ನಟಿ ಮೇಲೆ ಹಲ್ಲೆ: ಮಾಜಿ ಪ್ರಿಯಕರ ಸೆರೆ
Team Udayavani, Oct 27, 2021, 10:09 AM IST
Representative Image used
ಬೆಂಗಳೂರು: ಸಿನಿಮಾ ನಟಿಗೆ ಕಿರುಕುಳ ನೀಡಿದಲ್ಲದೆ, ಹಲ್ಲೆ ನಡೆಸಿದ ಮಾಜಿ ಪ್ರಿಯಕರನನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲ ನಿವಾಸಿ ಚಂದನ್ ಪ್ರಸಾದ್(31) ಬಂಧಿತ. ಆರೋಪಿ ಸಿನಿಮಾ ನಟಿ ಅನುಷಾ ಎಂಬುವರ ಮೇಲೆ ಹಲ್ಲೆ ನಡೆಸಿದ್ದ.
ಈ ಸಂಬಂಧ ಆಕೆ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ನೆಲಮಂಗಲ ಮೂಲದ ಚಂದನ್ ಪ್ರಸಾದ್ 2015 ರಲ್ಲಿ ಸೋಲದೇವನಹಳ್ಳಿಯಲ್ಲಿರುವ ಎಂಜಿನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆಗ ಅದೇ ಕಾಲೇಜಿನ ಸಹಪಾಠಿ ತುಮಕೂರು ಮೂಲದ ಅನುಷಾ ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ.
ಆತನ ಹಿಂಸೆ ಮೇರೆಗೆ ಆಕೆಯೂ ಪ್ರೀತಿಸುತ್ತಿದ್ದರು. ಎರಡು ತಿಂಗಳ ಬಳಿಕ ಆರೋಪಿ ವೈಯಕ್ತಿಕ ವಿಚಾರಕ್ಕೆ ಆಕೆ ಮೇಲೆ ಹಲ್ಲೆ ನಡೆಸಿದ್ದ. ಹೀಗಾಗಿ ಆಕೆ ಆತ ನಿಂದ ದೂರವಾಗಿದ್ದರು. ಆರೋಪಿ ಕೂಡ 2016ರಲ್ಲಿ ದುಬೈಗೆ ತೆರಳಿ ಸಾಫ್ಟ್ವೇರ್ ಎಂಜಿನಿಯರ್ ಕೆಲಸ ಮಾಡುತ್ತಿದ್ದ. ಮೂರು ವರ್ಷಗಳ ಹಿಂದೆ ವಾಪಸ್ ಬೆಂಗಳೂರಿಗೆ ಬಂದಿದ್ದಾನೆ. ನಂತರ ಮತ್ತೆ ಅನುಷಾ ಹಿಂದೆ ಬಿದ್ದಿದ್ದು, ಪ್ರೀತಿಸುವಂತೆ ಪೀಡಿಸುತ್ತಿದ್ದ. ಅಲ್ಲದೆ, ಬಾಗಲಗುಂಟೆಯಲ್ಲಿದ್ದ ಮನೆ ಬಳಿ ಬಂದು ಕಿರಿಕುಳ ನೀಡುತ್ತಿದ್ದ.
ಆತನ ಕಿರುಕುಳಕ್ಕೆ ಬೇಸತ್ತು ಇಡೀ ಕುಟುಂಬ ತುಮಕೂರಿಗೆ ಸ್ಥಳಾಂತರಗೊಂಡಿತ್ತು. ಅಲ್ಲಿಗೂ ಆತ ಬಂದು ದೌರ್ಜನ್ಯ ನಡೆಸುತ್ತಿದ್ದ ಎಂದು ಅನುಷಾ ದೂರಿನಲ್ಲಿ ಆರೋಪಿಸಿದ್ದಾರೆ. ಅನಂತರ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದ್ದರಿಂದ ನಾಗರಬಾವಿಯಲ್ಲಿ ವಾಸವಾಗಿದ್ದರು. ಈ ಮಾಹಿತಿ ಪಡೆದ ಆರೋಪಿ ಅಲ್ಲಿಗೂ ಬಂದು ತೊಂದರೆ ಕೊಡುತ್ತಿದ್ದು, ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ.
ಇದನ್ನೂ ಓದಿ:- ಎರಡೂ ಉಪ ಚುನಾವಣೆ ಬಿಜೆಪಿ ಗೆಲುವುದು ನಿಶ್ಚಿತ : ನಾರಾಯಣಸ್ವಾಮಿ
ಅ.19ರಂದು ನಸುಕಿನ 1 ಗಂಟೆ ಸುಮಾರಿಗೆ ಮನೆ ಬಳಿ ಬಂದು ಹೊರಗಡೆ ಬರುವಂತೆ ಫೋನ್ ಮಾಡಿ ದ್ದಾನೆ. ಆಗ ಆಕೆ ಹೆದರಿ ಸ್ನೇಹಿತೆ ಪ್ರಿಯಾಂಕ ಜತೆ ಅವರ ಮನೆಗೆ ಹೋಗಲು ಕ್ಯಾಬ್ ಕಾಯ್ದಿರಿಸಿ, ಕ್ಯಾಬ್ ಹತ್ತುತ್ತಿದ್ದಂತೆ ಕ್ಯಾಬ್ ತಡೆದ ಆರೋಪಿ ಅನುಷಾ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಅನುಚಿತವಾಗಿ ವರ್ತಿಸಿದ್ದಾನೆ. ಅದನ್ನು ತಡೆಯಲು ಬಂದ ಸ್ನೇಹಿತೆ ಪ್ರಿಯಾಂಕ ಮತ್ತು ಕ್ಯಾಬ್ ಚಾಲಕನ ಮೇಲೂ ಹಲ್ಲೆ ನಡೆಸಿದ್ದಾನೆ.
ಬಳಿಕ ಕ್ಯಾಬ್ ಚಾಲಕ ಪೊಲೀಸರಿಗೆ ಮಾಹಿತಿ ನೀಡುವು ದಾಗಿ ಹೇಳಿದರಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಅನುಷಾ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಆರೋಪಿ ನೆಲಮಂಗಲ ಮೂಲದ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ ಎಂದು ಹೇಳಲಾಗಿದೆ. ದುಬೈನಿಂದ ಬಂದ ಬಳಿಕ ತಂದೆಯ ರಿಯಲ್ ಎಸ್ಟೇಟ್ ವ್ಯವಹಾರ ನೋಡಿಕೊಳ್ಳುತ್ತಿದ್ದ ಎಂಬುದು ಗೊತ್ತಾಗಿದೆ. ಇನ್ನು ಅನುಷಾ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.