ಕೆಆರ್‌ಎಸ್ ಜಲಾಶಯ ಭರ್ತಿಗೆ 3 ಅಡಿ ಬಾಕಿ
10 ಸಾವಿರ ಕ್ಯುಸೆಕ್ ಒಳ ಹರಿವು ಮುಖ್ಯ ಮಂತ್ರಿಗಳ ಬಾಗಿನಕ್ಕೆ ಸಿದ್ಧತೆ ಪ್ರಸ್ತುತ ಜಲಾಶಯದಲ್ಲಿ 121.08 ಅಡಿ ನೀರು
Team Udayavani, Oct 24, 2021, 4:06 PM IST
ಶ್ರೀರಂಗಪಟ್ಟಣ: ಕಳೆದ 15 ದಿನಗಳಿಂದ ಕೊಡಗಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿ ಸಾಕಷ್ಟು ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಕೆಆರ್ ಎಸ್ ಜಲಾಶಯ ಭರ್ತಿಯಾಗಲು ಕೇವಲ 3 ಅಡಿಗಳು ಬಾಕಿ ಇದೆ. ಬಾಗಿನಕ್ಕೆ ಸಿದ್ಧತೆ: ಕಳೆದ ವಾರದಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿ ಹರಿದು ಬಂದು ಕುಸಿದಿದ್ದ ಜಲಾಶಯದ ನೀರಿನ ಮಟ್ಟ ಮತ್ತೆ 121 ಅಡಿಗೆ ಏರಿಕೆ ಕಂಡು ಬರುತ್ತಿದೆ.
ಮುಖ್ಯಮಂತ್ರಿ ಗಳು ಬಾಗಿನ ಅರ್ಪಿಸಲು ಈಗಾಗಲೇ ಕಾವೇರಿ ನೀರಾವರಿ ಇಲಾಖೆಯಿಂದ ಸಿದ್ಧತೆ ಕಾರ್ಯಗಳು ನಡೆದಿದ್ದು, ಬಾಗಿನ ಕಾರ್ಯಕ್ಕೆ ದಿನಾಂಕ ನಿಗದಿ ಮಾಡುವ ಮುನ್ಸೂಚನೆಗಳಿವೆ.
ಭರ್ತಿ ಆಗಲೇ ಇಲ್ಲ: ಕಳೆದ ವಾರದಿಂದ ಜಲಾ ಶಯಕ್ಕೆ ಪ್ರತಿ ದಿನ 10 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿದ್ದು, ಹೀಗೆ ಮುಂದುವರಿ ದರೆ ಮುಂದಿನ ವಾರದಲ್ಲಿ ಗರಿಷ್ಠ ಮಟ್ಟ ತಲುಪಿ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯ ನಡೆ ಯಲಿದೆ. ಹಿಂದೆ ಜಲಾಶಯಕ್ಕೆ ಕಡಿಮೆ ಅಂತರ ದಲ್ಲಿ ನೀರು ಹರಿದು ಬಂದು ಹೆಚ್ಚಿನ ಅಂತರದಲ್ಲಿ ತಮಿಳುನಾಡಿಗೆ ಕಾವೇರಿ ನದಿ ಮೂಲಕ ನೀರು ಹರಿಸಲಾಗಿತ್ತು.
ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ನೀರನ್ನು ಈ ಬಾರಿ ತಮಿಳುನಾಡಿಗೆ ನೀಡಿದ್ದರಿಂದ ಮುಂಗಾರು ಮಳೆ ಇದ್ದರೂ ಸಂಪೂರ್ಣ ಜಲಾಶಯ ಗರಿಷ್ಠ ಮಟ್ಟ ಭರ್ತಿ ಆಗಲೇ ಇಲ್ಲ. ಮುಖ್ಯಮಂತ್ರಿಗಳಿಂದ ಈ ಬಾರಿ ಗೌರಿ ಗಣೇಶನ ಹಬ್ಬಕ್ಕಿಂತಲೂ ಮುಂಚಿತವಾಗಿ ಬಾಗಿನ ಪೂಜೆ ಆಗಬೇಕಿತ್ತು. ಆದರೂ ಈ ವರ್ಷದಲ್ಲಿ ಆಯುಧ ಪೂಜೆ ಹಾಗೂ ತಲಕಾವೇರಿ ತೀಥೋìದ್ಭವದ ನಂತರ ಮುಖ್ಯಂತ್ರಿಗಳಿಂದ ಬಾಗಿನ ಅರ್ಪಿಸುವ ಪೂಜೆ ಕಾರ್ಯ ನಡೆಯುವ ಸಾಧ್ಯತೆಗಳಿವೆ.
ಇದನ್ನೂ ಓದಿ;– 2 ಕೋಟಿ ವಂಚನೆ: ಮಾಲೀಕ ಪರಾರಿ
ದಿನಾಂಕ ನಿಗದಿ ಮಾಡುವ ಕಾರ್ಯದಲ್ಲಿ ಅಧಿಕಾರಿಗಳು ಮುಂದಾಗಿದ್ದು, ತಡವಾಗಿಯಾದರೂ ಮುಖ್ಯಮಂತ್ರಿಗಳಿಂದ ಬಾಗಿನ ಪೂಜೆ ನಡೆಯಲಿದೆ. ಶನಿವಾರದ ಮಟ್ಟ 121.08 ಅಡಿ: ಇದೀಗ ಮತ್ತೇ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗಿ ನೀರಿನ ಮಟ್ಟ ಏರಿಕೆ ಕಂಡು ಬಂದಿದೆ. ಗರಿಷ್ಠ ಮಟ್ಟ ತಲುಪಲು 124.80 ಅಡಿಗಳಿದ್ದು, ಇಂದಿನ ಮಟ್ಟ 121.08 ಅಡಿಗಳು ತುಂಬಿದೆ.
ಜಲಾಶಯ ಒಟ್ಟು 49 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದುವರೆಗೆ ಕೊಡಗಿನಲ್ಲಿ ಹೆಚ್ಚು ಮಳೆ ಯಾಗಿದ್ದರಿಂದ ಜಲಾಶಯಕ್ಕೆ ಶನಿವಾರ ಬೆಳಗ್ಗೆ 10 ಸಾವಿರ ಕ್ಯುಸೆಕ್ ಹೆಚ್ಚು ನೀರು ಹರಿದು ಬರುತ್ತಿದ್ದು, 04 ಸಾವಿರ ಕ್ಯುಸೆಕ್ ನೀರನ್ನು ಕುಡಿಯಲು ಕಾವೇರಿ ನದಿಗೆ ಹಾಗೂ ಬೆಳೆ ಬೆಳೆಯಲು ನಾಲೆಗಳಿಗೆ ಮೂಲಕ ಹರಿಸಲಾಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ 121.08 ಅಡಿ ನೀರಿನ ಮಟ್ಟ, 10,541 ಸಾವಿರ ಕ್ಯುಸೆಕ್ ಜಲಾಶಯಕ್ಕೆ ಒಳ ಹರಿವಾಗಿದ್ದು, 3,818 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇಲ್ಲಿವರೆಗೆ ಜಲಾಶಯದಲ್ಲಿ 45.322ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನು ಮೂರುವರೆ ಟಿಎಂಸಿ ನೀರು ಜಲಾಶಯಕ್ಕೆ ಬೇಕಿದ್ದು, ಈ ವಾರದಲ್ಲಿ ತುಂಬುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.