ಟ್ರೇಲರ್ನಲ್ಲಿ ‘ಪೆದ್ದು ನಾರಾಯಣ’ ದರ್ಶನ
Team Udayavani, Oct 25, 2021, 2:49 PM IST
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಪೆದ್ದು ನಾರಾಯಣ’ ಚಿತ್ರದ ಮೊದಲ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಲವ್ ಕಂ ಆ್ಯಕ್ಷನ್ ಕಥಾಹಂದರ ಹೊಂದಿರುವ “ಪೆದ್ದು ನಾರಾಯಣ’ ಚಿತ್ರದಲ್ಲಿ ಸಿನಿಮಾದಲ್ಲಿ ಶ್ರೀರತ್ನಕರ್, ವಿಷ್ಣುಪ್ರಿಯಾ, ಸುರಕ್ಷಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಸಂತೋಷ್ ನಾರಾಯಣ್ ಶೆಟ್ಟಿ, ಶೋಭರಾಜ್, ಕಿಶೋರ್, ಜೈ ಜಗದೀಶ್, ಅವಿನಾಶ್, ವೀಣಾ ಸುಂದರ್, ಸುನಂದ ಶರಣಪ್ಪ, ಸೋನು ಆರ್.ಅಶೋಕ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಗಂಗಾಗುರು ಕಂಬೈನ್ಸ್’ ಬ್ಯಾನರ್ನಲ್ಲಿ ಕೆ. ವಾಸುದೇವ್ ಅರ್ಪಿಸಿ, ಭೀಮರೆಡ್ಡಿ ನಿರ್ಮಿಸುತ್ತಿರುವ “ಪೆದ್ದು ನಾರಾಯಣ’ ಚಿತ್ರಕ್ಕೆ ಉತ್ತರ ಕರ್ನಾಟಕ ಮೂಲದ ರಘು ಎ. ರೂಗಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ಹಲವು ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿ ಅನುಭವವಿರುವ ರಘು ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈಗಾಗಲೇ ಚಿತ್ರದ 60%ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಇದೇ ವೇಳೆ ಚಿತ್ರತಂಡ “ಪೆದ್ದು ನಾರಾಯಣ’ನ ಮೊದಲ ಟ್ರೇಲರ್ ಅನ್ನು ಹಿರಿಯ ಕಲಾವಿದ ಕೀರ್ತಿರಾಜ್ ಅವರಿಂದ ಬಿಡುಗಡೆಗೊಳಿಸಿತು. ನಟ ಚಂದು ಗೌಡ ಮೊದಲಾದವರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು.
ಇದನ್ನೂ ಓದಿ:ಶಿವಾಜಿ ಸುರತ್ಕಲ್-2: ಮೇಘನಾ ಗಾಂವ್ಕರ್ ಎಂಟ್ರಿ
ಚಿಕ್ಕಮಗಳೂರು, ಹೊನ್ನಾವರ, ಕುಮಟ,ಹಾಸನ, ಗೋಕಾಕ್, ಧಾರವಾಡ, ದಾಂಡೇಲಿ, ರಾಜಸ್ತಾನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. “ಪೆದ್ದು ನಾರಾಯಣ’ ಸಿನಿಮಾದಲ್ಲಿ ಸತೀಶ್ (ಗಂಗಾವತಿ) ಹಾಗೂ ರಘು ರೂಗಿ ಛಾಯಾಗ್ರಹಣವಿದೆ. ಇನ್ನು “ಪೆದ್ದು ನಾರಾಯಣ’ ಚಿತ್ರಕ್ಕೆ ಶ್ರೀಶಸ್ತ್ರ ಸಂಗೀತ, ಚಿತ್ರಕ್ಕೆ ಡಾ. ವಿ ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್ ಮೊದಲಾದವರ ಸಾಹಿತ್ಯವಿದೆ. ಚಿತ್ರಕ್ಕೆ ಎನ್. ಎಂ ವಿಶ್ವ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.