ಬೆಳಗಾವಿಯಲ್ಲಿ ರಾಂಗ್ ರನ್ ವೇ ಮೇಲೆ ವಿಮಾನ ಲ್ಯಾಂಡ್: ತಪ್ಪಿದ ದುರಂತ
Team Udayavani, Oct 25, 2021, 2:31 PM IST
ಬೆಳಗಾವಿ: ಹೈದರಾಬಾದ್ ನಿಂದ ರವಿವಾರ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಮಾನವೊಂದು ತಪ್ಪಾದ ರನ್ ವೇ ಮೇಲೆ ಲ್ಯಾಂಡ್ ಆಗಿದ್ದು ಭಾರೀ ಆತಂಕ ಸೃಷ್ಟಿಸಿತ್ತು.
ನಿಗದಿತ ರನ್ ವೇ ಮೇಲೆ ಲ್ಯಾಂಡ್ ಆಗುವ ಬದಲು ನಿರ್ಗಮಿಸುವ ಸ್ಥಳದಲ್ಲಿ ಲ್ಯಾಂಡ್ ಆಗಿ ಅವಾಂತರ ಸೃಷ್ಟಿಸಿದ್ದು, ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಸುರಕ್ಷಿತವಾಗಿ ಈ ಸ್ಪೈಸ್ ಜೆಟ್ ವಿಮಾನ ತೆರಳಿದೆ.
ಹೈದರಾಬಾದ್ ದಿಂದ ಬೆಳಗಾವಿಗೆ ಬಂದ ಸ್ಪೈಸ್ ಜೆಟ್ ವಿಮಾನ ರವಿವಾರ ಬೆಳಗ್ಗೆ 11:26ಕ್ಕೆ ಲ್ಯಾಂಡ್ ಆಗಿದ್ದು, ಸುರಕ್ಷಿತವಾಗಿ 12:05ಕ್ಕೆ ನಿರ್ಗಮನಗೊಂಡಿದೆ.
ಇದನ್ನೂ ಓದಿ:ಮಡಿಕೇರಿ: ಪಾಕ್ ವಿರುದ್ಧ ಭಾರತಕ್ಕೆ ಸೋಲು; ಹೃದಯಾಘಾತದಿಂದ ಕ್ರೀಡಾಭಿಮಾನಿ ಸಾವು
ರಾಂಗ್ ರನ್ ವೇದಲ್ಲಿ ಲ್ಯಾಂಡ್ ಆಗಿದ್ದರಿಂದ ಕೆಲಕಾಲ ಆತಂಕ ಸೃಷ್ಟಿಸಿತ್ತು. ಅನಾಹುತವೊಂದು ತಪ್ಪಿದಂತಾಗಿದೆ.
ವಿಮಾನ ನಿಲ್ದಾಣದ 26 ನೇ ರನ್ ವೇದಲ್ಲಿ ಲ್ಯಾಂಡ್ ಆಗಬೇಕಿದ್ದ ಈ ವಿಮಾನ 8ರ ರನ್ ವೇದಲ್ಲಿ ಲ್ಯಾಂಡ್ ಆಗಿದೆ. ಈ ಬಗ್ಗೆ ವಿಮಾನ ಅವಘಾತ ತನಿಖಾ ದಳದಿಂದ ತನಿಖೆ ಆರಂಭಗೊಂಡಿದೆ. ಪೈಲಟ್ ಗಳನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಬೆಳಗಾವಿ ವಿಮಾನ ನಿಲ್ದಾಣ ನಿರ್ದೇಶಕ ರಾಜೇಶ ಮೌರ್ಯ ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
Belagavi: ಯುವಕನ ಮೇಲೆ ಗುಂಡಿನ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.