ಅಕ್ಟೋಬರ್‌ 29 ವಿಶ್ವ ಪಾರ್ಶ್ವವಾಯು ದಿನಾಚರಣೆ – 2021

ಕ್ಷಣಗಳು ಜೀವವನ್ನು ಉಳಿಸಬಹುದು

Team Udayavani, Oct 31, 2021, 6:00 AM IST

ಅಕ್ಟೋಬರ್‌ 29 ವಿಶ್ವ ಪಾರ್ಶ್ವವಾಯು ದಿನಾಚರಣೆ – 2021

ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಹತೋಟಿಯಲ್ಲಿದ್ದಾಗ ತನ್ನೆಲ್ಲ ಕೆಲಸ ಕಾರ್ಯಗಳನ್ನು ಸರಿಯಾಗಿ ನಿಭಾಯಿಸಲು ಸಾಧ್ಯ. ಈ ಎರಡು ಆರೋಗ್ಯ ಮೂಲವಾಗಿ ಹಿಡಿತದಲ್ಲಿರುವುದು ನಮ್ಮ ಮೆದುಳಿನಲ್ಲಿ. ಪ್ರತಿಯೊಬ್ಬ ವ್ಯಕ್ತಿಯ ಮೆದುಳು ಹೇಗೆ ಕೆಲಸ ಮಾಡುತ್ತದೆ ಎನ್ನುವುದೇ ಒಂದು ಅದ್ಭುತ ವೈಜ್ಞಾನಿಕ ಹಾಗೂ ವಿಸ್ಮಯ ಸಂಗತಿ. ಯಾವಾಗ ಈ ಮಿದುಳಿಗೆ ಆಘಾತವಾಗುತ್ತದೆಯೋ ಆಗ ಹಲವಾರು ಸಮಸ್ಯೆಗಳು ಉಲ್ಬಣವಾಗುತ್ತವೆ. ಸರಿಯಾಗಿ ಕೆಲಸ ಮಾಡುತ್ತಿದ್ದ ನಮ್ಮ ಮೆದುಳಿಗೆ ಸಮಸ್ಯೆಗಳು ಎದುರಾಗಲು ಮೂಲ ಕಾರಣಗಳೆಂದರೆ ಅತಿಯಾದ ರಕ್ತದ ಒತ್ತಡ, ಸಕ್ಕರೆ ರೋಗ, ಮದ್ಯಪಾನ ಹಾಗೂ ಸಿಗರೇಟು ಸೇದುವಿಕೆ.

ಪ್ರತೀ ವರ್ಷ ಅಕ್ಟೋಬರ್‌ 29ರಂದು ವಿಶ್ವ ಪಾರ್ಶ್ವವಾಯು (ಸ್ಟ್ರೋಕ್‌) ದಿನಾಚರಣೆ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸುವ ಮೂಲ ಉದ್ದೇಶ ಜನರಲ್ಲಿ ಜಾಗೃತಿ, ಅರಿವು ಮೂಡಿಸುವುದು. ನಮ್ಮ ಪ್ರಪಂಚದಾದ್ಯಂತ, ನಾವು ಗಮನಿಸಿದ ಹಾಗೆ ಪ್ರತೀ ನಾಲ್ವರಲ್ಲಿ ಒಬ್ಬರಿಗೆ ಈ ಸಮಸ್ಯೆ ಅವರ ಜೀವಮಾನದಲ್ಲಿ ಎದುರಾಗುತ್ತಿರುವ ಬಹು ದೊಡ್ಡ ಸಮಸ್ಯೆ. ಸರಿಸುಮಾರು 15 ದಶಲಕ್ಷಕ್ಕೂ ಹೆಚ್ಚು ಜನರು ಪ್ರತೀ ವರ್ಷ ಈ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಇದರಲ್ಲಿ ಅಂದಾಜು 6 ದಶಲಕ್ಷಕ್ಕೂ ಹೆಚ್ಚು ಜನರು ಈ ಪಾರ್ಶ್ವವಾಯು ಅಥವಾ ಸ್ಟ್ರೋಕ್‌ನಿಂದಾಗಿ ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ ವಿಶ್ವದಾದ್ಯಂತ ಜನರ ಮೃತ್ಯುವಿಗೆ ಕಾರಣವಾಗುವ ಅನಾರೋಗ್ಯಗಳಲ್ಲಿ ಇದು ಎರಡನೇ ಸ್ಥಾನದಲ್ಲಿದೆ.

ಸ್ಟ್ರೋಕ್‌ ಎನ್ನುವುದು ವ್ಯಕ್ತಿಯನ್ನಷ್ಟೇ ಅಲ್ಲದೇ ಅವರ ಕುಟುಂಬದವರಿಗೂ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಈ ಸಮಸ್ಯೆಗೆ ತೀವ್ರವಾಗಿ ಒಳಗಾದಾಗ ವ್ಯಕ್ತಿ ಹಾಸಿಗೆ ಹಿಡಿಯಬಹುದು. ಹಿಂದಿನಂತೆ ದಿನನಿತ್ಯದ ಕೆಲಸಕಾರ್ಯಗಳನ್ನು ಮಾಡಲು ಆಗದೇ ಹೋಗಬಹುದು. ಸಾಮಾನ್ಯವಾಗಿ ಯಾರೂ ಅಥವಾ ಯಾವ ಕುಟುಂಬದವರೂ ಇಂತಹ ಸಮಸ್ಯೆಯನ್ನು ಎದುರಿಸುವ ಬಗ್ಗೆ ಯೋಚಿಸಿರುವುದಿಲ್ಲ. ಹೀಗಾಗಿ ಈ ಸ್ಟ್ರೋಕ್‌ನಲ್ಲಿ ಬರುವ ಹಲವು ರೀತಿಯ ವಿಧಗಳನ್ನು ತಿಳಿದಿರುವುದು ಒಳಿತು. ಪ್ರತಿಯೊಂದು ವಿಧದ ಸ್ಟ್ರೋಕ್‌ನಿಂದ ಆಗುವ ತೊಂದರೆಗಳನ್ನು ಅನುಭವಿಸುವುದರ ಜತೆಗೆ ಖನ್ನತೆಗೆ ಒಳಗಾಗುವುದು ಬಹಳ ಸಹಜ. ಈ ಸಮಸ್ಯೆಯಿಂದ ಹಲವರು ಹಣಕಾಸಿನ ತೊಂದರೆ, ಮಾನಸಿಕ ತೊಂದರೆ ಎಂದರೆ ಒತ್ತಡ, ಖನ್ನತೆಗೆ ಒಳಗಾಗುತ್ತಾರೆ.

ಈ ಸ್ಟ್ರೋಕ್‌ ದೀರ್ಘ‌ಕಾಲ ಬಳಲಿಸುವ ಖಾಯಿಲೆಯಾಗಿದ್ದು ಇದು ಬರೀ ವ್ಯಕ್ತಿಯನ್ನಲ್ಲದೇ ಅವರ ಕುಟುಂಬದವರನ್ನು ಸಹ ಸಮಾಜದಿಂದ ದೂರ ಮಾಡುತ್ತದೆ (Social Isolation).. ಹಾಗೆಯೇ ಭಾವನಾತ್ಮಕ ಒತ್ತಡ (emotional burden) ಮತ್ತು ಜೀವನದ ಗುಣಮಟ್ಟವನ್ನು ಕೂಡ ಕಡಿಮೆ ಮಾಡುತ್ತದೆ.

ಸಾಮಾನ್ಯವಾಗಿ ಪಾರ್ಶ್ವವಾಯು ಸಮಸ್ಯೆ ಎದುರಾಗುವ ಮುನ್ನ ನಮ್ಮ ದೇಹವು ಕೆಲವು ಮುನ್ಸೂಚನೆಗಳನ್ನು ನೀಡುತ್ತದೆ.
ಅವುಗಳೆಂದರೆ:
1. ದೇಹದ ಯಾವುದಾದರೂ ಒಂದು ಭಾಗದಲ್ಲಿ ಮರುಗಟ್ಟುವಿಕೆ ಇಲ್ಲವೇ ದುರ್ಬಲತೆ ಕಾಣಿಸಿಕೊಳ್ಳುವುದು.
2. ನಡೆದಾಡುವಾಗ ಗೊಂದಲವಾಗುವುದು ಅಥವಾ ತೊಂದರೆಯಾಗುವುದು.
3. ನೋಡುವುದರಲ್ಲಿ ಸಮಸ್ಯೆ.
4. ತಲೆ ಸುತ್ತುವುದು ಅಥವಾ ನಡೆಯುವಾಗ ಸಮಸ್ಯೆ.
5. ಅತಿಯಾದ ತಲೆನೋವು.
ಈ ರೀತಿಯಾದ ಸಮಸ್ಯೆ ನಿಮ್ಮ ಪ್ರೀತಿಪಾತ್ರ ರಲ್ಲಿ ಕಂಡು ಬಂದಲ್ಲಿ ನೀವು FAST ಆಗಿ ಪ್ರತಿಕ್ರಿಯಿಸಬೇಕು. ಅಂದರೆ;
F –   Facial Weakness (ಮುಖದಲ್ಲಿ ದುರ್ಬಲತೆ)
A   Arm Weakness (ಭುಜಗಳಲ್ಲಿ ದುರ್ಬಲತೆ)
S   Speech Difficulty (ಮಾತನಾಡುವಾಗ ಸಮಸ್ಯೆ)
T -  Time loss is brain loss (ಸಮಯ ಮೀರಿದಷ್ಟು ಮಿದುಳಿನ ಕ್ರಿಯೆ ನಿಷ್ಕ್ರಿಯವಾಗುವುದು.)

ಸ್ಟ್ರೋಕ್‌ಗೆ ಒಳಗಾದಾಗ ಭಾವನೆಗಳಿಗೆ ಸಂಬಂಧಪಟ್ಟ ಬದಲಾವಣೆಗಳನ್ನು ವ್ಯಕ್ತಿಯಲ್ಲಿ ಗಮನಿಸಬಹುದು. ಅವುಗಳೇನೆಂದರೆ:
1. ಕೆಲಸ ಮಾಡಲು ಆಸಕ್ತಿ ಇಲ್ಲದೇ ಇರುವುದು.
2. ಖಿನ್ನತೆ
3. ಸಿಟ್ಟು , ದುಃಖ, ಸಿಡುಕುವುದು.
4. ಬದಲಾದ ಊಟ, ನಿದ್ದೆ, ಯೋಚನೆ
5. ಅಸಹಾಯಕತೆ ಹಾಗೂ ಹತಾಶರಾಗುವುದು.

ಈ ರೀತಿಯ ಸಮಸ್ಯೆಗಳಿಗೆ ಒಳಗಾದಾಗ ಮುಖ್ಯವಾಗಿ ಬೇಕಾಗುವುದು rehabilitation,, ಅಂದರೆ ಪುನರ್ವಸತಿ ಅಭಿಯಾನ. ಇದರಲ್ಲಿ ಹಲವರು ಪಾತ್ರ ವಹಿಸುತ್ತಾರೆ.
1. Physcio Therapist  -ವ್ಯಾಯಾಮ ಹಾಗೂ ದೈಹಿಕ ಚಿಕಿತ್ಸೆ ನೀಡುವವರು.
2. Occupational Therapist -ಉದ್ಯೋಗಕ್ಕೆ ಸಂಬಂಧಪಟ್ಟ ಚಲನವಲನ ಚಿಕಿತ್ಸೆ ನೀಡುವವರು.
3. Rehabicitation Nurse -ದಾದಿ.
4. Speech Therapist -ಮಾತಿಗೆ ಸಂಬಂಧಿಸಿದ ಚಿಕಿತ್ಸೆ ನೀಡುವವರು.
5. Recreational Therapist -ಮನೋರಂಜನಾ ವಿಚಾರವಾಗಿ ಚಿಕಿತ್ಸೆ ನೀಡುವವರು.
6. Psychiatrist (ಮನೋವೈದ್ಯರು)
7. Psychiatrist(ಮಾನಸಿಕ ತಜ್ಞರು)
8. Neurologist (ನರಶಾಸ್ತ್ರಜ್ಞರು)
ಈ ಎಲ್ಲ ಮಾಹಿತಿಗಳನ್ನು ತಿಳಿಸುವುದರೊಂದಿಗೆ ಪ್ರತಿಯೊಬ್ಬ ಓದುಗನಲ್ಲಿ ಕೇಳುವುದೇನೆಂದರೆ Stroke Rehabilitation Clinicನ ಪ್ರಯೋಜನ ಪಡೆಯಿರಿ.

-ಡಾ| ಶ್ವೇತಾ ಟಿ.ಎಸ್‌.
ಸಹಾಯಕ ಪ್ರಾಧ್ಯಾಪಕರು, ಕ್ಲಿನಿಕಲ್‌ ಸೈಕಾಲಜಿ ವಿಭಾಗ, ಕೆಎಂಸಿ, ಮಣಿಪಾಲ

ಟಾಪ್ ನ್ಯೂಸ್

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Mental health: ತಾಯಂದಿರ ಮಾನಸಿಕ ಆರೋಗ್ಯ

1

Dentistry: ನಿಮ್ಮ ಆತ್ಮವಿಶ್ವಾಸದ ನಗುಮುಖಕ್ಕೆ ಡೆಂಟಲ್‌ ಇಂಪ್ಲಾಂಟ್‌

7

fasting- ಆತ್ಮದ ಶಕ್ತಿ; ಆಧುನಿಕ ಪ್ರಾಚೀನ ಹಾಗೂ ಪರಿಕಲ್ಪನೆಯ ಸಂಯೋಗ

4

Health: ಮೊಣಕಾಲಿನ ಅಸ್ಥಿಸಂಧಿವಾತ; ಸಾಮಾನ್ಯ ಸಮಸ್ಯೆಯನ್ನು ಮಾಡಿಕೊಳ್ಳುವುದು

1

Tobacco Cessation Centre: ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಂಬಾಕು ವರ್ಜನ ಕೇಂದ್ರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

16

Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.