ರೋಗಬಾಧೆ: ಅನ್ನದಾತರಿಗೆ ಮೆಣಸಿನಕಾಯಿ ಘಾಟು!


Team Udayavani, Oct 29, 2021, 11:48 AM IST

13chilly

ಇಂಡಿ: ರೈತರು ಹಲವಾರು ಆಸೆ-ನಿರೀಕ್ಷೆ ಇಟ್ಟುಕೊಂಡು ಮೆಣಸಿನ ಬೆಳೆ ನಾಟಿ ಮಾಡಿದ್ದಾರೆ. ಆದರೆ ಮೆಣಸಿನ ಸಸಿಗಳಿಗೆ ಆವರಿಸಿದ ರೋಗಬಾಧೆಯಿಂದ ರೈತರ ನಿರೀಕ್ಷೆಗಳೆಲ್ಲ ಬುಡಮೇಲಾಗಿದ್ದು, ಅನ್ನದಾತರಿಗೆ ಮೆಣಸಿನಕಾಯಿ ಘಾಟು ಬಡಿದಿದೆ.

ಇತ್ತೀಚೆಗೆ ಭೀಮಾ ತೀರದ ಭಾಗದಲ್ಲಿ ಮೆಣಸಿನಕಾಯಿ ಬೆಳೆ ಬೆಳೆದು ಅನೇಕ ರೈತರು ಆರ್ಥಿಕವಾಗಿ ಸಬಲರಾಗಿ ಸ್ಥಿತಿವಂತರಾಗಿದ್ದರು. ಹೀಗಾಗಿ ಪ್ರಸಕ್ತ ವರ್ಷವೂ ಸಾವಿರಾರು ರೈತರು ಹಲವು ಆಸೆಯನ್ನಿಟ್ಟುಕೊಂಡು ಮೆಣಸಿನಕಾಯಿ ಬೆಳೆದಿದ್ದು, ರೋಗಬಾಧೆ ಹೊಡೆತಕ್ಕೆ ನಲುಗಿದ್ದಾರೆ.

ಇಂಡಿ ತಾಲೂಕಿನ ಆಳೂರ, ಪಡನೂರ, ಬರಗುಡಿ, ಅಹಿರಸಂಗ, ಇಂಗಳಗಿ, ಸಾತಪುರ, ಮಾವಿನಹಳ್ಳಿ, ಅಗರಖೇಡ ಸೇರಿದಂತೆ ಸಂಗೋಗಿ, ಶಿರಶ್ಯಾಡ, ಸಾಲೋಟಗಿ, ನಾದ ಮತ್ತಿತರ ಗ್ರಾಮಗಳಲ್ಲಿ ಮೆಣಸಿನ ಸಸಿ ನಾಟಿ ಮಾಡಿದ್ದಾರೆ. ಆದರೆ ಮೆಣಸಿನ ಸಸಿಗಳಿಗೆ ತಾಮ್ರ ಹಾಗೂ ಸಿಡಿ, ಬೆಂಕಿ ರೋಗ ಸೇರಿದಂತೆ ಇತರ ರೋಗಗಳು ಆವರಿಸುತ್ತಿದ್ದು, ಸಸಿಗಳು ಒಣಗುತ್ತಿವೆ. ಸಸಿ ಮೇಲಿನ ಎಲೆಗಳು ತಾಮ್ರದ ಬಣ್ಣಕ್ಕೆ ತಿರುಗಿ ಕಾಂಡಗಳೆಲ್ಲ ನೆಲಕ್ಕುರುಳುತ್ತಿವೆ. ರೈತರು ಸಾಕಷ್ಟು ಔಷಧೋಪಚಾರ ಮಾಡಿದರೂ ರೋಗ ಮಾತ್ರ ಹತೋಟಿಗೆ ಬಾರದಿರುವುದು ಅನ್ನದಾತರನ್ನು ಅಕ್ಷರಶಃ ಚಿಂತೆಗೀಡು ಮಾಡಿದೆ.

ಸಾವಿರಾರು ರೂ. ವ್ಯಯಿಸಿ ಮೆಣಸಿನಕಾಯಿ ಬೆಳೆದ ರೈತರು ರೋಗಬಾಧೆಯಿಂದ ದಿಕ್ಕು ತೋಚದಂತಾಗಿದ್ದು, ಸಂಬಂಧಿಸಿದ ಕೃಷಿ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರೈತರ ಜಮೀನಿಗೆ ಭೇಟಿ ನೀಡಿ, ಇಲಾಖೆ ಸೌಲಭ್ಯ-ಸಲಹೆ ನೀಡಿ ರೈತಾಪಿ ವರ್ಗದಲ್ಲಿ ಧೈರ್ಯ ತುಂಬಬೇಕಿದೆ. ಅಲ್ಲದೇ ಕೇಂದ್ರ-ರಾಜ್ಯ ಸರ್ಕಾರಗಳು ಕೃಷಿ ಇಲಾಖೆ ಮೂಲಕ ಸಣ್ಣ ಮತ್ತು ಮಧ್ಯಮ ರೈತರಿಗೆ ವಿಶೇಷ ಸಹಾಯಧನದ ಅಡಿಯಲ್ಲಿ ಸಹಾಯ ಮಾಡಬೇಕೆನ್ನುವ ಕೂಗು ರೈತಾಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಇದನ್ನೂ ಓದಿ: ಹಸಿರು ಪಟಾಕಿಗಳಿಂದಲೂ ಕಣ್ಣಿಗೆ ಹಾನಿ

ನಾನು ಸುಮಾರು2ಎಕರೆಪ್ರದೇಶದಲ್ಲಿ ಮೆಣಸಿನ ಸಸಿ ನಾಟಿ ಮಾಡಿದ್ದೇನೆ.ಬೆಳೆ ಕೈಗೆ ಬರುವ ಮುಂಚೆ ರೋಗಬಿದ್ದಿದೆ. ಲಕ್ಷಾಂತರ ರೂ.ಖರ್ಚು ಮಾಡಿ ಔಷಧೋಪಚಾರ ಮಾಡಿದರೂ ರೋಗದ ಲಕ್ಷಣಗಳು ಕಡಿಮೆಯಾಗುತ್ತಿಲ್ಲ. ಸರ್ಕಾರ ಮೆಣಸಿನಕಾಯಿ ಬೆಳೆಗಾರರ ನೆರವಿಗೆ ಬರಬೇಕು. -ಮಲ್ಲಕಪ್ಪ ಜಕ್ಕಪ್ಪ ಬೇವನೂರ, ಬೆಳೆಗಾರ, ಆಳೂರ ಗ್ರಾಮ

ಮೆಣಸಿನ ‌ಕಾಯಿ ಬೆಳೆ ಸರಿಯಾಗಿ ಬಂದರೆ ಸುಮಾರು ಒಂದು ಎಕರೆಗೆ 6 ರಿಂದ 8 ಕ್ವಿಂಟಲ್‌ ಇಳುವರಿ ಬರುತ್ತದೆ. ಆದರೆ ಈ ರೋಗಗಳಿಂದ ¸ ಸಂಪೂರ್ಣ ನಾಶವಾಗಿದೆ. ಇದರಿಂದ ಪ್ರತಿ ಎಕರೆಗೆ ಬರಬೇಕಿದ್ದ 2 ಲಕ್ಷಕ್ಕಿಂತ ‌ ಅಧಿಕ ‌ ಆದಾಯ ಕೈ ತಪ್ಪಿದೆ. -ಎಸ್‌.ಆರ್‌.ಬಿರಾದಾರ, ರೈತ, ಶಿರಶ್ಯಾಡ ಗ್ರಾಮ

-ಯಲಗೊಂಡ ಬೇವನೂರ

ಟಾಪ್ ನ್ಯೂಸ್

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖಂಡ್ರೆ

By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Police

Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು

1-yadu

Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್‌

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.