ಭಾಗ್ಯವಂತರು ಮರು ಬಿಡುಗಡೆ
Team Udayavani, Oct 24, 2021, 12:23 PM IST
ವರನಟ ಡಾ. ರಾಜಕುಮಾರ್, ಬಿ. ಸರೋಜಾದೇವಿ, ಅಶೋಕ್, ಬಾಲಕೃಷ್ಣ, ರಾಮಕೃಷ್ಣ, ತೂಗುದೀಪ ಶ್ರೀನಿವಾಸ್, ಮೈನಾವತಿ, ಎಂ. ಎಸ್ ಉಮೇಶ್, ಬಿ. ಜಯಾ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ “ಭಾಗ್ಯವಂತರು’ ಚಿತ್ರದ ಬಗ್ಗೆ ನಿಮಗೆಲ್ಲ ಗೊತ್ತೆ ಇದೆ. 1977ರಲ್ಲಿ ತೆರೆಕಂಡು ಅಂದಿನ ಕಾಲಕ್ಕೆ ಸೂಪರ್ ಹಿಟ್ ಆಗಿದ್ದ, “ಭಾಗ್ಯವಂತರು’ ಚಿತ್ರ ಈಗ ಮತ್ತೆ ಮರು ಬಿಡುಗಡೆಯ ಭಾಗ್ಯ ಪಡೆಯುತ್ತಿದೆ.
ಹೌದು, ನಟ ಕಂ ನಿರ್ಮಾಪಕ ದ್ವಾರಕೀಶ್ ನಿರ್ಮಾಣದಲ್ಲಿ ಮತ್ತು ಹಿರಿಯ ನಿರ್ದೇಶಕ ಭಾರ್ಗವ ನಿರ್ದೇಶನದಲ್ಲಿ ಮೂಡಿಬಂದಿದ್ದ “ಭಾಗ್ಯವಂತರು’ ಚಿತ್ರ, ಸುಮಾರು ನಾಲ್ಕೂವರೆ ದಶಕದ ಬಳಿಕ ಹೊಸ ಹೊಳಪಿನಲ್ಲಿ ತೆರೆಕಾಣುತ್ತಿದೆ. ಈಗಾಗಲೇ “ಭಾಗ್ಯವಂತರು’ ಚಿತ್ರಕ್ಕೆ ಡಿ. ಐ, 7.1 ಟ್ರಾಫಿಕ್ ಸೇರಿದಂತೆ ಅನೇಕ ನವೀನ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ವಿತರಕ ಮುನಿರಾಜು ಇದೇ ನವೆಂಬರ್ ತಿಂಗಳಿನಲ್ಲಿ ನವೀನ ಶೈಲಿಯಲ್ಲಿ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ.
ಇನ್ನು “ಭಾಗ್ಯವಂತರು’ ಚಿತ್ರ ಮರು ಬಿಡುಗಡೆಯಾಗುತ್ತಿರುವುದರ ಬಗ್ಗೆ ಮಾತನಾಡುವ ಹಿರಿಯ ನಿರ್ದೇಶಕ ಭಾರ್ಗವ, “ರಾಜಕುಮಾರ್ ನಟಿಸಿದ್ದ “ಬಬ್ರುವಾಹನ’, “ನಾ ನಿನ್ನ ಮರೆಯಲಾರೆ’, “ಜಗ ಮೆಚ್ಚಿದ ಮಗ’ ಸೇರಿದಂತೆ ಅನೇಕ ಚಿತ್ರಗಳಿಗೆ ಸಿನಿಮಾಗಳಿಗೆ ನಿರ್ದೇಶನ ಮಾಡಿ¨ªೆ. ಹಾಗಾಗಿ ನಮ್ಮಿಬ್ಬರ ನಡುವೆ ವಿಶೇಷ ಪ್ರೀತಿಯಿತ್ತು. ನಿರ್ಮಾಪಕ ದ್ವಾರಕೀಶ್ ಹಾಗೂ ರಾಜಕುಮಾರ್ ಇಬ್ಬರೂ ನೀವೆ ಈ ಚಿತ್ರ ನಿರ್ದೇಶನ ಮಾಡಿ ಎಂದು ಹೇಳಿದ್ದರಿಂದ, ನನ್ನ ಮೊದಲ ನಿರ್ದೇಶನದ ಸಿನಿಮಾ ರಾಜಕುಮಾರ್ ಅವರೊಂದಿಗೆ ಮಾಡುವಂತಾಯ್ತು.
ಇದನ್ನೂ ಓದಿ:- ಅಕ್ರಮ ಚಟುವಟಿಕೆಗಳಿಗೆ ಕಡಿವಾಣ
44ವರ್ಷಗಳ ಹಿಂದೆ ನಾನು ನಿರ್ದೇಶಿಸಿದ್ದ ಮೊದಲ ಸಿನಿಮಾವೇ ಸೂಪರ್ ಹಿಟ್ ಆಯಿತು. ಈಗ ಅದೇ ಸಿನಿಮಾ ಹೊಸ ತಂತ್ರಜ್ಞಾನದಲ್ಲಿ ರಿಲೀಸ್ ಆಗುತ್ತಿರುವುದು ಖುಷಿಯಾಗುತ್ತಿದೆ’ ಎನ್ನುತ್ತಾರೆ. ಸುಮಾರು ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದ ಜೊತೆ ನಂಟು ಹೊಂದಿರುವ “ವಜ್ರೇಶ್ವರಿ ಕಂಬೈನ್ಸ್’ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ, ವಿತರಕನಾಗಿ ಗುರುತಿಸಿಕೊಂಡಿರುವ ಮುನಿರಾಜು “ಭಾಗ್ಯವಂತರು’ ಚಿತ್ರವನ್ನು ರೀ-ರಿಲೀಸ್ ಮಾಡುತ್ತಿದ್ದಾರೆ. ಈಗಾಗಲೇ ರಾಜಕುಮಾರ್ ಅಭಿನಯದ “ಆಪರೇಷನ್ ಡೈಮಂಡ್ ರಾಕೇಟ್’, “ನಾನೊಬ್ಬ ಕಳ್ಳ’ ಹೀಗೆ ಹಲವು ಚಿತ್ರಗಳನ್ನು ಮರು ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಮುನಿರಾಜು ಈಗ “ಭಾಗ್ಯವಂತರು’ ಚಿತ್ರವನ್ನು ಸುಮಾರು 150ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.