2 ವರ್ಷದ ಪುನೀತ್‌ಗೆ ಮದ್ರಾಸ್‌ನಲ್ಲಿ ಲಿಂಗದೀಕ್ಷೆ!
Team Udayavani, Oct 30, 2021, 10:19 AM IST
ಸಿಂದಗಿ: ಪವರ್‌ಸ್ಟಾರ್ ಪುನೀತ್ ರಾಜಕುಮಾರ ಕುಟುಂಬಕ್ಕೂ ವಿಜಯಪುರ ಜಿಲ್ಲೆಯ ಸಿಂದಗಿಗೂ ಎಲ್ಲಿಲ್ಲದ ನಂಟು. ಗದುಗಿನ ಲಿಂ|ಪುಟ್ಟರಾಜ ಗವಾಯಿಗಳು ಸಂಗೀತ ಸಮಾ ರಂಭಕ್ಕಾಗಿ 1977ರಲ್ಲಿ ಮದ್ರಾಸ್‌ಗೆ ತೆರಳಿದ್ದ ಸಂದರ್ಭ ಅವರ ಜತೆ ಸಿಂದಗಿ ಪಟ್ಟಣದ ಊರನ ಹಿರಿಯ ಮಠದ (ಹಾವೇ ರಿಯ ಸಿಂದಗಿ ಮಠ) ಪೀಠಾ ಧಿಪತಿಗಳಾಗಿದ್ದ ಲಿಂ|ಶಾಂತವೀರ ಪಟ್ಟಾಧ್ಯಕ್ಷರು ಇದ್ದರು.
ಪುಟ್ಟರಾಜ ಗವಾಯಿಗಳ ಶಿಷ್ಯರಾದ ವೀರೇಶ ಮದರಿ ಎನ್ನುವವರು ಕನ್ನಡ ಚಿತ್ರರಂಗದ ಗೀತೆಗಳಿಗಾಗಿ ವಯಲಿನ್ ನುಡಿಸುತ್ತಿದ್ದರು. ಅವರು ಮೇರುನಟ ಡಾ|ರಾಜಕುಮಾರ ಅವರಿಗೆ ನಿಮ್ಮ ಮನೆಗೆ ಪುಟ್ಟರಾಜ ಗವಾಯಿಗಳನ್ನು ಊಟಕ್ಕೆ ಕರೆದುಕೊಂಡು ಬರುತ್ತಿರುವೆ ಎಂದು ವಿನಂತಿಸಿಕೊಂಡಿದ್ದರು. ಆಗ ಡಾ|ರಾಜ್ ಅವರು ನಿಸ್ಸಂಕೋಚವಾಗಿ ಕರೆದುಕೊಂಡು ಬನ್ನಿ ಎಂದಿದ್ದರು.
ಆದರೆ, ಪುಟ್ಟರಾಜ ಗವಾಯಿಗಳು ಲಿಂಗದೀಕ್ಷೆ ತೆಗೆದುಕೊಳ್ಳ ದವರ ಮನೆಯಲ್ಲಿ ಉಪಾಹಾರ-ಊಟ ಸೇವನೆ ಇಲ್ಲ ಎಂಬ ಪದ್ಧತಿ ಅನುಸರಿಸುತ್ತಿದ್ದರು. ಈ ಸಂಗತಿ ಗೊತ್ತಾದ ಬಳಿಕ ಅವರ ಜೊತೆಯಲ್ಲಿಯೇ ಇದ್ದ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ಡಾ|ರಾಜಕುಮಾರ ಕುಟುಂಬಕ್ಕೆ ಲಿಂಗದೀಕ್ಷೆ ನೀಡಿದ್ದರು. ಬಳಿಕ ಡಾ|ರಾಜ್‌ಕುಮಾರ ಮನೆಯಲ್ಲಿ ಪುಟ್ಟರಾಜ ಗವಾಯಿಗಳು, ಶಾಂತವೀರ ಪಟ್ಟಾಧ್ಯಕ್ಷರು ಅವರ ಶಿಷ್ಯ ಬಳಗ ಊಟ ಸೇವಿಸಿ ದ್ದರು.
ಇದನ್ನೂ ಓದಿ;- ನನಸಾಗದ ಪುನೀತ್ ಚಿತ್ರೀಕರಣದ ಕನಸು!
ಆಗ ಪುನೀತ್ ಎರಡು ವರ್ಷದವರಾಗಿದ್ದರು ಎನ್ನುವು ದನ್ನು ಸ್ಥಳೀಯ ಊರನ ಮಠದ ಪೀಠಾಧಿ ಪತಿಗಳಾದ ಶಿವಾ ನಂದ ಶಿವಾಚಾರ್ಯರು ತಿಳಿಸಿದ್ದಾರೆ. ಇದಾದ ಬಳಿಕ ಗಜಲ್ ಗಾಯಕ ದಿ| ರವೀಂದ್ರ ಹಂದಿಗನೂರ ಅವರು ಶಾಂತವೀರ ಪಟ್ಟಾಧ್ಯಕ್ಷರು ಅವರ ಹೆಸರಿನ ಮೇಲೆ ಹಾಡುಗಳನ್ನು ಹಾಡು ವಂತೆ ಡಾ| ರಾಜಕುಮಾರಗೆ ತಿಳಿಸಿದಾಗ ಅವರು ಎರಡು ಗೀತೆಗಳನ್ನು ಹಾಡಿದ್ದರು. ಹೀಗಾಗಿ ಪುನೀತ್ ರಾಜಕುಮಾರ ಕುಟುಂಬಕ್ಕೂ ಸಿಂದಗಿಗೂ ಎಲ್ಲಿಲ್ಲದ ನಂಟು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.