ಇಂದಿನಿಂದ ಶಾಲೆಯಂಗಳದಲ್ಲಿ ಚಿಣ್ಣರ ಕಲರವ

1ರಿಂದ 5ನೇ ತರಗತಿ ಆರಂಭ; ಶಾಲೆಗಳಲ್ಲಿ ಸಕಲ ಸಿದ್ಧತೆ

Team Udayavani, Oct 25, 2021, 5:02 AM IST

ಇಂದಿನಿಂದ ಶಾಲೆಯಂಗಳದಲ್ಲಿ ಚಿಣ್ಣರ ಕಲರವ

ಮಹಾನಗರ: ಒಂದೂವರೆ ವರ್ಷದಿಂದ ಆನ್‌ಲೈನ್‌ ತರಗತಿಗೆ ಒಗ್ಗಿಕೊಂಡಿದ್ದ ಪುಟಾಣಿಗಳು ಅ. 25ರಿಂದ ಶಾಲೆಯತ್ತ ಹೆಜ್ಜೆ ಇಡಲಿದ್ದು, ಶಾಲೆ ಯಂಗಳ ಇನ್ನು ಮುಂದೆ ಚಿಣ್ಣರ ಕಲರವಕ್ಕೆ ಸಾಕ್ಷಿಯಾಗಲಿದೆ. ಪುಟಾಣಿಗಳನ್ನು ಎದು ರುಗೊಳ್ಳಲು ಎಲ್ಲ ಶಾಲೆಯ ಶಿಕ್ಷಕರು ಕಾತರದಲ್ಲಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಜಿಲ್ಲಾದ್ಯಂತ ತರಗತಿ ಮರು ಆರಂಭಗೊಳ್ಳುತ್ತಿದ್ದು ನಗರ ಪ್ರದೇಶದ ಪ್ರಾಥಮಿಕ ತರಗತಿಗಳು ಮಕ್ಕಳ ಸ್ವಾಗತಕ್ಕೆ ಶಾಲೆಗಳು ಸಜ್ಜಾಗಿವೆ. ಒಂದೂವರೆ ವರ್ಷದಿಂದ ಶಾಲಾ ವಾತಾವರಣದಿಂದ ದೂರವಾಗಿದ್ದ ಪುಟಾಣಿಗಳನ್ನು ಮರಳಿ ಶಾಲಾ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಹೆಗಲೇರಿದೆ. ಅಂತೂ, ಆನ್‌ಲೈನ್‌ ತರಗತಿಗಾಗಿ ಮೊಬೈಲ್‌ ಪರದೆಯಲ್ಲಿ ತಲ್ಲೀನರಾಗಿದ್ದ ಪುಟಾಣಿಗಳು ಇನ್ನು ಮುಂದೆ ಶಾಲೆಯ ಕರಿಹಲಗೆಯತ್ತ ದೃಷ್ಟಿ ಇಡಲಿದ್ದಾರೆ.

ತರಗತಿಗೆ ಆಗಮಿಸುವ ವಿದ್ಯಾರ್ಥಿಗಳ ಥರ್ಮಲ್‌ ಸ್ಕ್ಯಾನಿಂಗ್‌ ಮಾಡುವುದು, ಅವರನ್ನು ಒಂದು ಮೀಟರ್‌ ಅಂತರದಲ್ಲಿ ಕುಳಿತುಕೊಳ್ಳುವಂತೆ ಮಾಡುವುದು, ಪ್ರತಿ ದಿನ ಶಾಲಾ ಕೊಠಡಿಗಳನ್ನು ಸೋಡಿಯಂ ಹೈಪೊಕ್ಲೋರೈಟ್‌ ಸಿಂಪಡಿಸಿ ಸೋಂಕು ರಹಿತಗೊಳಿಸುವುದು ಸಹಿತ ಹೆಚ್ಚು ವರಿ ಕೆಲಸಗಳನ್ನು ಶಾಲಾ ಸಿಬಂದಿ ಕೈಗೊಳ್ಳ ಲಿದ್ದಾರೆ. ಶನಿವಾರ ಹಾಗೂ ರವಿವಾರ ಬಹುತೇಕ ಶಾಲೆಯಲ್ಲಿ ಈ ನಿಟ್ಟಿನಲ್ಲಿ ತಯಾರಿ ಪ್ರಕ್ರಿಯೆ ನಡೆಯಿತು. ಈ ಮಧ್ಯೆ ನಗರದ ಸಿಬಿಎಸ್‌ಇ ಸಹಿತ ಕೆಲವು 1ರಿಂದ 5ನೇ ತರಗತಿ ಶಾಲಾ ತರಗತಿಗಳು ನ. 2ರಿಂದ ಆರಂಭಗೊಳ್ಳಲಿವೆ.

ಈಗಾಗಲೇ ಶಿಕ್ಷಣ ಇಲಾಖೆಯ ಮಾರ್ಗಸೂಚಿಯ ಪ್ರಕಾರ ಗ್ರಾಮೀಣ ಬಾಗದ ಶಾಲೆಗಳಲ್ಲಿ ಗ್ರಾ.ಪಂ., ನಗರ ಪ್ರದೇಶದ ಶಾಲೆಗಳಲ್ಲಿ ತಾಲೂಕು, ಜಿ.ಪಂ., ಮಂಗಳೂರು ಪಾಲಿಕೆ ಸಹಿತ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಶಾಲಾ ಕೊಠಡಿ, ಆವರಣ, ಪೀಠೊಪಕರಣ ಎಲ್ಲವನ್ನೂ ಸ್ವತ್ಛಗೊಳಿಸಿ ಸ್ಯಾನಿಟೈಸಿಂಗ್‌ ಮಾಡಲಾಗಿದೆ. ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳನ್ನು ಹೂ, ಚಾಕೊಲೇಟ್‌ ನೀಡಿ ಸ್ವಾಗತಿಸಲಿದ್ದಾರೆ.

ಇದನ್ನೂ ಓದಿ:ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

ಈಗಾಗಲೇ 6ರಿಂದ 12ನೇ ತರಗತಿ ಆರಂಭವಾಗಿರುವುದರಿಂದ ಸೋಮವಾರ 1ರಿಂದ 5ನೇ ತರಗತಿ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಇನ್ನು ಮುಂದೆ ಮಕ್ಕಳ ಕಲರವ ಕೇಳಿಬರಲಿವೆ.

ಖರೀದಿ ಭರಾಟೆ
ಅ. 25ರಿಂದ 1ರಿಂದ 5ನೇ ತರಗತಿ ತೆರೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಸೇರುವ ಮಕ್ಕಳು, ಈಗಾಗಲೇ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಖರೀದಿಗೆ ಹೆತ್ತವರು ಅಂಗಡಿಗಳಲ್ಲಿ ಮುಗಿಬಿದ್ದಿದ್ದಾರೆ. ಮಂಗ ಳೂರಿನ ವಿವಿಧ ಸಮವಸ್ತ್ರ ಮಾರಾಟದ ಅಂಗಡಿಯಲ್ಲಿ ರವಿವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಸಮವಸ್ತ್ರ ಖರೀದಿಯಲ್ಲಿ ತೊಡಗಿಕೊಂಡ ದೃಶ್ಯ ಕಂಡುಬಂತು.

ಮೂಲ್ಕಿ: 22 ಶಾಲೆಗಳು ಆರಂಭ, ಸಿದ್ಧತೆ ಪೂರ್ಣ
ಮೂಲ್ಕಿ: ಮೂಲ್ಕಿ ಕ್ಲಸ್ಟರ್‌ ವ್ಯಾಪ್ತಿಯ 13 ಹಿರಿಯ ಪ್ರಾಥಮಿಕ ಮತ್ತು ನಾಲ್ಕು ಕಿರಿಯ ಪ್ರಾಥಮಿಕ ಸರ ಕಾರಿ ಅನುದಾನಿತ ಶಾಲೆಗಳ ಹಾಗೂ 5 ಅನು ದಾನೇತರ ಶಾಲೆಗಳು ಸೇರಿ ಒಟ್ಟು 22 ಶಾಲೆಗಳಲ್ಲಿ ಸೋಮವಾರದಿಂದ 1ರಿಂದ 5ನೇ ತರಗತಿ ಮಕ್ಕಳ ಶಾಲೆ ಆರಂಭವಾಗಲಿದೆ.

ಶನಿವಾರದಿಂದಲೇ ಆಯಾ ಶಾಲೆಯ ವ್ಯಾಪ್ತಿಯ ಸ್ಥಳೀಯಾಡಳಿತದ ಸಹಕಾರದಲ್ಲಿ ಸ್ವತ್ಛತೆ ಮಾಡಲಾಗುತ್ತಿದೆ. ಶಾಲೆಗಳಿಗೆ ಸ್ಯಾನಿಟೈಸೇಶನ್‌ ಮಾಡಿ ತರಗತಿಗಳನ್ನು ಸಿದ್ಧ ಪಡಿಸಲಾಗಿದೆ. ಅನುದಾನಿತ ಶಾಲೆಗಳಲ್ಲಿ ಕೂಡ ಸಿದ್ಧತೆ ಕಾರ್ಯ ಹಮ್ಮಿಕೊಳ್ಳಲಾಗಿದೆ.

ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ವಿದ್ಯಾರ್ಥಿಗಳು ತರಗತಿ ಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸೂಚಿಸಲಾ ಗಿದೆ. ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ರೀನ್‌ಗೆ ಒಳಪಡಿಸಿ ಜ್ವರ ಇದ್ದಲ್ಲಿ ಅಂತಹ ಮಕ್ಕಳಿಗೆ ಬೇರೆಯೇ ವ್ಯವಸ್ಥೆ ಮಾಡಲಾಗುತ್ತದೆ. ಸೋಮವಾರದಂದು ಅರ್ಧದಿನ ಮಾತ್ರ ಶಾಲೆ ಇರುವುದರಿಂದ ಬಿಸಿ ಊಟದ ವ್ಯವಸ್ಥೆ ಇರುವುದಿಲ್ಲ. ನ. 2ರಿಂದ ಊಟದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಮೂಲ್ಕಿ ಕ್ಲಸ್ಟರ್‌ ಸಿಆರ್‌ಪಿ ನೀತಾ ತಂತ್ರಿ ಅವರು ಉದಯವಾಣಿಗೆ ತಿಳಿಸಿದ್ದಾರೆ.

ಈಗಾಲೇ ದಾಖಲಾತಿ ಪಡೆದು ಆನ್‌ಲೈನ್‌ ಮೂಲಕ ತರಗತಿ ಪಡೆಯುತ್ತಿದ್ದ ಮಕ್ಕಳು ಹಾಗೂ ಮುಂದೆ ಯಾವುದಾದರೂ ಮಕ್ಕಳು ದಾಖಲಾತಿ ಆಗದೆ ಬಾಕಿ ಇದ್ದಲ್ಲಿ ನ. 30ರೊಳಗೆ ದಾಖಲಾತಿಗೆ ಸರಕಾರ ವಿಶೇಷ ಅವಕಾಶ ನೀಡಿದೆ.

ಟಾಪ್ ನ್ಯೂಸ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.