ಲಿಂಗಸುಗೂರು: ಸ್ವಯಂ ಸೇವಕರ ಪಥಸಂಚಲನ
Team Udayavani, Oct 26, 2021, 1:17 PM IST
ಲಿಂಗಸುಗೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ಉತ್ಸವದ ಅಂಗವಾಗಿ ಗಣವೇಷಧಾರಿ ಸ್ವಯಂ ಸೇವಕರ ಆಕರ್ಷಕ ಪಥಸಂಚಲನ ನಡೆಯಿತು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಆರಂಭಗೊಂಡ ಪಥಸಂಚಲನ ಅಂಚೆ ಕಚೇರಿ, ಗೌಳಿಪುರ, ಗದ್ದೆಮ್ಮ ದೇವಿ ದೇವಸ್ಥಾನ, ಮುನ್ನೂರು ಓಣಿ ಗಡಿಯಾರ ವೃತ್ತ, ಚಾವೂಸ್ ಓಣಿ, ರಾಘವೇಂದ್ರ ಸ್ವಾಮಿಗಳ ಮಠ, ಬಸ್ ನಿಲ್ದಾಣ ವೃತ್ತ, ಬೈಪಾಸ್ ರಸ್ತೆ, ಸ್ವಾಮಿ ವಿವೇಕಾನಂದ ನಗರ ಮೂಲಕ ಹಾಯ್ದು ಕಾಲೇಜು ಮೈದಾನ ತಲುಪಿತು.
ಪಥ ಸಂಚಲನದಲ್ಲಿ ನಗರ ಹಾಗೂ ಸುತ್ತಲಿನ ಗ್ರಾಮಗಳಿಂದ ಆಗಮಿದ ಗಣವೇಷಧಾರಿ ಸ್ವಯಂ ಸೇವಕರು, ಘೋಷ ಸಹಿತ ಸಂಚಲನದಲ್ಲಿ ಭಾಗವಹಿಸಿದ್ದರು. ನಗರದ ಕಟ್ಟಡಗಳ ಮೇಲೆ ಭಗವಾಧ್ವಜ ರಾರಾಚಿಸುತ್ತಿದ್ದವು. ಸಾರ್ವಜನಿಕರು ರಸ್ತೆಗಳಲ್ಲಿ ರಂಗೋಲಿ, ಹೂವಿನ ಅಲಂಕಾರ ಮಾಡಿ ಪಥ ಸಂಚಲನ ಸ್ವಾಗತಿಸಿದರು. ಶಿವಾಜಿ, ಸುಭಾಷಚಂದ್ರ ಭೋಸ್, ವಿವೇಕಾನಂದ, ಝಾನ್ಸಿರಾಣಿ ಲಕ್ಷ್ಮೀ, ಒನಕೆ ಓಬವ್ವ, ಭಗತ್‌ಸಿಂಗ್, ಶ್ರೀರಾಮ, ಕಿತ್ತೂರುರಾಣಿ ಚೆನ್ನಮ್ಮ ಸೇರಿದಂತೆ ವಿವಿಧ ರಾಷ್ಟ್ರ ನಾಯಕರ ವೇಷಧಾರಿ ಮಕ್ಕಳು ಪಥ ಸಂಚಲನ ಸ್ವಾಗತಿಸಿದರು.
ನಂತರ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಬಳ್ಳಾರಿ ವಿಭಾಗ ಪ್ರಮುಖ ನಾಗರಾಜ ಮಾತನಾಡಿದರು. ಪಥಸಂಚಲನದಲ್ಲಿ ಡಾ| ಪಾಂಡುರಂಗ ಆಪ್ಟೆ ಬಸವರಾಜ ಸ್ವಾಮಿ, ಸೋಮಶೇಖರ್ ನಾಯಕ, ಮಾಜಿ ಶಾಸಕ ಮಾನಪ್ಪ ವಜ್ಜಲ್, ಗಿರಿಮಲ್ಲನಗೌಡ ಕರಡಕಲ್, ಡಾ| ಶಿವಬಸಪ್ಪ, ವೀರನಗೌಡ ಲೆಕ್ಕಿಹಾಳ, ಚೆನ್ನಬಸವ ಹಿರೇಮಠ, ಶಶಿಕಾಂತ ಗಸ್ತಿ, ಭೀಮಸೇನ್ ಕುಲಕರ್ಣಿ, ಅಯ್ಯಪ್ಪ, ಈಶ್ವರ,ಅಮರ, ಮನೋಜ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.