ತಾಜಾ ಮೀನು ರಫ್ತಿಗೆ ವಿಮಾನದ್ದೇ ತೊಡಕು!

Team Udayavani, Oct 28, 2021, 6:47 AM IST

ತಾಜಾ ಮೀನು ರಫ್ತಿಗೆ ವಿಮಾನದ್ದೇ ತೊಡಕು!

ಮಂಗಳೂರು: ಕರಾವಳಿಯಲ್ಲಿ ಸದ್ಯ ಭರಪೂರ ಮೀನುಗಾರಿಕೆ ನಡೆಯುತ್ತಿದ್ದು ವಿದೇಶದಲ್ಲಿಯೂ ಇಲ್ಲಿನ ಮೀನಿಗೆ ಬಹು ಬೇಡಿಕೆ ಇದೆ. ಆದರೆ ತಾಜಾ ಮೀನನ್ನು ವಿದೇಶಗಳಿಗೆ ರಫ್ತು ಮಾಡುವಲ್ಲಿ ಎದುರಾಗಿರುವ ತೊಡಕು ಇನ್ನೂ ಇತ್ಯರ್ಥವಾಗಿಲ್ಲ.

ಮೀನನ್ನು ಹಿಡಿದ ದಿನದಂದೇ ಅಥವಾ ಒಂದೆರಡು ದಿನ ದೊಳಗೆ ಸಂಸ್ಕರಿಸಿ ಗಲ್ಫ್ ರಾಷ್ಟ್ರಗಳಿಗೆ ಕಳುಹಿಸಲು ಬಹು ಬೇಡಿಕೆಯಿದೆ. ಆದರೆ ಮಂಗಳೂರಿನಿಂದ ವಿಮಾನದ ಮೂಲಕ ಸಾಗಾಟಕ್ಕೆ ಅವಕಾಶ ಇಲ್ಲದ್ದರಿಂದ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಿಂದ ವಾರ್ಷಿಕ 69 ಸಾವಿರ ಮೆಟ್ರಿಕ್‌ ಟನ್‌ ಮೀನು ರಫ್ತಾಗುತ್ತದೆ. ಈ ಪೈಕಿ ಶೀತಲೀಕೃತ ವ್ಯವಸ್ಥೆಯ ಮೀನು ರಫ¤ನ್ನು ನವಮಂಗಳೂರು ಬಂದರಿನಿಂದ ಹಡಗಿನ ಮೂಲಕ ಮಾಡಲಾಗುತ್ತದೆ. ಶೀತಲೀಕೃತ ಮೀನನ್ನು 9 ತಿಂಗಳ ವರೆಗೂ ಕಾಪಿಡಲು ಸಾಧ್ಯ. ಆದರೆ ತಾಜಾ ಮೀನನ್ನು ಕನಿಷ್ಠ 3-4 ದಿನಗಳ ವರೆಗೆ ಮಾತ್ರ ಇಡಬಹುದು. ಆದ್ದರಿಂದ ವಿಮಾನದಲ್ಲೇ ರಫ್ತು ಮಾಡಬೇಕಾಗುತ್ತದೆ. ಆದರೆ ಮಂಗಳೂರಿನಲ್ಲಿ ಈ ವ್ಯವಸ್ಥೆ ಇಲ್ಲದ್ದರಿಂದ ತಾಜಾ ಮೀನನ್ನು ಬೆಂಗಳೂರು, ಗೋವಾ ಅಥವಾ ಕೇರಳದ ಕೋಯಿಕ್ಕೋಡ್‌, ತಿರುವನಂತಪುರ ವರೆಗೆ ರಸ್ತೆ ಮೂಲಕ ವಾಹನದಲ್ಲಿ ಸಾಗಿಸಿ ಅಲ್ಲಿಂದ ವಿಮಾನದಲ್ಲಿ ಹೊರದೇಶಕ್ಕೆ ಕಳುಹಿಸಲಾಗುತ್ತಿದೆ. ಇದು ವೆಚ್ಚದಾಯಕ ಹಾಗೂ ಸಮಯ ಕೂಡ ಅಧಿಕ ತಗಲುವುದರಿಂದ ತಾಜಾ ಮೀನು ರಫ್ತು ಸಮಸ್ಯೆಗೆ ಪರಿಹಾರವೇ ದೊರಕಿಲ್ಲ.

ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಿಂದ ಏರ್‌ ಇಂಡಿಯಾ ವಿಮಾನದ ಮೂಲಕ ತಾಜಾ ಮೀನು ರಫ್ತಾಗುತ್ತಿತ್ತು. ಆದರೆ ಪ್ಯಾಕಿಂಗ್‌ನಲ್ಲಿ ಸೋರಿಕೆ (ಲೀಕೇಜ್‌) ಆಗುತ್ತಿದೆ ಎಂಬ ಕಾರಣ ನೀಡಿ ತಾಜಾ ಮೀನು ರಫ್ತು ವಹಿವಾಟನ್ನು ವಿಮಾನ ಸಂಸ್ಥೆ ಸ್ಥಗಿತ ಮಾಡಿತ್ತು. ಇನ್ನೊಂದು ಖಾಸಗಿ ವಿಮಾನ ಸಂಸ್ಥೆಯೂ ಇದೇ ನೆಪದಿಂದ ಸಾಗಾಟ ಕೈಬಿಟ್ಟಿತು. ಹೊರಗಿನ ವಿಮಾನ ನಿಲ್ದಾಣದ ಮೂಲಕ ಸಾಗಾಟ ಸಾಧ್ಯವಾಗುತ್ತದೆ ಎಂದಾದರೆ ಮಂಗಳೂರಿನ ವಿಮಾನಕ್ಕೆ ಮಾತ್ರ “ಲೀಕೇಜ್‌’ ಸಮಸ್ಯೆಯೇ? ಎಂಬುದು ರಫ್ತುದಾರರ ಪ್ರಶ್ನೆ.

ಇದನ್ನೂ ಓದಿ:5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

ಈ ಬಗ್ಗೆ ನಿಲ್ದಾಣದ ಅಧಿಕಾರಿಗಳನ್ನು ಕೇಳಿದರೆ, “ಮೀನು ರಫ್ತಿಗೆ ಸಹಕರಿಸಲು ನಾವು ಸಿದ್ಧ; ಆದರೆ ಏರ್‌ಲೈನ್ಸ್‌ನವರು ತೀರ್ಮಾನ ಕೈಗೊಳ್ಳಬೇಕು’ ಎನ್ನುತ್ತಾರೆ. ಇದೇ ವೇಳೆ ಮೀನು ರಫ್ತುದಾರರು, “ಅಂತಾರಾಷ್ಟ್ರೀಯ ದರ್ಜೆಯಲ್ಲಿ ಮೀನು ಪ್ಯಾಕಿಂಗ್‌ ಮಾಡುತ್ತೇವೆ. ಆದರೆ ಒಮ್ಮೆ ಆದ ಸಣ್ಣ ಸಂಗತಿಯನ್ನೇ ನೆಪವಾಗಿಸಿ ಸಮಸ್ಯೆ ತಂದಿರುವುದು ಸರಿಯಲ್ಲ. ಮಂಗಳೂರಿನಲ್ಲಿ ಏರ್‌ಕಾರ್ಗೊ ಆರಂಭವಾದರೆ ಹೆಚ್ಚು ಲಾಭವಾಗಬಹುದು’ ಎನ್ನುತ್ತಾರೆ.

ಸಾಗಾಟ ವೆಚ್ಚ ಶೇ.30ರಷ್ಟು ಏರಿಕೆ!
ಪ್ರಯಾಣಿಕರ ವಿಮಾನದಲ್ಲಿ 3.5 ಟನ್‌ ಸರಕು ಕೊಂಡೊಯ್ಯಲಾಗುತ್ತದೆ. ಇದರಲ್ಲಿ 4 ವರ್ಷದ ಹಿಂದೆ ಸುಮಾರು 1 ಟನ್‌ನಷ್ಟು ವಿವಿಧ ಬಗೆಯಮೀನು ವಿದೇಶಕ್ಕೆ ವಿಮಾನದಲ್ಲಿ ನಿತ್ಯ ತೆರಳುತ್ತಿತ್ತು.

ವಿದೇಶೀ ಮಾರುಕಟ್ಟೆಗೆ ಅನುಗುಣವಾಗಿ ಮೀನಿನ ಮೌಲ್ಯ ನಿಗದಿಯಾಗುತ್ತಿತ್ತು. ಆದರೆ ಈಗ ತಾಜಾ ಮೀನನ್ನು ಬೆಂಗಳೂರು, ಗೋವಾ ಅಥವಾ ಕೋಯಿಕ್ಕೋಡ್‌, ತಿರುವನಂತಪುರಕ್ಕೆ ವಾಹನದಲ್ಲಿ ಕೊಂಡೊಯ್ದು ವಿಮಾನದಲ್ಲಿ ಕಳುಹಿಸಬೇಕಾಗಿದೆ. ಇದರಿಂದಾಗಿ ಪ್ರತೀ ಲೋಡ್‌ಗೆ ಡೀಸೆಲ್‌, ಕಾರ್ಮಿಕರುಸೇರಿದಂತೆ ಸಾವಿರಾರು ರೂ. ವೆಚ್ಚವಾಗುತ್ತಿದೆ. ಈ ಹಿಂದೆ ಮೀನು ಸಾಗಾಟಕ್ಕೆ ಆಗುತ್ತಿದ್ದ ವೆಚ್ಚಕ್ಕಿಂತ ಶೇ. 20ರಿಂದ ಶೇ. 30ರಷ್ಟು ಹೆಚ್ಚುವರಿ ವೆಚ್ಚದ ಹೊರೆ ಎದುರಾಗಿದೆ!

ಚೀನದಲ್ಲಿ “ನಿಷೇಧ’ ನಿಯಮ!
ಕೊರೊನಾದಿಂದಾಗಿ ಜಗತ್ತಿನಾದ್ಯಂತ ಸುದ್ದಿಯಾದ ಚೀನ ಈಗ ಕರ್ನಾಟಕ ಕರಾವಳಿಯ ಮೀನು ವಹಿವಾಟಿನ ಮೇಲೆ ನಿಯಮಾವಳಿಯ ಬರೆ ಎಳೆದಿದೆ. ಕೊರೊನಾ ನೆಪ ಮುಂದಿಟ್ಟು ಕರ್ನಾಟಕದಿಂದ ರಫ್ತಾಗುವ ಪ್ರತೀ ಹಡಗಿನ ಕಂಟೈನರ್‌ ಮೀನನ್ನು ಕೂಡ ಬಹು ಆಯಾಮಗಳಿಂದ ತಪಾಸಣೆ ನಡೆಸಲಾಗುತ್ತಿದೆ. ಯಾವುದಾದರೂ ಕಂಟೈನರ್‌ನಲ್ಲಿರುವ ವ್ಯಕ್ತಿಗೆ ಕೊರೊನಾ ಪಾಸಿಟಿವ್‌ ಇದ್ದರೆ ಆ ಕಂಟೈನರನ್ನು ಮರಳಿಸಲಾಗುತ್ತಿದೆ. ಜತೆಗೆ ಆ ಕಂಪೆನಿಯಿಂದ ಮೀನು ವ್ಯಾಪಾರವನ್ನೇ ನಿಷೇಧಿಸುವ ನಿಯಮವನ್ನು ಚೀನ ರೂಪಿಸಿದೆ. ರಾಜ್ಯದ 5 ಕಂಪೆನಿಯವರಿಗೆ ಈ ಬಿಸಿ ತಟ್ಟಿದೆ.

ರಾಜ್ಯದಿಂದ ಪ್ರತೀ ವರ್ಷ ಸುಮಾರು 1,000 ಕಂಟೈನರ್‌ ಮೂಲಕ ಚೀನಕ್ಕೆ ಮೀನು ರಫ್ತಾಗುತ್ತದೆ. ಒಂದು ಕಂಟೈನರ್‌ನಲ್ಲಿ ಸುಮಾರು 25 ಟನ್‌ ಮೀನುಗಳಿರುತ್ತವೆ.

ಮಾಹಿತಿ ಪಡೆದು ಕ್ರಮ
ಕರಾವಳಿಯ ತಾಜಾ ಮೀನನ್ನು ಮಂಗಳೂರು ವಿಮಾನ ನಿಲ್ದಾಣದ ಮೂಲಕ ರಫ್ತು ಮಾಡಲು ಎದುರಾಗಿರುವ ತೊಡಕಿನ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ವಾರದೊಳಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು.
– ಎಸ್‌. ಅಂಗಾರ,
ಮೀನುಗಾರಿಕೆ ಇಲಾಖೆ ಸಚಿವ

ಟಾಪ್ ನ್ಯೂಸ್

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

sand 1

Padubidri: ಮರಳು ಅಕ್ರಮ ಸಾಗಾಟ; ವಶ

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.