ಮಡುಗಟ್ಟಿದ ಶೋಕದ ನಡುವೆ ಅಪ್ಪುಗೆ ಭಾವುಕ ವಿದಾಯ
Team Udayavani, Nov 1, 2021, 6:13 AM IST
ಬೆಂಗಳೂರು: ಬೆಂಗಳೂರಿಗರು ರವಿವಾರ ನಿದ್ದೆಯಿಂದ ಏಳುವ ಮೊದಲೇ ನಟ ಪುನೀತ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಕಂಠೀರವ ಕ್ರೀಡಾಂಗಣದಿಂದ ನಸುಕಿನ 4.50ರ ಸುಮಾರಿಗೆ ಹೊರಟ ಪುನೀತ್ ಪಾರ್ಥಿವ ಶರೀರ 5.45ರ ಸುಮಾರಿಗೆ ಕಂಠೀರವ ಸ್ಟುಡಿಯೋ ತಲುಪಿತು.
ಸಕಲ ಸರಕಾರಿ ಗೌರವಗಳು, ಆರ್ಯ ಈಡಿಗ ಸಂಪ್ರದಾಯದಂತೆ ಎಲ್ಲ ವಿಧಿ – ವಿಧಾನಗಳನ್ನು ಪೂರೈಸಿಕೊಂಡು ಪುನೀತ್ ಭೂತಾಯಿಯ ಮಡಿಲು ಸೇರಿದಾಗ ಸುಮಾರು 7.30 ಆಗಿತ್ತು.
ಕುಟುಂಬ ಸದಸ್ಯರು ಕಂಠೀರವ ಸ್ಟುಡಿಯೋಗೆ ತಲುಪಿದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸಹಿತ ಪ್ರಮುಖ ಗಣ್ಯರು ಆಗಮಿಸಿದರು. ಪೊಲೀಸರಿಂದ ರಾಷ್ಟ್ರೀಯ ನಮನ ಸಲ್ಲಿಸಿದ ಬಳಿಕ ಗಣ್ಯರು ಪುಷ್ಪನಮನ ಸಲ್ಲಿಸಿದರು. ಪೊಲೀಸ್ ವಾದ್ಯ ತಂಡದಿಂದ 3 ಬಾರಿ ರಾಷ್ಟ್ರಗೀತೆ ಮೂಲಕ ಗೌರವಿಸಿ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಲಾ ಯಿತು. ಅನಂತರ ಪಾರ್ಥಿವ ಶರೀರದ ಮೇಲಿನ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿಗಳು ಪುನೀತ್ ಅವರ ಪತ್ನಿ ಅಶ್ವಿನಿಗೆ ಹಸ್ತಾಂತರಿಸಿದರು. ಬೆನ್ನಲ್ಲೇ ಪಾರ್ಥಿವ ಶರೀರವನ್ನೂ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಒಡೆಯಿತು ದುಃಖದ ಕಟ್ಟೆ
ಹಾವೇರಿಯ ಆರ್ಯ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಮತ್ತು ತಂಡ ಮಂತ್ರಪಠಣ ಮಾಡಿದರು. ಅನಂತರ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ವಿನಯ್ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು. ಪುನೀತ್ ದೇಹ ಮಣ್ಣಿನಡಿ ಸೇರುತ್ತಿದ್ದಂತೆ ಕುಟುಂಬಸ್ಥರ ದುಃಖದ ಕಟ್ಟೆ ಒಡೆಯಿತು. ಈ ವೇಳೆ ಪುನೀತ್ ಅವರ ಪುತ್ರಿಯರಾದ ಧ್ರುತಿ ಮತ್ತು ವಂದನಾ ತಾಯಿಯನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತರು. ನೆರೆದವರ ಕಣ್ಣಾಲಿಗಳು ತೇವಗೊಂಡಿದ್ದವು.
ಇದನ್ನೂ ಓದಿ:ಟಿ20 ವಿಶ್ವಕಪ್: ನಿರ್ಗಮನ ಬಾಗಿಲಲ್ಲಿ ನಿಂತ ಭಾರತ
ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ, ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇದರಿಂದ ಬೇರೆ ಬೇರೆ ಊರು, ಬಡಾವಣೆಗಳಿಂದ ನೆಚ್ಚಿನ ನಟನ ಅಂತಿಮ ದರ್ಶನಕ್ಕೆ ಧಾವಿಸಿದ್ದ ಸಾವಿರಾರು ಅಭಿಮಾನಿಗಳಿಗೆ ನಿರಾಸೆಯಾಯಿತು. ಕೆಲವೆಡೆ ಆಕ್ರೋಶ ಮತ್ತೆ ಕೆಲವೆಡೆ ಜೈಕಾರ ಕೇಳಿಬಂದವು.
ಇದಕ್ಕೂ ಮುನ್ನ ಸಮಯದ ಅಭಾವದಿಂದ ಕಂಠೀರವ ಕ್ರೀಡಾಂಗಣದಲ್ಲೇ ಮರಣೋತ್ತರ ಅಷ್ಟೋತ್ತರಿಗಳು ನೆರವೇರಿದವು. ಪ್ರಣವಾನಂದ ಸ್ವಾಮೀಜಿ ದೈವ ದಶಗ, ಗುರು ಶಡ್ಗ ಮತ್ತಿತರ ಮಂತ್ರಪಠಣ ಮಾಡಿದರು. ಬೆಳಗಿನಜಾವ 2.20ಕ್ಕೆ ಶುರುವಾದ ಈ ಕಾರ್ಯವು ಸುಮಾರು 40 ನಿಮಿಷಗಳ ಕಾಲ ನಡೆಯಿತು.
ಮಗನ ಅಂತಿಮ ವಿಧಿಗೆ ಬೆಳಗಿತು ತಂದೆಯ ದೀಪ!
ಪೂಜಾ ವಿಧಿಗಳನ್ನು ನೆರವೇರಿಸುವಾಗ ಮಂಗಳಾರತಿಗೆ ಬೆಳಗಲು ದೀಪದ ಬತ್ತಿಯೇ ಇರಲಿಲ್ಲ. ತತ್‌ಕ್ಷಣ ಸಮಾಧಿ ನೋಡಿಕೊಳ್ಳುವ ಕೆಲಸದಾಳು ಪಕ್ಕದಲ್ಲೇ ಇದ್ದ ಡಾ| ರಾಜ್‌ಕುಮಾರ್ ಅವರ ಸಮಾಧಿ ಮುಂದಿನ ದೀಪವನ್ನು ತಂದರು. ಆಗ ಪೂಜೆ ನೆರವೇರಿತು. ಇದು ಮಡಿಲಿಗೆ ಮರಳಿದ ಮಗನನ್ನು ತಂದೆ ಆರತಿ ಬೆಳಗಿ ಸ್ವಾಗತಿಸಿದಂತಿತ್ತು.
– ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Badminton; ಸಯ್ಯದ್ ಮೋದಿ ಇಂಟರ್‌ನ್ಯಾಶನಲ್: ಸಿಂಧು, ಸೆನ್ ಕ್ವಾರ್ಟರ್‌ಫೈನಲಿಗೆ
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Cricket; ವೇಗಿ ಸಿದ್ದಾರ್ಥ್ ಕೌಲ್ ನಿವೃತ್ತಿ
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.