ಟೆಸ್ಲಾ ಮಾರುಕಟ್ಟೆ ಮೌಲ್ಯ 1ಲಕ್ಷ ಕೋಟಿ ರೂ. ದಾಟಿದೆ..!
ಜಾಗತಿಕವಾಗಿ ಅಗ್ರಸ್ಥಾನದಲ್ಲಿರುವ 5 ಅಟೋ ಮೊಬೈಲ್ ಕಂಪನಿಗಳ ಸಂಯೋಜಿತ ಮೌಲ್ಯವನ್ನು ಮೀರಿಸಿದ ಟೆಸ್ಲಾ..!
Team Udayavani, Oct 27, 2021, 3:27 PM IST
ನವದೆಹಲಿ: ವಾಹನ ತಯಾರಿಕಾ ಕಂಪನಿಯಾದ ಟೆಸ್ಲಾ ಇಂಕ್ ಸೋಮವಾರ ಮಾರುಕಟ್ಟೆ ಮೌಲ್ಯದಲ್ಲಿ1ಲಕ್ಷ ಕೋಟಿ ರೂ. ( $1 ಟ್ರಿಲಿಯನ್) ಮೌಲ್ಯವನ್ನು ಮೀರಿದೆ, ಅದರ ಐದು ದೊಡ್ಡ ಪ್ರತಿಸ್ಪರ್ಧಿಗಳಾದ ಟೊಯೋಟಾ ಮೋಟಾರ್ ಕಾರ್ಪ್, ವೋಕ್ಸ್‌ವ್ಯಾಗನ್ ಎಜಿ, ಡೈಮ್ಲರ್ ಎಜಿ, ಫೋರ್ಡ್ ಮೋಟಾರ್ ಕೋ ಮತ್ತು ಜನರಲ್ ಮೋಟಾರ್ಸ್‌ನ ಸಂಯೋಜಿತ ಮಾರುಕಟ್ಟೆ ಮೌಲ್ಯವನ್ನು ಟೆಸ್ಲಾ ಮೀರಿಸಿ ದಾಖಲೆ ಸಾಧಿಸಿದೆ.
ಇದು ಟೆಸ್ಲಾವನ್ನು ಜಾಗತಿಕವಾಗಿ ಅತ್ಯಂತ ಮೌಲ್ಯಯುತವಾದ ಕಾರು ಕಂಪನಿಯನ್ನಾಗಿ ಮಾಡುತ್ತಿದೆ, ಇತರ ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಕಾರುಗಳನ್ನು ಮಾರಾಟ ಮಾಡಿದರೂ, ಅವುಗಳಲ್ಲಿ ಒಂದೆರಡು ಮೋಡಲ್ ಕಾರುಗಳು ಒಟ್ಟಾಗಿ ಸುಮಾರು 10 ಮಿಲಿಯನ್ ಡಾಲರ್ ಮೌಲ್ಯಗಳನ್ನು ವಾರ್ಷಿಕವಾಗಿ ಪಡೆಯುತ್ತಿವೆ. ಮತ್ತೊಂದೆಡೆ, ಟೆಸ್ಲಾ 2020 ರಲ್ಲಿ ಸುಮಾರು 5,00,000 ಕಾರು ಮಾರಾಟವನ್ನು ತಲುಪಿದೆ, ಇದು 5 ಅಗ್ರ ಕಾರು ತಯಾರಕರ ಕಂಪನಿಗಳ ಸಂಯೋಜಿತ ಮಾರಾಟ ಮೌಲ್ಯವನ್ನು ಮೀರಿಸಿದೆ.
ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಬಾಡಿಗೆ ಕಾರು ಕಂಪನಿ ಹರ್ಟ್ಜ್‌ನಿಂದ 1,00,000 ಕಾರುಗಳನ್ನು ಮುಂದಿನ ವರ್ಷದ ಅಂತ್ಯದ ವೇಳೆಗೆ ವಿತರಿಸಲು ತನ್ನ ಅತಿದೊಡ್ಡ ಆರ್ಡರ್ ಗಳನ್ನು ಮಾಡಿದೆ.
ಹರ್ಟ್ಜ್ ಪ್ರಕಾರ, ಬಾಡಿಗೆ ಬ್ರ್ಯಾಂಡ್ ಆರ್ಡರ್ ಸುಮಾರು $ 4 ಬಿಲಿಯನ್ ಎಂದು ಅಂದಾಜಿಸಲಾಗಿದೆ ಮತ್ತು ಕಂಪನಿಯ ಒಟ್ಟು ಆಸ್ತಿಯ 20 ಪ್ರತಿಶತದಷ್ಟು ಇರುತ್ತದೆ ಎನ್ನಲಾಗಿದೆ. ಹರ್ಟ್ಜ್ ಟೆಸ್ಲಾ ಮಾಡೆಲ್ 3 ರೂಪದಲ್ಲಿ ತಯಾರಿಸಲು ಎಲ್ಲಾ 1 ಲಕ್ಷ ಕಾರುಗಳನ್ನು ಆರ್ಡರ್ ಮಾಡಿದೆ.
ಇದನ್ನೂ ಓದಿ:- ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬ ಪತ್ತೆಗಾಗಿ 8 ಪೊಲೀಸ್ ತಂಡ
ಟೆಸ್ಲಾಗೆ ಹೋಲಿಸಿದರೆ ವಿಶ್ವದ ಅಗ್ರ 5 ICE (internal combustion engine) ಆಂತರಿಕ ದಹನಕಾರಿ ಎಂಜಿನ್ ವಾಹನ ತಯಾರಕರ ಪಟ್ಟಿ ಮತ್ತು ಮೌಲ್ಯಗಳು ಹೀಗಿವೆ:-
ಟೆಸ್ಲಾ ಇಂಕ್ – $1 ಟ್ರಿಲಿಯನ್
ಟೊಯೋಟಾ ಮೋಟಾರ್ – $284.11 ಬಿಲಿಯನ್
ವೋಕ್ಸ್‌ವ್ಯಾಗನ್ – $146.83 ಬಿಲಿಯನ್
ಡೈಮ್ಲರ್ ಎಜಿ – $103.58 ಬಿಲಿಯನ್
ಜನರಲ್ ಮೋಟಾರ್ ಕೋ – $83.85 ಬಿಲಿಯನ್
ಫೋರ್ಡ್ ಮೋಟಾರ್ – $62.78 ಬಿಲಿಯನ್
ಮಾರಾಟದ ವಿಷಯದಲ್ಲಿ, ಟೊಯೊಟಾ ಮೋಟಾರ್ ಕಂಪನಿಯು ಕಳೆದ ವರ್ಷ ಸುಮಾರು 9.5 ಮಿಲಿಯನ್ ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ ಜಾಗತಿಕ ಮಾರಾಟದ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ಫೋಕ್ಸ್‌ವ್ಯಾಗನ್ 9.3 ಮಿಲಿಯನ್ ಕಾರುಗಳನ್ನು ಮಾರಾಟ ಮಾಡಿದೆ. ಡೈಮ್ಲರ್, ಜನರಲ್ ಮೋಟಾರ್, ಮತ್ತು ಫೋರ್ಡ್ ಹೆಚ್ಚು ಕಾರು ಮಾರಾಟ ಮಾಡದಿದ್ದರೂ ಉತ್ತಮ ಮಾರುಕಟ್ಟೆ ಮೌಲ್ಯಗಳನ್ನು ಹೊಂದಿವೆ.
ಟೆಸ್ಲಾದ ಪ್ರಸ್ತುತ ಕಾರು ತಯಾರಕರಿಂದ ಪ್ರಾರಂಭಿಕ ಮಾದರಿಯ EV ಮಾಡೆಲ್ 3 ನಂತಹ ವಾಹನಗಳನ್ನು ಮಾರಾಟ ಮಾಡುತ್ತಿದೆ, ನಂತರ ಹೆಚ್ಚು ಕ್ರಾಸ್‌ಒವರ್ ಹೊಂದಿರುವ ಮಾಡೆಲ್ Y, ಮಾಡೆಲ್ S ಮತ್ತು ಮಾಡೆಲ್ ಎಕ್ಸ್.ಗಳನ್ನು ಟೆಸ್ಲಾ ಮಾರಾಟ ಮಾಡುತ್ತಿವೆ. ಇವುಗಳ ಜೊತೆಗೆ ಸೈಬರ್‌ಟ್ರಕ್ ಎಂಬ ಹೊಸ ಮೋಡಲ್ ಅನ್ನು ಶೀಘ್ರದಲ್ಲೇ ರಸ್ತೆಗೆ ತರಲು ಟೆಸ್ಲಾ ಕಾರ್ಯಪ್ರವೃತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.