ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’
Team Udayavani, Oct 28, 2021, 10:00 PM IST
ಜಕಾರ್ತಾ: ತಮ್ಮ ಮಕ್ಕಳ ಹೆಸರು ಇತರ ಮಕ್ಕಳಿಗಿಂತ ವಿಭಿನ್ನವಾಗಿರಬೇಕು ಎಂಬ ಉದ್ದೇಶದಿಂದ ಅನೇಕರು, ಹಲವಾರು ಕಡೆ ಹುಡುಕಿ, ಕೇಳಿ ವಿಶೇಷ ಹೆಸರುಗಳನ್ನು ಇಡುವುದು ಸಾಮಾನ್ಯದ ಸಂಗತಿ. ಇನ್ನೂ ಕೆಲವರು, ಕೇಳಲು ವಿಚಿತ್ರ ಎಂಬಂಥ ಹೆಸರುಗಳನ್ನೂ ಇಡುತ್ತಾರೆ. ಇಂಥದ್ದೇ ಗೀಳು ಹೊಂದಿದ್ದ ಇಂಡೋನೇಷ್ಯಾದ ವ್ಯಕ್ತಿಯೊಬ್ಬ ತನ್ನ ಮೊದಲ ಮಗನಿಗೆ ವರ್ಷಗಳ ಹಿಂದೆಯೇ, ವಿಚಿತ್ರ ಹೆಸರಿಟ್ಟಿದ್ದು ಅದು ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಇಂಗ್ಲೀಷ್ ವರ್ಣಮಾಲೆಯ ಮೊದಲ 11 ಅಕ್ಷರಗಳನ್ನು ಒಟ್ಟುಗೂಡಿಸಿ, “ಎಬಿಸಿಡಿಇಎಫ್ ಜಿಎಚ್ಐಜೆಕೆ ಝುಝು’ ಎಂದು ತನ್ನ ಮಗನಿಗೆ ಆತ ಹೆಸರಿಟ್ಟಿದ್ದ. ಈಗ, ಆ ಹುಡುಗನಿಗೆ 12 ವರ್ಷ. ಇತ್ತೀಚೆಗೆ, ಲಸಿಕೆ ಹಾಕಿಸಿಕೊಳ್ಳಲು ಹೋಗಿದ್ದಾಗ ಆತನ ಹೆಸರನ್ನು ನೋಡಿ ಚಕಿತಗೊಂಡ ಆರೋಗ್ಯ ಇಲಾಖೆ ಸಿಬ್ಬಂದಿ, ಆತನಿಗೆ ಲಸಿಕೆ ಹಾಕಲು ಹಿಂದೇಟು ಹಾಕಿದ್ದರಂತೆ! ಕಡೆಗೆ, ಹೆಸರಿನ ಮತ್ತಷ್ಟು ದಾಖಲೆಗಳನ್ನು ತರಿಸಿಕೊಂಡು ನೋಡಿ, ಅದೇ ಆತನ ನಿಜವಾದ ಹೆಸರು ಎಂದು ಖಾತ್ರಿ ಮಾಡಿಕೊಂಡು ಆತನಿಗೆ ಆನಂತರ ಲಸಿಕೆ ನೀಡಿದ್ದಾರೆ.
ಅಂದಹಾಗೆ, ಹುಡುಗನ ಹೆಸರಿನ ಕಡೆಯಲ್ಲಿರುವ ಝುಝು ಎಂಬ ಪದ ಆತನ ತಂದೆ-ತಾಯಿ ಹೆಸರಿನ (ಝುಹ್ರೋ ಹಾಗೂ ಝುಲ್ಫಾಹ್ಮಿ) ಶಾರ್ಟ್ಫಾರ್ಮ್ ಅಂತೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.