ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್ ರೆಡಿ
Team Udayavani, Oct 25, 2021, 10:14 AM IST
ಶಿವರಾಜ್ ಕುಮಾರ್ ಅಭಿನಯದ “ಭಜರಂಗಿ-2′ ಚಿತ್ರ ಅ.29ಕ್ಕೆ ಬಿಡುಗಡೆಯಾಗುತ್ತಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ.
ಟ್ರೇಲರ್ ನೋಡಿದವರಿಗೆ ಫ್ಯಾಂಟಸಿ ಲೋಕವೊಂದು ಧರೆಗಿಳಿದಂತೆ ಭಾಸವಾಗುತ್ತಿದೆ. ಈ ಸಂಭ್ರವನ್ನು ಅದ್ಧೂರಿಯಾಗಿ ಆಚರಿಸಲು ಶಿವಣ್ಣ ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ಗ್ಯಾಪ್‌ನ ನಂತರ ಬರುತ್ತಿರುವ ಶಿವಣ್ಣ ಸಿನಿಮಾ.
ಹೌದು, ಶಿವರಾಜ್‌ಕುಮಾರ್ ಅವರ “ದ್ರೋಣ’ ಚಿತ್ರ 2020 ಮಾರ್ಚ್‌ನಲ್ಲಿ ತೆರೆಕಂಡಿತ್ತು. ತೆರೆಕಂಡ ಕೆಲವೇ ದಿನಗಳಲ್ಲಿ ಕೊರೊನಾದಿಂದ ಲಾಕ್‌ಡೌನ್ ಆದ ಕಾರಣ ಹಾಗೂ ಮಾಸ್ ಅಂಶಗಳು ಹೆಚ್ಚು ಇಲ್ಲದ ಕಾರಣ ದೊಡ್ಡ ಮಟ್ಟದಲ್ಲಿ ಸಂಭ್ರಮಿಸಲು ಸಾಧ್ಯವಾಗಿರಲಿಲ್ಲ. ಈಗ “ಭಜರಂಗಿ-2′ ಚಿತ್ರ ಔಟ್ ಅಂಡ್ ಔಟ್ ಹಾಗೂ ಫ್ಯಾಂಟಸಿ ಅಂಶಗಳಿಂದ ಕೂಡಿರುವ ಮೂಲಕ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮೂಲಕ ಮತ್ತೂಂದು ಬಿಗ್ ರಿಲೀಸ್‌ಗೆ “ಭಜರಂಗಿ-2′ ಸಾಕ್ಷಿಯಾಗಲಿದೆ.
ಇದನ್ನೂ ಓದಿ:ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್ ಮೂಡ್‌ಗೆ ದರ್ಶನ್
ಇನ್ನು ಚಿತ್ರದ ಟ್ರೇಲರ್‌ನಲ್ಲಿ ಅದ್ಧೂರಿ ಸೆಟ್‌ಗಳು, ಭಯ ಹುಟ್ಟಿಸುವ ಭಯಾನಕ ಪಾತ್ರಗಳು, ಬೆಂಕಿಯುಗುಳುವ ಕಂಗಳನ್ನು ಕಂಡು ಸಿನಿಪ್ರೇಮಿಗಳ ಕುತೂಹಲ ಹೆಚ್ಚಿದೆ. ಕನ್ನಡಕ್ಕೆ ಹೊಸತೆನಿಸುವ ಈ ಫ್ಯಾಂಟಸಿ ಡ್ರಾಮಾದಲ್ಲಿ ಒಂದಷ್ಟು ವಿಚಿತ್ರ,
ವಿಕ್ಷಿಪ್ತ ಪಾತ್ರಗಳು ಕಾಣಸಿಗುತ್ತವೆ. ಜೊತೆಗೆ ಅಗೋಚರ ಶಕ್ತಿಗಳ ಛಾಯೆ, ಮಾಯೆ ಎಲ್ಲವೂ ಈ ಟ್ರೇಲರ್‌ನಲ್ಲಿವೆ. ಅಲ್ಲಿಗೆ ಈ ಬಾರಿ ಕನ್ನಡಕ್ಕೆ “ಭಜರಂಗಿ-2′ ಒಂದು ಫ್ಯಾಂಟಸಿ ಡ್ರಾಮಾ ಸಿನಿಮಾವಾಗಿ ಪ್ರೇಕ್ಷಕರನ್ನು ರಂಜಿಸಲಿದೆ. ಟ್ರೇಲರ್‌ನಲ್ಲಿ ಶಿವರಾಜ್ ಕುಮಾರ್, “ಭಜರಂಗಿ’ ಲೋಕಿ, ಭಾವನಾ, ಶ್ರುತಿ… ಪ್ರತಿ ಪಾತ್ರಗಳು ರಗಡ್ ಆಗಿಯೇ ಕಾಣಿಸಿಕೊಂಡಿವೆ. ಜೊತೆಗೆ ಇಡೀ ಪರಿಸರ ಕೂಡಾ ಕಥೆಗೆ ಪೂರಕವಾದಂತಿದೆ. ಈ ಎಲ್ಲಾ ಕಾರಣದಿಂದ ಚಿತ್ರದ ಕ್ರೇಜ್ ಹೆಚ್ಚಿರೋದು ಸುಳ್ಳಲ್ಲ. ಎ.ಹರ್ಷ ನಿರ್ದೇಶನದ ಈ ಚಿತ್ರವನ್ನು “ಜಯಣ್ಣ ಫಿಲಂಸ್’ ನಿರ್ಮಿಸಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.