ತವಾಂಗ್‌ನಲ್ಲಿ ಚೀನಾಕ್ಕೆ ಚಿನೂಕ್‌ ಸವಾಲು; ಅರುಣಾಚಲ ಪ್ರದೇಶದಲ್ಲಿ ಕೇಂದ್ರದಿಂದ ಸಿದ್ಧತೆ

ಗೇಮ್‌ ಚೇಂಜರ್‌ ಆಗಲಿದೆ ಏವಿಯೇಷನ್‌ ಬ್ರಿಗೇಡ್‌

Team Udayavani, Oct 30, 2021, 6:30 AM IST

ತವಾಂಗ್‌ನಲ್ಲಿ ಚೀನಾಕ್ಕೆ ಚಿನೂಕ್‌ ಸವಾಲು; ಅರುಣಾಚಲ ಪ್ರದೇಶದಲ್ಲಿ ಕೇಂದ್ರದಿಂದ ಸಿದ್ಧತೆ

ಹೊಸದಿಲ್ಲಿ: ಅರುಣಾಚಲ ಪ್ರದೇಶದ ತವಾಂಗ್‌ ಮತ್ತು ಲಡಾಖ್‌ನ ಪೂರ್ವ ಭಾಗದಲ್ಲಿ ಚೀನ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ. ಅದರ ಕುತ್ಸಿತ ಬುದ್ಧಿಗೆ ಸರಿಯಾದ ತಿರುಗೇಟು ನೀಡುವುದಕ್ಕಾಗಿ ಭಾರತವು ತವಾಂಗ್‌ ವ್ಯಾಪ್ತಿಯಲ್ಲಿ ಅಮೆರಿಕದಿಂದ ಇತ್ತೀಚೆಗೆ ಖರೀದಿಸಿರುವ ಚಿನೂಕ್‌ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲು ನಿರ್ಧರಿಸಿದೆ. ಇದರ ಜತೆಗೆ ಅಲ್ಟ್ರಾ ಲೈಟ್‌ ಹೊವಿಟ್ಜರ್‌ಗಳು, ರೈಫ‌ಲ್‌ಗ‌ಳು ಮತ್ತು ದೇಶೀಯ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿರುವ ಅತ್ಯಾಧುನಿಕ ಕ್ಷಿಪಣಿಗಳನ್ನೂ ಅಲ್ಲಿ ನಿಯೋಜಿಸಲು ಸರಕಾರ ಕ್ರಮ ಕೈಗೊಂಡಿದೆ.

ತವಾಂಗ್‌ ಭಾರತದ್ದಾದರೂ ಅದು ತನ್ನದು ಎಂದು ಚೀನ ಹೇಳಿಕೊಳ್ಳುತ್ತಿದೆ. ತವಾಂಗ್‌ನಲ್ಲಿ ಚೀನ ಕೈಗೊಳ್ಳಬಹುದಾದ ದುಸ್ಸಾಹಸಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಕೇಂದ್ರ ಸರಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ಆಯ್ದ ಪತ್ರಕರ್ತರನ್ನು ಕೆಲವು ಮುಂಚೂಣಿ ಸ್ಥಳಗಳಿಗೆ ಕರೆದೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಲೆ| ಜ| ಮನೋಜ್‌ ಪಾಂಡೆ, ಚೀನದ ದಾಳಿಯನ್ನು ಎದುರಿಸಲು ಕೈಗೊಂಡಿರುವ ಹಲವು ಹಂತಗಳ ಸಿದ್ಧತೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಪರ್ವತ ಪ್ರದೇಶಗಳಲ್ಲಿ ಹೋರಾಟ ನಡೆಸುವುದರಲ್ಲಿ ಪರಿಣತಿ ಪಡೆದಿರುವ ಯೋಧರ ತಂಡವನ್ನು ಪೂರ್ಣ ಪ್ರಮಾಣದಲ್ಲಿ ಕಣಕ್ಕೆ ಇಳಿಸಲಾಗಿದೆ ಎಂದು ಪಾಂಡೆ ಹೇಳಿದ್ದಾರೆ.

ಇದನ್ನೂ ಓದಿ:ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆಗೆ ಸಚಿವ ಈಶ್ವರಪ್ಪ ಸೂಚನೆ

ಮುಂದಿನ ಜೂನ್‌ಗೆ ಸಿದ್ಧ
ದೇಶದ ಸೇನೆಗೆ ಅನುಕೂಲವಾಗುವಂತೆ ತವಾಂಗ್‌ನಲ್ಲಿ 700 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇಲಾ ಸುರಂಗ ಮಾರ್ಗ ಮುಂದಿನ ಜೂನ್‌ಗೆ ಸಿದ್ಧಗೊಳ್ಳಲಿದೆ. ಇದರಿಂದ ತವಾಂಗ್‌ ಗಡಿಗೆ ಕ್ಷಿಪ್ರವಾಗಿ ಸೇನೆಯನ್ನು ರವಾನಿಸಲು ಸಾಧ್ಯವಾಗಲಿದೆ.

ಗೇಮ್‌ ಚೇಂಜರ್‌
ಭೂಸೇನೆಯಲ್ಲಿ ಹೊಸದಾಗಿ ರಚಿಸಲಾಗಿರುವ “ಏವಿಯೇಶನ್‌ ಬ್ರಿಗೇಡ್‌’ ತವಾಂಗ್‌ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಏವಿಯೇಶನ್‌ ಬ್ರಿಗೇಡ್‌ಗೆ ಚಿನೂಕ್‌ ಹೆಲಿಕಾಪ್ಟರ್‌ ಒದಗಿಸಲಾಗಿದೆ. ಇದು ಸಂಭಾವ್ಯ ಹೋರಾಟದಲ್ಲಿ ಮಹತ್ವದ ತಿರುವು ಅಥವಾ ಗೇಮ್‌ ಚೇಂಜರ್‌ ಆಗಲಿದೆ ಎಂದು ಪೈಲೆಟ್‌ ಮೇ| ಕಾರ್ತಿಕ್‌ ಹೇಳಿದ್ದಾರೆ.

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.