

ಕಾಶ್ಮೀರದ ಅಖಂಡತೆ ಅಮರ
ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದ ಮೇಲೆ ಶಾಂತಿ ನೆಲೆಸಿದೆ ಎಂದುಕೊಂಡಿದ್ದೆವು. ಆದರೆ ಕಳೆದ 20 ದಿನಗಳಲ್ಲಿ 3 ದಾಳಿಗಳು ನಡೆದಿದ್ದು 11 ನಾಗರಿಕರ ಹತ್ಯೆಯಾಗಿದೆ. ಇದು ಚಿಂತೆಗೆ ಕಾರಣವಾಗಿದೆ. ಅಲ್ಲಿ ಹಿಂದೂ, ಸಿಕ್ಖರು, ವಲಸಿಗರು ಮತ್ತು ಸರಕಾರದೊಂದಿಗೆ ನಿಷ್ಠೆಯಿಂದ ದುಡಿಯುವ ಮುಸಲ್ಮಾನ ರಿಗೂ ಭಯ ಉಂಟಾಗಿದೆ. ಭಯೋತ್ಪಾದ ಕರ ಹೇಡಿತನದ ಕೃತ್ಯಗಳು ಭಾರತದ ಇಚ್ಛಾಶಕಿ ¤ಯನ್ನು, ಸಂಕಲ್ಪವನ್ನು ಎಂದಿಗೂ ದುರ್ಬಲಗೊಳಿಸಲಾರದು. ನಾವು ಒಂದಾಗಿಯೇ ಇರಲಿದ್ದೇವೆ ಮತ್ತು ಕಾಶ್ಮೀರದ ಅಖಂಡತೆಯನ್ನು ಉಳಿಸಿಕೊಳ್ಳಲಿದ್ದೇವೆ ಎಂದರು.

ಬಾಂಗ್ಲಾ ದೇಶದಲ್ಲಾದ ಹಿಂದೂಗಳ ಮೇಲಿನ ದಾಳಿ ಬಗ್ಗೆ ಚಿಂತೆ ವ್ಯಕ್ತಪಡಿಸಿದ ಅವರು, ಅಲ್ಲಿನ ಸಂವಿಧಾನದ ಪ್ರಕಾರ ಇಸ್ಲಾಂ ರಾಜಧರ್ಮವಾಗಿದ್ದರೂ ಅಲ್ಲಿನ ಹಿಂದೂ, ಬೌದ್ಧ, ಸಿಕ್ಖ್, ಜೈನ, ಕ್ರೈಸ್ತರಿಗೆ ಸಮಾನ ಅಧಿಕಾರ ಹಾಗೂ ಸುರಕ್ಷೆಯನ್ನು ಪ್ರದಾನಿಸಲಾಗಿದೆ. ಆದರೆ ಬಾಂಗ್ಲಾ ಸರಕಾರ ಅದನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಕೇಂದ್ರ ಸರಕಾರವು ಪಾಕಿಸ್ಥಾನ ಮತ್ತು ಬಾಂಗ್ಲಾದ ಮೇಲೆ ರಾಜತಾಂತ್ರಿಕ ಒತ್ತಡ ತಂದು ಅಲ್ಲಿನ ಅಲ್ಪಸಂಖ್ಯಾಕರ ಬಗ್ಗೆ ಕಾಳಜಿ ವಹಿಸುವಂತೆ ಮಂಡಲವು ಆಗ್ರಹಿಸಿದೆ ಎಂದರು.

ಇದನ್ನೂ ಓದಿ:ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ಕೇಂದ್ರೀಯ ಸಹ ಪ್ರ.ಕಾರ್ಯದರ್ಶಿ ಕೋಟೇಶ್ವರ ಶರ್ಮ, ಪ್ರಾಂತ ಸಂಘಟನ ಕಾರ್ಯದರ್ಶಿ ಬಸವರಾಜ್‌, ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ, ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ| ಪ್ರಸನ್ನ ಕೆ., ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಕಾರ್ಯದರ್ಶಿ ಸತೀಶ್‌, ತಾಲೂಕು ಅಧ್ಯಕ್ಷ ದಿನೇಶ್‌ ಚಾರ್ಮಾಡಿ, ಕಾರ್ಯದರ್ಶಿ ಮೋಹನ್‌ ಬೆಳ್ತಂಗಡಿ, ಸಂತೋಷ್‌ ಅತ್ತಾಜೆ, ಸಂಕೇತ್‌ ಉಪಸ್ಥಿತರಿದ್ದರು.

ಮರಳಿ ಮಾತೃಧರ್ಮಕ್ಕೆ ಅಭಿಯಾನ
ದೇಶದಲ್ಲಿ ಅನುಸೂಚಿತ ಪಂಗಡಗಳನ್ನು ಗುರಿಯಾಗಿಸಿ ಮತಾಂತರ ಮಾಡಲಾಗುತ್ತಿದೆ. ಇದನ್ನು ತಡೆಯಲು ಮತ್ತು ಅವರನ್ನು ಮರಳಿ ಮಾತೃಧರ್ಮಕ್ಕೆ ಕರೆತರಲು ವಿಹಿಂಪ ದೊಡ್ಡಮಟ್ಟದ ಅಭಿಯಾನ ಹಮ್ಮಿಕೊಳ್ಳಲಿದೆ. ಉತ್ತರ ಪ್ರದೇಶ, ಗುಜರಾತ್‌, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಅಸ್ಸಾಂ, ಉತ್ತಾರಖಂಡ ರಾಜ್ಯಗಳಲ್ಲಿರುವಂತಂತೆ ಕರ್ನಾಟಕದ ಬಿಜೆಪಿ ಸರಕಾರವೂ ಮತಾಂತರ ಮತ್ತು ಲವ್‌ ಜೆಹಾದ್‌ ಬಗ್ಗೆ ಪರಿಣಾಮಕಾರಿ ಕಾನೂನ್ನು ತರುವ ಬದ್ಧತೆಯನ್ನು ಪ್ರದರ್ಶಿಸಬೇಕು. ಈ ಬಗ್ಗೆ ದೀಪಾವಳಿಯ ಬಳಿಕ ನಾಡಿನ ಸಂತರೊಡಗೂಡಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲಾಗುವುದು ಎಂದು ಅಲೋಕ್‌ ಕುಮಾರ್‌ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಹೆಗ್ಗಡೆ ಅವರು ಸಂತರಾಗಿದ್ದುಕೊಂಡು 54 ವರ್ಷಗಳ ಕಾಲ ಮಹಿಳೆಯರ ಸಶಕ್ತೀಕರಣ, ಕೃಷಿಪರ ಯೋಜನೆ, ಶಿಕ್ಷಣ ಕ್ರಾಂತಿ, ಹಿಂದೂ ಸಮಾಜದ ಒಳಿತಿಗಾಗಿ ಅವರು ವ್ಯಕ್ತಿರೂಪದ ವ್ಯವಸ್ಥೆಯಾಗಿ ಕರ್ತವ್ಯ ನಿಭಾಯಿಸಿದ್ದಾರೆ.
– ಅಲೋಕ್‌ ಕುಮಾರ್‌,
ವಿಹಿಂಪ ಕೇಂದ್ರೀಯ ಕಾರ್ಯಾಧ್ಯಕ್ಷ

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

VHP (2)

ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್‌ ಪ್ರತಿಭಟನೆ

Belthangady: ಯುವತಿ ನಾಪತ್ತೆ

Belthangady: ಯುವತಿ ನಾಪತ್ತೆ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Bantwal: ಬರಿಮಾರು; ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

Bantwal: ಬರಿಮಾರು; ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.