ಇಂದು ಚಾ.ನಗರ ಸ್ವಯಂಪ್ರೇರಿತ ಬಂದ್ಗೆ ಮನವಿ
Team Udayavani, Oct 30, 2021, 12:28 PM IST
ಚಾಮರಾಜನಗರ: ನಟ ಪುನೀತ್ ರಾಜ್ಕುಮಾರ್ ಚಾಮರಾಜನಗರ ಜಿÇÉೆಯವರಾಗಿದ್ದು, ಚೆಲುವ ಚಾಮರಾಜನಗರ ರಾಯಭಾರಿಯಾಗಿದ್ದ ಹಿನ್ನೆಲೆಯಲ್ಲಿ ಅವರ ನಿಧನದ ಗೌರವಾರ್ಥ ಶನಿವಾರ ಜನರು ಸ್ವಯಂಪ್ರೇರಿತ ಬಂದ್ ಆಚರಿಸಬೇಕೆಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.
ಶಿವಸೈನ್ಯ, ಅಪ್ಪು ಬ್ರಿಗೇಡ್, ರಾಜರತ್ನ ಸಮಿತಿ ಹಾಗೂ ಡಾ.ರಾಜ್ ಕುಮಾರ್ ಅಭಿಮಾನಿಗಳು ಸೇರಿದಂತೆ ನಟರ ಅಭಿಮಾನಿಗಳ ಸಂಘಗಳು ಸ್ವಯಂ ಪ್ರೇರಿತ ಬಂದ್ಗೆ ಮನವಿ ಮಾಡಿವೆ. ಅಭಿಮಾನಿಗಳು, ಜಿಲ್ಲೆಯ ಜನತೆ ಇದಕ್ಕೆ ಸಹಕರಿಸಬೇಕು ಎಂದು ಆಜಾದ್ ಹಿಂದೂ ಸೇನೆ ಅಧ್ಯಕ್ಷ ಎಂ.ಎಸ್.ಫೃಥ್ವಿರಾಜ್ ಮನವಿ ಮಾಡಿದ್ದಾರೆ.
ನಗರದ ಉಪ್ಪಾರಬೀದಿಯಲ್ಲಿ ಅಪ್ಪು ಅಭಿಮಾನಿಗಳ ಅಯೋಜಿಸಿದ್ದ ಪುನೀತ್ ರಾಜ್ ಕುಮಾರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾತನಾಡಿದ ಅವರು, ಪುನೀತ್ ನಿಧನದಿಂದ ರಾಜ್ಯ, ದೇಶಕ್ಕೆ ತುಂಬಾಲಾರದ ನಷ್ಟವಾಗಿದೆ. ಅವರ ಚಿತ್ರಗಳ ಸಮಾಜಕ್ಕೆಉತ್ತಮ ಸಂದೇಶ ನೀಡಿದ್ದು, ಯುವಕರಿಗೆ ಮಾದರಿಯಾಗಿದ್ದರು ಎಂದರು.
ಇದನ್ನೂ ಓದಿ:- ಹೋಟೆಲ್ನಲ್ಲಿ ಅಸ್ಪೃಶ್ಯತೆ ಆಚರಿಸಿದರೆ ಕ್ರಮ
ಸಭೆಯಲ್ಲಿ ಮಹೇಶ ಮಾರ್ಕೆಟ್, ಬಸವ, ಮಹೇಶ್, ನಟ, ವೆಂಕಿ, ಬುಲೆಟ್ ಚಂದ್ರು, ಚಂದ್ರಶೇಖರ್, ಅನಂದ್, ಮಾಧು, ರಾಚಪ್ಪ, ದೇವರಾಜ್, ಯಜಮಾನ್ ಕೆ.ಟಿ.ನಾಗಶೆಟ್ಟಿ, ಆಟೋ ಸ್ವಾಮಿ, ರಘು, ಪುನಿ ಇತರರಿದ್ದರು. ನಗರದ ವಿವಿಧೆಡೆ ಶ್ರದ್ಧಾಂಜಲಿ: ಅಗಲಿದ ತಮ್ಮ ನೆಚ್ಚಿನ ನಟನಿಗೆ ನಗರದ ವಿವಿಧೆಡೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ನಗರದ ಪ್ರಮುಖ ವೃತ್ತಗಳಲ್ಲಿ ಪುನೀತ್ ಅವರ ಫ್ಲೆಕ್ಸ್ ಅಳವಡಿಸಿ, ಅವರನ್ನು ಸ್ಮರಿಸಿದರು. ಅವರ ನಿಧನದ ಗೌರವಾರ್ಥ ಅಭಿಮಾನಿ ಬಳಗದವರು ನಗರದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರದ ಮೆರವಣಿಗೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.