ಉತ್ತಮ ಸಂಸ್ತಾರ ನೀಡುವವರೇ ಜಂಗಮರು: ಗುಡಗುಂಟಿಮಠ

ಸಾಧಕರನ್ನು ಗುರುತಿಸಿ ಗೌರವಿಸುವುದು ಮುಖ್ಯವಾಗಿದೆ.

Team Udayavani, Nov 1, 2021, 7:58 PM IST

ಉತ್ತಮ ಸಂಸ್ತಾರ ನೀಡುವವರೇ ಜಂಗಮರು: ಗುಡಗುಂಟಿಮಠ

ಜಮಖಂಡಿ: ವೀರಶೈವ ಧರ್ಮ ಸನಾತನ ಧರ್ಮವಾಗಿದೆ. ವೀರಶೈವ ಧರ್ಮದಲ್ಲಿ ಬಹಳಷ್ಟು ಒಳಪಂಡಗಳಿವೆ. ಜಂಗಮ ಸಮಾಜಕ್ಕೆ ಹೆಚ್ಚಿನ ಗೌರವ ಸ್ಥಾನಮಾನವಿದೆ. ಉತ್ತಮ ಸಂಸ್ಕಾರ ನೀಡುವ ಜಂಗಮ ಸಮಾಜದವರು ಮಾದರಿಯಾಗಬೇಕು ಎಂದು ನಾಡೋಜ ಪ್ರಶಸ್ತಿ
ಪುರಸ್ಕೃತ, ಉದ್ಯಮಿ ಜಗದೀಶ ಗುಡಗುಂಟಿಮಠ ಹೇಳಿದರು.

ನಗರದ ನಾಡೋಜ ಗುಡಗುಂಟಿಮಠರ ಸಾಕ್ಷಾತ್ಕಾರ ಭವನದಲ್ಲಿ ರವಿವಾರ ತಾಲೂಕು ಜಂಗಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಜಂಗಮ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
.
ಧರ್ಮ ಪ್ರಚಾರ ಜಂಗಮ ಸಮಾಜದ ಮುಖ್ಯ ಕಾಯಕವಾಗಿದೆ. ಜಂಗಮರಲ್ಲಿ ಸ್ಥಿರ ಮತ್ತು ಚರ ಜಂಗಮರಿದ್ದಾರೆ. ಆಚಾರ-ವಿಚಾರಗಳಲ್ಲಿ ಎಲ್ಲರೂ ಉತ್ತಮವಾಗಿದ್ದರೇ ನಮ್ಮೆಲ್ಲರ ಜೀವನ ಆದರ್ಶಮಯವಾಗಲಿದೆ. ಜಂಗಮರು ಉತ್ತಮ ಸಂಸ್ಕೃತಿ ರೂಢಿಸಿಕೊಳ್ಳಬೇಕು. ಭವ್ಯ ಭಾರತ ದೇಶದಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಪ್ರಜೆಗಳಾಗಬೇಕು ಎಂದರು.

ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯರು, ಓಲೇಮಠದ ಡಾ| ಚನ್ನಬಸವ ಶ್ರೀ, ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ಬನಹಟ್ಟಿಯ ಶರಣಬಸವ ಶಿವಾಚಾರ್ಯರು, ಕೊಣ್ಣೂರ ಹೊರಗಿನ ಮಠದ ಡಾ| ವಿಶ್ವಪ್ರಭುದೇವರು ಸಾನ್ನಿಧ್ಯ ವಹಿಸಿದ್ದರು.

ಬೆಳಗಾವಿಯ ನಿವೃತ್ತ ಉಪನ್ಯಾಸಕ ಸಿ.ಜಿ.ಮಠಪತಿ ಮಾತನಾಡಿ, ಸಮಾಜದ ಅಭಿವೃದ್ದಿಗೆ ಕೈಜೋಡಿಸುವ ಕೆಲಸ ಮಾಡಬೇಕು. ಸಾಧನೆಯಲ್ಲಿ ಸಣ್ಣ-ದೊಡ್ಡದು ಮುಖ್ಯವಲ್ಲ. ಸಾಧಕರನ್ನು ಗುರುತಿಸಿ ಗೌರವಿಸುವುದು ಮುಖ್ಯವಾಗಿದೆ. ಸಮಾಜಮುಖೀಯಾಗಿ ಕೆಲಸ ಮಾಡುವ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡಿದರೇ ಮಾತ್ರ ಸಮಾಜ ಹೆಮ್ಮರವಾಗಿ ಬೆಳೆಯಲು ಸಾಧ್ಯ. ವಿದೇಶಿ ಸಂಸ್ಕೃತಿಯಿಂದ ದೂರವಿದ್ದು, ಭಾರತೀಯ ಸಂಸ್ಕೃತಿ ಆಚರಿಸಬೇಕು.

ವಿದೇಶಿ ಸಂಸ್ಕೃತಿ ಅಳವಡಿಸಿಕೊಂಡರೇ ಹೆತ್ತ ತಂದೆ-ತಾಯಿಗಳು ಅನಾಥಶ್ರಮದಲ್ಲಿ ಜೀವಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿ ವಿದೇಶಿ ಆಚರಣೆಯಲ್ಲಿ ಬಹಳಷ್ಟು ಅಂತರವಿದೆ. ಪ್ರತಿಯೊಬ್ಬರಿಗೂ ಶಿಕ್ಷಣ ಅವಶ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ,
ಪಿಯು ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಜಂಗಮದ ಸಮಾಜದ ಚುನಾಯಿತ ಪ್ರತಿನಿಧಿಗಳಿಗೆ, ಪದೋನ್ನತಿ ಹೊಂದಿದ ಮತ್ತು ನಿವೃತ್ತಿ ಹೊಂದಿರುವ ಹಾಗೂ ವಿಶೇಷ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿದರು. ವೇದಿಕೆಯಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಯಮನೂರ ಮೂಲಂಗಿ, ಬಿಜೆಪಿ ನಗರ ಘಟಕ ಅಧ್ಯಕ್ಷ  ಅಜಯ ಕಡಪಟ್ಟಿ, ಸಿಪಿಐ ಶಿವಯ್ಯ ಮಠಪತಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಸಿ.ಎಸ್‌. ಗಡ್ಡದೇವರಮಠ, ಎಸ್‌.ಎಸ್‌.ನಾಯ್ಕಲಮಠ, ರುದ್ರಯ್ಯ ಕರಡಿ, ಸಂಗು ಮುತ್ತಿನಕಂತಿಮಠ, ಗುರುಮೂರ್ತಯ್ಯ ಮಠಪತಿ, ಆರ್‌.ಎಸ್‌.ಅಕ್ಕಿ, ಅಶೋಕ ಗಾವಿ, ಡಾ| ಮಲ್ಲು ಮಠ, ಚಿಕ್ಕಯ್ಯ ಮಠಪತಿ, ಆಶಾದೇವಿ ಗುಡಗುಂಟಿಮಠ, ಭಾರತಿ ಮಠಪತಿ, ಸೋಮಲಿಂಗ ಹಿರೇಮಠ, ವಿರೂಪಾಕ್ಷಯ್ಯ ಕಂಬಿ ಇದ್ದರು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.