ಆಟೋ ಹುಲಗಪ್ಪನ ರಾಜ್ಯೋತ್ಸವ ಸಂಭ್ರಮ

Team Udayavani, Nov 1, 2021, 3:54 PM IST

ಆಟೋ ಹುಲಗಪ್ಪನ ರಾಜ್ಯೋತ್ಸವ ಸಂಭ್ರಮ

ಹೊಸಪೇಟೆ: ಕನ್ನಡ ರಾಜ್ಯೋತ್ಸವ ಆಚರಣೆ ಬಂತ್ತೆಂದರೆ ನೂತನ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದ ಆಟೋ ಚಾಲಕರೊಬ್ಬರಿಗೆ ಸಡಗರ-ಸಂಭ್ರಮ.

ಹೌದು! ನಗರದ ಆಟೋಚಾಲಕ ಗುಜ್ಜಲ ಹುಲಗಪ್ಪ ಎಂಬ ಕನ್ನಡಾಭಿಮಾನಿಗೆ ಕನ್ನಡ ಬಾವುಟ ಹಾರಿಸುವುದು, ಕನ್ನಡ ಗೀತೆಗಳನ್ನು ಕೇಳಿಸುವುದು ಎಂದರೆ ಎಲ್ಲಿಲ್ಲದ ಖುಷಿ.

ಕನ್ನಡ ರಾಜ್ಯೋತ್ಸವ ದಿನ ಅವರು ತಮ್ಮ ಆಟೋ ತುಂಬೆಲ್ಲ ಕನ್ನಡ ಧ್ವಜ ರಾರಾಜಿಸುವಂತೆಅಲಂಕಾರ ಮಾಡುವುದು, ಜತೆಗೆ ಧ್ವನಿವರ್ಧಕದ ಮೂಲಕ ಕನ್ನಡ ಅಭಿಮಾನ ಸಾರುವ ಖ್ಯಾತ ಗಾಯಕರ ಕನ್ನಡ ಗೀತೆಗಳನ್ನು ಜನರಿಗೆ ಕೇಳಿಸುವುದು, ಇಡೀ ದಿನ ನಗರ ಪ್ರದಕ್ಷಣೆ ಮಾಡಿ, ಕನ್ನಡಾಭಿಮಾನ ಮೆರೆಯುತ್ತಾರೆ. ಕುವೆಂಪು, ದ.ರಾ. ಬೇಂದ್ರೆ, ಡಾ| ರಾಜಕುಮಾರ್‌, ಯು.ಆರ್‌. ಅನಂತಮೂರ್ತಿ, ಗಿರೀಶ್‌ ಕಾರ್ನಾಡ್‌, ಮಹಾತ್ಮ ಗಾಂಧೀ ಜಿ, ಸುಭಾಷ್‌ ಚಂದ್ರಭೋಷ್‌ ಮುಂತಾದ ಮಹನೀಯರ ಭಾವಚಿತ್ರಗಳನ್ನುಆಟೋದಲ್ಲಿ ಅಳವಡಿಸಿ ಖುಷಿ ಪಡುತ್ತಾರೆ.

ಕಳೆದ 25 ವರ್ಷಗಳಿಂದಲೂ ಕನ್ನಡದ ಮೇಲಿನ ಪ್ರೀತಿಯನ್ನು ಈ ಮೂಲಕ ವ್ಯಕ್ತಪಡಿಸುತ್ತಿರುವ ಆಟೋಚಾಲಕ ಗುಜ್ಜಲ ಹುಲಗಪ್ಪನವರು ಮುಂದಿನ ವರ್ಷ ತಮ್ಮಆಟೋವನ್ನು ಕನ್ನಡ ಧ್ವಜದಿಂದ ಸಿಂಗರಿಸಿಕೊಂಡು ರಾಜಧಾನಿ ಬೆಂಗಳೂರಿನಿಂದ ಹೊಸಪೇಟೆವರೆಗೆಆಗಮಿಸಬೇಕು. ದಾರಿಯುದಕ್ಕೂ ಬರುವ ಗ್ರಾಮ, ಪಟ್ಟಣಗಳಲ್ಲಿ ಕನ್ನಡ ಪ್ರೇಮವನ್ನುಹೊರ ಹಾಕಬೇಕು ಎಂಬುದು ಬಹುದಿನದ ಆಸೆಯಾಗಿದೆ.

ಕನ್ನಡ ರಾಜ್ಯೋತ್ಸವ ಆಚರಣೆ ಮಾತ್ರವಲ್ಲದೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನದಲ್ಲಿ ಕೂಡ ಅವರ ಆಟೋದ ಮೇಲೆ ತ್ರೀವರ್ಣ ಧ್ವಜ ಹಾರಾಡುತ್ತಿರುತ್ತದೆ. ನಾಡ ದೇವತೆ ಭುವನೇಶ್ವರಿ ದೇವಿ ಹಾಗೂ ಭಾರತಮಾತೆ ಭಾವಚಿತ್ರ ಹೊಂದಿರುವಧ್ವಜ ಹಾರಿಸುವುದು, ದೇಶಭಕ್ತಿ ಗೀತೆಗಳನ್ನು ಕೇಳಿಸುವುದು, ನಗರ ಸುತ್ತುವುದು ಇವರ ಪ್ರತಿವರ್ಷದ ವಾಡಿಕೆ. ಗೆಳೆಯರೊಂದಿಗೆ ಸೇರಿಕೊಂಡು ನಗರದ ಜೋಳದ ರಾಶಿ ಗುಡ್ಡದ ತುದಿಯಲ್ಲಿ ರಾಷ್ಟ್ರಧ್ವಜ ಹಾರಿಸಿ ಸಂಭ್ರಮ ಪಡುತ್ತಾರೆ. ಪ್ರತಿವರ್ಷ ನ.1, ಆ.15 ಹಾಗೂ ಜ. 26ರಂದು ನಗರದ ಮೃತ್ಯುಂಜಯ ನಗರದ 9 ನೇ ಕ್ರಾಸ್‌ನ ಆಟೋ ಸ್ಟಾಂಡ್‌ನ‌ಲ್ಲಿಧ್ವಜಾರೋಹಣ ನೆರವೇರಿಸಿ ದೇಶಾಭಿಮಾನ ತೋರುತ್ತಾರೆ.

ಉಚಿತ ಸೇವೆ: ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ದಿನದಂದು ಗರ್ಭಿಣಿ ಹಾಗೂ ವೃದ್ಧರು ಹಾಗೂ ಮಕ್ಕಳಿಗೆ ಹಣ ಪಡೆಯದೇ ತಮ್ಮ ಆಟೋದಲ್ಲಿ ಉಚಿತ ಸೇವೆ ನೀಡುತ್ತಾರೆ.ನ. 1ರಂದು ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕಾಗಿ ತುದಿಗಾಲಿನಲ್ಲಿ ನಿಂತಿರುವ ಹುಲಗಪ್ಪನವರುತಮ್ಮ ಆಟೋವನ್ನು ಈ ವರ್ಷ ವಿಶಿಷ್ಟ ರೀತಿಯಲ್ಲಿ ಅಲಂಕಾರ ಮಾಡುವ ಮೂಲಕ ಕನ್ನಡಪ್ರೇಮವನ್ನು ಮೆರೆಯಬೇಕು. ಈ ಮೂಲಕ ಕನ್ನಡಾಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದವಿಶೇಷ ಶುಭಾಶಯಗಳನ್ನು ಪರಸ್ಪರಹಂಚಿಕೊಂಡು ನಾಡಿಗೆ ಮಾದರಿಯಾಗಬೇಕು ಎಂಬುದು ಇವರ ಸಂಕಲ್ಪ.

1998ರಿಂದ ನಾನು ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ದಿನದಂದು ನನ್ನ ಆಟೋಕ್ಕೆ ಕನ್ನಡ ಬಾವುಟ ಹಾಗೂ ರಾಷ್ಟ್ರಧ್ವಜದಿಂದ ಸಿಂಗಾರ ಮಾಡುತ್ತೇನೆ. ಜತೆಗೆ ನಾಡಿನ ಖ್ಯಾತ ಗಾಯಕರ ಕನ್ನಡ ಅಭಿಮಾನ ಸೂಸುವ ಗೀತೆ ಹಾಗೂ ದೇಶಭಕ್ತಿಗೀತೆಗಳನ್ನು ಧ್ವನಿವರ್ಧಕದ ಮೂಲಕ ದಾರಿಯುದ್ದಕ್ಕೂ ಕೇಳಿಸುತ್ತೇನೆ. ಈ ಮೂಲಕ ದೇಶಾಭಿಮಾನ, ಕನ್ನಡಾಭಿಮಾನ ಮೆರೆಯುತ್ತೇನೆ.– ಗುಜ್ಜಲ ಹುಲಗಪ್ಪ ಆಟೋಚಾಲಕ, ಹೊಸಪೇಟೆ

-ಪಿ. ಸತ್ಯನಾರಾಯಣ

ಟಾಪ್ ನ್ಯೂಸ್

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

1-qewqe

Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.