ಮೃತರ ಕುಟುಂಬಕ್ಕೆ ವೈಯುಕ್ತಿಕ ಪರಿಹಾರ ವಿತರಿಸಿದ ನಡಹಳ್ಳಿ
Team Udayavani, Oct 31, 2021, 3:36 PM IST
ಮುದ್ದೇಬಿಹಾಳ: ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಇಬ್ಬರು ವ್ಯಕ್ತಿಗಳ ಕುಟುಂಬಕ್ಕೆ ನೀಡಿದ್ದ ವಾಗ್ದಾನದಂತೆ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ, ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ರವಿವಾರ ತಲಾ 50000 ರೂ ಅರ್ಥಿಕ ನೆರವನ್ನು ವಿತರಿಸಿದರು.
ಚವನಭಾವಿ ಗ್ರಾಮದ ಮೃತರ ಕುಟುಂಬಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಅವರು ನೆರವನ್ನು ನಗದು ರೂಪದಲ್ಲಿ ಹಸ್ತಾಂತರಿಸಿದರು.
ಮೃತ ಶಿವಪ್ಪ ಪೂಜಾರಿಯ ಪತ್ನಿ ಮುದಕವ್ವ, 3 ವರ್ಷದ ಮಗಳು ಅಶ್ವಿನಿ, ಇನ್ನೋರ್ವ ಮೃತ ಸಂಗಪ್ಪ ಪೂಜಾರಿ ಅವರ ಪತ್ನಿ, ಮೂವರು ಮಕ್ಕಳು ಹಾಗೂ ಕುಟುಂಬದ ಇತರೆ ಸದಸ್ಯರನ್ನು ಮಾತನಾಡಿಸಿ ಅವರ ದು:ಖದಲ್ಲಿ ತಾವು ಭಾಗಿಯಾಗಿದ್ದಾಗಿ ತಿಳಿಸಿದರು.
ಇದನ್ನೂ ಓದಿ: ಕಲ್ಲೇಶ್ವರ ದೇವಸ್ಥಾನದ ಗೋಪುರದ ಸ್ಥೂಪ ಧ್ವಂಸ: ನಿಧಿ ಆಸೆಗೆ ಕೃತ್ಯ ಶಂಕೆ
ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಬಿಜೆಪಿ ಧುರೀಣರಾದ ಬಸವರಾಜ ಗುಳಬಾಳ, ಲಕ್ಷ್ಮಣ ಬಿಜ್ಜೂರ, ಗ್ರಾಮಸ್ಥರಾದ ಬಸಲಿಂಗಪ್ಪ ನಾಲತವಾಡ, ರೇವಣಪ್ಪ ಹಂಚಿನಾಳ,ದ್ಯಾಮಣ್ಣ ಗುರಿಕಾರ,ಲಕ್ಷ್ಮಣ ಬಿರಾದಾರ, ಸಿದ್ದಪ್ಪ ಬಿರಾದಾರ, ಭರಮಣ್ಣ ಹಂಚಿನಾಳ, ರಾಯಪ್ಪ ಮದರಿ, ಗ್ರಾಪಂ ಸದಸ್ಯ ಆಂಜನೇಯ ಪವಾರ, ಯಮನಪ್ಪ ಚಲವಾದಿ, ಮದು ಪಾಟೀಲ, ಅಂಬ್ರೇಶ ನಾಲತವಾಡ, ಬಸನಗೌಡ ಪಾಟೀಲ ಮುಂತಾದವರು ಇದ್ದರು.
ಅ.27 ರಂದು ದುರ್ಘಟನೆ
ಅ.27ರಂದು ಮುದ್ದೇಬಿಹಾಳ ತಾಲೂಕಿನ ಜೈನಾಪೂರ ಕ್ರಾಸ್ ಬಳಿ ಬೈಕ್ ಮತ್ತು ಶಾಲಾ ಬಸ್ ನಡುವೆ ರಸ್ತೆ ಅಪಘಾತ ಸಂಭವಿಸಿ ಬೈಕನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಗೆ ತಂದಾಗ ಶಾಸಕ ನಡಹಳ್ಳಿಯವರು ಆಸ್ಪತ್ರೆಗೆ ಭೆಟಿ ನೀಡಿ ಸಾಂತ್ವನ ಹೇಳಿ ಇಬ್ಬರ ಕುಟುಂಬಕ್ಕೂ ನೆರವಾಗುವ ವಾಗ್ದಾನ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
Vijayapura: ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವುದು ನಮ್ಮ ನಿಲುವು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.