ಸಿಒಪಿ26 ಶೃಂಗ, ಏನು ಎತ್ತ?
Team Udayavani, Oct 25, 2021, 6:50 AM IST
ಜಾಗತಿಕವಾಗಿ ತಾಪಮಾನ ಹೆಚ್ಚಳ, ಪ್ರಾಕೃತಿಕ ವಿಕೋಪಗಳ ಸಂಖ್ಯೆಯಲ್ಲೂ ಏರಿಕೆ, ಬಿಸಿಗಾಳಿಯ ಸಮಸ್ಯೆ, ಬರಗಾಲ, ಸಮುದ್ರ ಮಟ್ಟದಲ್ಲಿ ಏರಿಕೆ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ. ಇವುಗಳ ನಿವಾರಣೆಗಾಗಿ ಪ್ರತೀ ವರ್ಷವೂ ಭಾರತ, ಅಮೆರಿಕ, ಚೀನ ಒಳಗೊಂಡಂತೆ ಜಗತ್ತಿನ 190 ದೇಶಗಳು ಕಾನ್ಫರೆನ್ಸ್ ಆಫ್ ಪಾರ್ಟೀಸ್ ಶೃಂಗಸಭೆ ನಡೆಯುತ್ತದೆ. ಈ ಬಾರಿ ಸ್ಕಾಟ್‌ಲೆಂಡ್‌ನ ಗ್ಲಾಸ್ಗೋದಲ್ಲಿ ಈ ಸಮ್ಮೇಳನ ನಡೆಯುತ್ತಿದೆ.
1.ಏನಿದು ಸಿಒಪಿ 26?
ಜಾಗತಿಕ ತಾಪಮಾನ ಬದಲಾವಣೆ ವಿಚಾರವಾಗಿ ಪ್ರತಿವರ್ಷವೂ ಸಭೆ ಸೇರಿ, ಇದನ್ನು ಕಡಿಮೆ ಮಾಡಿಕೊಳ್ಳಲು ಒಂದಷ್ಟು ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಇದಕ್ಕೆ ಕಾನ್ಫರೆನ್ಸ್ ಆಫ್ ಪಾರ್ಟೀಸ್ ಎಂದು ಹೆಸರಿಸಲಾಗಿದೆ. ಇದರಲ್ಲಿ 190 ಸದಸ್ಯ ರಾಷ್ಟ್ರಗಳಿವೆ.
2.ಮೊದಲ ಬಾರಿ ನಡೆದಿದ್ದು ಯಾವಾಗ?
1995ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ಮೊದಲ ಸಭೆ ನಡೆಯಿತು. 1997ರಲ್ಲ ಜಪಾನ್‌ನ ಕ್ಯೂಟೋದಲ್ಲಿ ಮೂರನೇ ಸಿಒಪಿ ಶೃಂಗ ನಡೆದು, ಗ್ಯಾಸ್ ಎಮಿಶನ್ ಕಡಿಮೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು.ಇದನ್ನು 2005ರಲ್ಲಿ ಕ್ಯೂಟೋ ಪ್ರೊಟೋಕಾಲ್ ಅನ್ನು ಜಾರಿ ಮಾಡಲು ನಿರ್ಧಾರ ತೆಗೆದುಕೊಳ್ಳಲಾಯಿತು.
3.ಪ್ಯಾರೀಸ್ ಶೃಂಗ ಏಕೆ ಪ್ರಾಮುಖ್ಯ?
2015ರಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದ ಸಿಒಪಿ 21ರಲ್ಲಿ ಬಹುಮುಖ್ಯವಾದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಯಿತು. ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಗೆ ಇಳಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ ಅಮೆರಿಕದ ಈ ಹಿಂದಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪ್ಯಾರಿಸ್ ಒಪ್ಪಂದ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಲ್ಲದೇ, ಜಾಗತಿಕ ತಾಪಮಾನ ಹೆಚ್ಚಲು ಭಾರತ ಮತ್ತು ಚೀನ ದೇಶಗಳೇ ಕಾರಣ ಎಂದು ಹೇಳಿದ್ದರು.
ಇದನ್ನೂ ಓದಿ:ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು
4.ಭಾರತಕ್ಕೆ ಏಕೆ ಮುಖ್ಯ?
ಭಾರತದಲ್ಲಿ ಪ್ರತೀ ವರ್ಷವೂ ಅತಿವೃಷ್ಟಿ ಅಥವಾ ಅನಾವೃಷ್ಟಿಯಾಗುತ್ತಲೇ ಇದೆ. ಜತೆಗೆ ತಾಪಮಾನ ಕಡಿಮೆ ಮಾಡುವ ಒಪ್ಪಂದಕ್ಕೂ ಭಾರತ ಒಪ್ಪಿದೆ. ಆದರೆ, ಈ ನಿಟ್ಟಿನಲ್ಲಿ ಭಾರತ ತೆಗೆದುಕೊಳ್ಳಬಹುದಾದ ಕ್ರಮಗಳಿಗೆ ಅಮೆರಿಕದಂಥ ಮುಂದುವರಿದ ದೇಶಗಳು ಪರಿಹಾರ ನೀಡಬೇಕು ಎಂಬುದು ಭಾರತದ ಒತ್ತಾಯ. ಏಕೆಂದರೆ ಸೋಲಾರ್ ಎನರ್ಜಿ ಬಳಕೆ ಮಾಡಬೇಕು ಎಂದಾದರೆ ಇದಕ್ಕೆ ಬೇಕಾದ ಪರಿಕರಗಳನ್ನು ಮುಂದುವರಿದ ದೇಶಗಳು ಕಡಿಮೆ ಹಣದಲ್ಲಿ ನೀಡಬೇಕು ಎಂಬ ಆಗ್ರಹವಿದೆ. ಇದು ಇನ್ನೂ ಚರ್ಚೆಯ ಹಂತದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.