ಬ್ಯಾಂಕ್ ಖಾತೆಗೆ ಪಾನ್ ಲಿಂಕ್ : ನಕಲಿ ಸಂದೇಶ ನಂಬಿ ದುಡ್ಡು ಕಳೆದುಕೊಂಡ ರಿಕ್ಷಾ ಚಾಲಕ
Team Udayavani, Oct 31, 2021, 8:11 PM IST
ಉಪ್ಪಿನಂಗಡಿ : ನಿಮ್ಮ ಉಳಿತಾಯ ಖಾತೆಗೆ ಪಾನ್ ಕಾರ್ಡ್ ನಂಬರ್ ಲಿಂಕ್ ಮಾಡಿ. ಇಲ್ಲವಾದರೆ ಖಾತೆ ಬ್ಲಾಕ್ ಮಾಡಲಾಗುವುದು. ಬ್ಯಾಂಕ್ ಖಾತೆಯ ವೆಬ್‌ಸೈಟ್ ಲಿಂಕ್‌ನಲ್ಲಿ ಸುಲಭವಾಗಿ ಪಾನ್ ನಂಬರ್ ಅನ್ನು ನೀವಾಗಿಯೇ ದಾಖಲಿಸಬಹುದು ಎನ್ನುವ ಸಂದೇಶವನ್ನು ನಂಬಿ ವಂಚಕರು ಕಳುಹಿಸಿದ್ದ ನಕಲಿ ವೆಬ್‌ಸೈಟ್‌ನಲ್ಲಿ ಬ್ಯಾಂಕ್ ಖಾತೆಯ ವಿವರ ದಾಖಲಿಸುತ್ತಿದ್ದಂತೆಯೇ ಖಾತೆಯಲ್ಲಿದ್ದ 55,620 ರೂ. ಹಣ ವಿದ್ ಡ್ರಾ ಆದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಕೊಡಂಗೆ ಮನೆ ನಿವಾಸಿ ಆಟೋ ರಿಕ್ಷಾಚಾಲಕ ಅಬ್ದುಲ್ ರಹಿಮಾನ್ ಹಣ ಕಳೆದುಕೊಂಡು ಮೋಸ ಹೋದವರು. ಅವರ ಮೊಬೈಲ್‌ಗೆ ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ಕಳುಹಿಸಲಾಗಿದೆ ಎಂದು ಬಿಂಬಿಸಲಾದ ಸಂದೇಶದಲ್ಲಿ ನಿಮ್ಮ ಉಳಿತಾಯ ಖಾತೆಗೆ ಕೂಡಲೇ ಪಾನ್ ನಂಬರ್ ಅನ್ನು ಜೋಡಿಸಿ. ಇಲ್ಲವಾದರೆ ಖಾತೆಯನ್ನು ಬ್ಲಾಕ್ ಮಾಡಲಾಗುವುದು. ಪಾನ್ ನಂಬರ್ ಅನ್ನು ಖಾತೆಗೆ ಜೋಡಿಸಲು ನಮ್ಮ ವೆಬ್‌ಸೈಟ್ ಲಿಂಕ್ ಅನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿತ್ತು.
ಒಟಿಪಿ ಬರುವುದೆಂದು ಕಾದರು!
ನೀಡಲಾದ ವೆಬ್‌ಸೈಟ್ ಲಿಂಕ್‌ನಲ್ಲಿ ಎಸ್‌ಬಿಐ ಎನ್ನುವ ಹೆಸರಿದ್ದ ಕಾರಣ ಇದು ಬ್ಯಾಂಕಿನ ನಿಜವಾದ ವೆಬ್‌ಸೈಟ್ ಇರಬಹುದೆಂದು ನಂಬಿದ ರಹಿಮಾನ್ ಅವರು ಲಿಂಕ್ ಅನ್ನು ತೆರೆದು ಅದರಲ್ಲಿ ಬ್ಯಾಂಕ್ ಖಾತೆಗಳ ವಿವರಗಳನ್ನು ದಾಖಲಿಸಿದ್ದರು. ಆ ಕೂಡಲೇ ಖಾತೆಯಲ್ಲಿದ್ದ 55,620 ರೂ. ನಗದು ಕಾಣೆಯಾಗಿದೆ. ಒಟಿಪಿ ನೀಡಿದರೆ ಮಾತ್ರ ಹಣ ವರ್ಗಾವಣೆಗೊಳ್ಳುವುದೆಂದು ಭಾವಿಸಿ ಬ್ಯಾಂಕ್ ಖಾತೆಯ ವಿವರಗಳನ್ನು ನಿಟ್ನೇತಿಯಿಂದ ದಾಖಲಿಸುತ್ತಾ ಹೋದ ರಹಿಮಾನ್ ಅವರಿಗೆ ತನ್ನ ಖಾತೆಯಿಂದ ಹಣ ಎಗರಿಸಲ್ಪಟ್ಟದ್ದು ಗೊತ್ತಾಗಿ ಕಂಗಾಲಾಗಿದ್ದಾರೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ : 60ರ ವಯಸ್ಸಿನಲ್ಲಿ ಸರಕಾರ ನಮ್ಮನ್ನು ಗುರುತಿಸಿತಲ್ಲ: ಪ್ರಾಣೇಶ್ ಸಂತಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.