ಹೊಸ ಐಪಿಎಲ್ ತಂಡಕ್ಕಾಗಿ ಪೈಪೋಟಿ: ಅಂತಿಮ ಬಿಡ್ ನಲ್ಲಿ 10 ಕಂಪನಿಗಳು
Team Udayavani, Oct 25, 2021, 3:27 PM IST
ದುಬೈ: ಮುಂದಿನ ಆವೃತ್ತಿಯ ಐಪಿಎಲ್ ಕೂಟಕ್ಕೆ ಬಿಸಿಸಿಐ ಸಿದ್ದತೆ ಆರಂಭಿಸಿದೆ. ಮುಂದಿನ ಆವೃತ್ತಿಯಿಂದ ಎರಡು ತಂಡಗಳು ಸೇರ್ಪಡೆಯಾಗುವ ಕಾರಣ ಅದರ ಆಯ್ಕೆ ಪ್ರಕ್ರಿಯೆ ಇಂದು ದುಬೈನಲ್ಲಿ ನಡೆಯುತ್ತಿದೆ.
ಒಟ್ಟು 22 ಕಂಪನಿಗಳು ಟೆಂಡರ್ ಪಡೆದಿದ್ದು, ಅದರಲ್ಲಿ 10 ಕಂಪನಿಗಳ ಹೆಸರು ಅಂತಿಮ ಸುತ್ತಿನಲ್ಲಿದೆ. ಅಹಮದಾಬಾದ್, ಲಕ್ನೋ, ಕಟಕ್, ಧರ್ಮಶಾಲಾ, ಗುವಾಹಟಿ ಮತ್ತು ಕಟಕ್ ನಗರಗಳ ಪೈಕಿ ಎರಡು ನಗರಗಳ ಹೆಸರಲ್ಲಿ ತಂಡಗಳಿರಲಿದೆ.
ಅದಾನಿ ಗ್ರೂಪ್, ಆರ್ ಪಿ ಸಂಜೀವ್ ಗೋಯೆಂಕಾ, ಅರಬಿಂದೋ ಫಾರ್ಮಾ, ಟೊರೆಂಟ್ ಫಾರ್ಮಾ, ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರು, ಜಿಂದಾಲ್ ಸ್ಟೀಲ್, ಹಿಂದೂಸ್ಥಾನ್ ಟೈಮ್ಸ್ ಗಳು ಬಿಡ್ಡಿಂಗ್ ಸಲ್ಲಿಸಿದೆ ಎಂದು ವರದಿಯಾಗಿದೆ.
ಅದಾನಿ ಗ್ರೂಪ್ ಅಹಮದಬಾದ್ ತಂಡಕ್ಕೆ, ಮ್ಯಾಂಚೆಸ್ಟರ್ ಯುನೈಟೆಡ್ ಗ್ರೂಪ್ ಲಕ್ನೋ ನಗರ ಕೇಂದ್ರವಾಗಿರಿಸಿ ಬಿಡ್ ನಡೆಸಿದೆ ಎನ್ನಲಾಗಿದೆ.
ಇದನ್ನೂ ಓದಿ:ಪಾಕ್ ವಿರುದ್ಧ ಸೋಲಿನ ನಡುವೆಯೂ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ, ಧೋನಿ
ಎಂಎಸ್ ಧೋನಿಯವರ ಮ್ಯಾನೇಜರ್ ಅರುಣ್ ಪಾಂಡೆ ಅವರಿಂದ ಪ್ರಚಾರ ಪಡೆದ ರಿತಿ ಸ್ಪೋರ್ಟ್ಸ್ ಕಟಕ್ ತಂಡಕ್ಕಾಗಿ ಬಿಡ್ ಸಲ್ಲಿಸಿದೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ರಿತಿ ಸ್ಪೋರ್ಟ್ಸ್ ನ ಉದ್ಯಮಿ ಆನಂದ್ ಪೊದಾರ್ ಅವರು ಸ್ಥಳಕ್ಕೆ ಸ್ವಲ್ಪ ತಡವಾಗಿ ಆಗಮಿಸಿದರು ಮತ್ತು ಅವರ ಬಿಡ್ ಅನ್ನು ಅಂತಿಮವಾಗಿ ತಡವಾಗಿ ಸಲ್ಲಿಸಲು ಸ್ವೀಕರಿಸಲಾಗಿಲ್ಲ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.