ಟಿ20 ವಿಶ್ವಕಪ್: ಅಫ್ಘಾನ್‌ಗೆ ಭರ್ಜರಿ ಗೆಲುವು
Team Udayavani, Oct 25, 2021, 10:58 PM IST
ಶಾರ್ಜಾ: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಅಮೋಘ ಆಟ ಬಳಿಕ ಬೌಲರ್‌ಗಳ ಬಿಗು ದಾಳಿಯಿಂದ ಸ್ಕಾಟ್ಲೆಂಡ್ ಎದುರಿನ ಸೋಮವಾರದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ಥಾನ 130 ರನ್‌ಗಳ ಭರ್ಜರಿ ಗೆಲುವಿನ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ಥಾನ 4 ವಿಕೆಟಿಗೆ 190 ರನ್ ಪೇರಿಸಿತು. ಬಳಿಕ ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್ ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ಸ್ಪಿನ್ ದಾಳಿಗೆ ತತ್ತರಿಸಿ 10.2ಓವರ್‌ಗಳಲ್ಲಿ 60 ರನ್‌ಗಳಿಗೆ ಸರ್ವಪತನ ಕಂಡಿತು. ಅಫ್ಘಾನ್ ಪರ ಮುಜೀಬ್ 20ಕ್ಕೆ 5, ರಶೀದ್ ಖಾನ್ 9ಕ್ಕೆ 4 ವಿಕೆಟ್ ಕಬಳಿಸಿದರು.
ಅಫ್ಘಾನ್ ಉತ್ತಮ ಆರಂಭ
ಹಜ್ರತುಲ್ಲ ಜಜಾಯ್ (44) ಮತ್ತು ಕೀಪರ್ ಮೊಹಮ್ಮದ್ ಶಾಜಾದ್ (22) ಅಫ್ಘಾನಿಸ್ಥಾನಕ್ಕೆ ಬಿರುಸಿನ ಆರಂಭವಿತ್ತರು. ಪವರ್ ಪ್ಲೇಯಲ್ಲಿ ಮುನ್ನುಗ್ಗಿ ಬಾರಿಸಿದರು. 5.5 ಓವರ್‌ಗಳಿಂದ ಮೊದಲ ವಿಕೆಟಿಗೆ 54 ರನ್ ಒಟ್ಟುಗೂಡಿತು. ಸಫ್ಯಾನ್ ಶರೀಫ್ ಸ್ಕಾಟ್ಲೆಂಡ್‌ಗೆ ಮೊದಲ ಬ್ರೇಕ್ ಒದಗಿಸಿದರು. ಆಗ ಶಾಜಾದ್ ವಿಕೆಟ್ ಉರುಳಿತು. ಇನ್ನೊಂದೆಡೆ ಜಜಾಯ್ ಬಿರುಸಿನ ಆಟ ಮುಂದುವರಿಸಿ 30 ಎಸೆತಗಳಿಂದ 44 ರನ್ ಚಚ್ಚಿದರು. ಸಿಡಿಸಿದ್ದು 3 ಸಿಕ್ಸರ್ ಹಾಗೂ 3 ಬೌಂಡರಿ.
ಅಫ್ಘಾನ್‌ನ ಈ ಓಟದಲ್ಲಿ ತೃತೀಯ ವಿಕೆಟಿಗೆ ಜತೆಗೂಡಿದ ರಹಮತುಲ್ಲ ಗುರ್ಬಜ್ ಮತ್ತು ನಜೀಬುಲ್ಲ ಜದ್ರಾನ್ ಅವರ ಪಾತ್ರ ಮಹತ್ವದ್ದಾಗಿತ್ತು. ಬಿರುಸಿನ ಆಟಕ್ಕೆ ಇಳಿದು 52 ಎಸೆತಗಳಿಂದ 87 ರನ್ ಪೇರಿಸಿದರು. ಅಂತಿಮ ಎಸೆತದಲ್ಲಿ ಔಟಾದ ಜದ್ರಾನ್ 34 ಎಸೆತ ಎದುರಿಸಿ ಸರ್ವಾಧಿಕ 59 ರನ್ ಹೊಡೆದರು. ಇದರಲ್ಲಿ 5 ಫೋರ್, 3 ಸಿಕ್ಸರ್ ಸೇರಿತ್ತು. ಅಫ್ಘಾನ್ ಇನ್ನಿಂಗ್ಸ್‌ನಲ್ಲಿ 11 ಸಿಕ್ಸರ್ ಸಿಡಿಯಲ್ಪಟ್ಟಿತು. ಇದು ಈ ಕೂಟದ ದಾಖಲೆಯಾಗಿದೆ.
ಇದನ್ನೂ ಓದಿ:ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ
ಸಂಕ್ಷಿಪ್ತ ಸ್ಕೋರ್: ಅಫ್ಘಾನಿಸ್ಥಾನ-4 ವಿಕೆಟಿಗೆ 190 (ಜದ್ರಾನ್ 59, ಗುರ್ಬಜ್ 46, ಜಜಾಯ್ 44, ಶರೀಫ್ 33ಕ್ಕೆ 2). ಸ್ಕಾಟ್ಲೆಂಡ್ 10.2 ಓವರ್‌ಗಳಲ್ಲಿ 60 (ಜಾರ್ಜ್ ಮುನ್ಸಿ 25, ಮುಜೀಬ್ 20ಕ್ಕೆ 5, ರಶೀದ್ 9ಕ್ಕೆ 4).
ಪಂದ್ಯಶ್ರೇಷ್ಠ: ಮುಜೀಬ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.