ತಾಯಿಯ ಕನಸಿಗೆ ಪವರ್ ತಂದಿದ್ದ ಪುನೀತ್
Team Udayavani, Oct 30, 2021, 6:18 AM IST
ಪುನೀತ್ ರಾಜ್‌ಕುಮಾರ್ ಅವರು ತಮ್ಮ ಕುಟುಂಬದ “ವಜ್ರೇಶ್ವರಿ ಕಂಬೈನ್ಸ್’ನಡಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಅದು ಅವರೇ ಹೀರೋ ಆಗಿ. ಆದರೆ, ಪುನೀತ್ ಅವರಿಗೊಂದು ಆಸೆ ಇತ್ತು. ಅದು ತನ್ನದೇ ಆದ ಒಂದು ಹೊಸ ಬ್ಯಾನರ್ ಹುಟ್ಟುಹಾಕಿ, ಆ ಮೂಲಕ ಒಂದಷ್ಟು ಹೊಸ ಬಗೆಯ ಸಿನಿಮಾಗಳನ್ನು ಮಾಡಬೇಕು ಎಂಬುದು. ಅದರ ಪರಿಣಾಮವಾಗಿಯೇ ಪುನೀತ್ ರಾಜ್‌ಕುಮಾರ್ ಹುಟ್ಟುಹಾಕಿದ ಸಂಸ್ಥೆ “ಪಿಆರ್‌ಕೆ’.
ಇದು ಪುನೀತ್‌ರಾಜ್‌ಕುಮಾರ್ ಅವರ ಕನಸಿನ ಕೂಸು. “ಪಿಆರ್‌ಕೆ’ ಎಂದರೆ ಪುನೀತ್ ರಾಜ್‌ಕುಮಾರ್ ಎಂದಲ್ಲ. ಬದಲಿಗೆ ಪಾರ್ವತಮ್ಮ ರಾಜ್‌ಕುಮಾರ್ ಎಂದು. ಈ ಸಂಸ್ಥೆಯಲ್ಲಿ ಮೊದಲು ನಿರ್ಮಾಣವಾದ ಚಿತ್ರ “ಕವಲುದಾರಿ’. ಈ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಪುನೀತ್ ತಮ್ಮ ಕನಸಿನ ಬ್ಯಾನರ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಅವರ ಆ ಮಾತು ಕಿವಿಯಲ್ಲಿ ಈಗಲೂ ಪ್ರತಿಧ್ವನಿಸುತ್ತಿದೆ. ಅಂದು ಅವರು ಹೇಳಿದ್ದನ್ನು ಅವರ ಮಾತಲ್ಲೇ ಹೇಳುವುದಾದರೆ, “ಇದು ನಾವು ಅಮ್ಮನ ಹೆಸರಿನಲ್ಲಿ ಆರಂಭಿಸಿರುವ ಬ್ಯಾನರ್. ಪಿಆರ್‌ಕೆ ಎಂದರೆ ಪಾರ್ವತಮ್ಮ ರಾಜಕುಮಾರ್. ಇದು ವಜ್ರೇಶ್ವರಿಯಿಂದ ಹೊರತಾದ ಸಂಸ್ಥೆಯಲ್ಲ. ವಜ್ರೇಶ್ವರಿಯಡಿಯಲ್ಲೇ ಬರುವ ಮತ್ತೂಂದು ಸಂಸ್ಥೆ. “ನನಗೆ ಸಿನಿಮಾ ನಿರ್ಮಾಣ ಮಾಡಬೇಕೆಂಬ ಆಸೆ ತುಂಬಾ ವರ್ಷಗಳಿಂದ ಇತ್ತು. ಅದಕ್ಕಿಂತ ಹೆಚ್ಚಾಗಿ ನಮ್ಮ ಬ್ಯಾನರ್‌ನಲ್ಲಿ ತುಂಬಾ ಸಿನಿಮಾ ಮಾಡಬೇಕೆಂಬ ಆಸೆ ನನಗೆ ಚಿಕ್ಕಂದಿನಿಂದಲೇ ಇತ್ತು. ನಮ್ಮ ತಾಯಿ ನಮಗೆ ಒಂದು ಹೇಳಿಕೊಟ್ಟಿದ್ದಾರೆ. ಸದಾ ಬಿಝಿಯಾಗಿರಬೇಕು, ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕೆಂದು. ನಾನು ನೋಡಿದಂತೆ ನಮ್ಮ ತಾಯಿ ಸದಾ ಬಿಝಿಯಾಗಿದ್ದರು. ಅವರು ಫ್ರೀಯಾಗಿರೋದನ್ನು ನಾನು ನೋಡೇ ಇಲ್ಲ. ಅವರು 80ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಅದನ್ನು 100 ದಾಟಿಸಬೇಕೆಂಬುದು ನಮ್ಮ ಆಸೆ’ ಎಂದು ಕನಸು ತುಂಬಿದ ಕಂಗಳೊಂದಿಗೆ ಪುನೀತ್ ಹೇಳಿದ್ದರು.
ಇದನ್ನೂ ಓದಿ:ಅಪ್ಪು ಅಂತಿಮ ನಮನ : ಕಂಠೀರವ ಸ್ಟೇಡಿಯಂ ಬಳಿ ನೂಕು ನುಗ್ಗಲು
ಅದರಂತೆ ತಮ್ಮ ಪಿಆರ್‌ಕೆ ಬ್ಯಾನರ್‌ನಲ್ಲಿ ಹೊಸ ಬಗೆಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. “ಕವಲು ದಾರಿ’, “ಮಾಯಾ ಬಜಾರ್’, “ಲಾ’, “ಫ್ರೆಂಚ್ ಬಿರಿಯಾನಿ’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಪುನೀತ್, ಮತ್ತೂಂದಿಷ್ಟು ಸಿನಿಮಾಗಳ ನಿರ್ಮಾಣಕ್ಕೆ ತಯಾರಿ ಮಾಡಿಕೊಂಡಿದ್ದರು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಈ ಎಲ್ಲಾ ಸಿನಿಮಾಗಳ ಕಥೆ ಭಿನ್ನವಾಗಿರುವ ಜೊತೆಗೆ ಬಹುತೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದರು. ಪಿಆರ್‌ಕೆ ಹೆಸರಿನಲ್ಲಿಯೇ “ಪಿಆರ್‌ಕೆ ಆಡಿಯೋ’ ಆರಂಭಿಸಿ, ಆ ಮೂಲಕ ಹೊಸ ಪ್ರತಿಭೆಗಳ ಆಡಿಯೋಗಳನ್ನು ಹೊರ ತಂದಿದ್ದರು. ಆದರೆ, ಈಗ ಪಿಆರ್‌ಕೆ ಯಜಮಾನನ್ನೇ ಕಳೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.