ಮನೆ ಬಾಗಿಲಿಗೆ “ಜನಸೇವಕ’ ಯೋಜನೆಗೆ ಸಿಎಂ ಜಾಲನೆ
Team Udayavani, Nov 2, 2021, 5:50 AM IST
2022ರ ಜ.26ರಂದು ರಾಜ್ಯಾದ್ಯಂತ ವಿಸ್ತರಣೆ ನಿರೀಕ್ಷೆ
ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ಕೊಡುಗೆಯಾಗಿ ಸರಕಾರದ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸುವ “ಜನಸೇವಕ’ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 27 ಕ್ಷೇತ್ರಗಳ 198 ವಾರ್ಡ್‌ಗಳಲ್ಲಿ ವಿವಿಧ ಇಲಾಖೆಗಳ 58 ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು, 2022ರ ಜ.26ರಂದು ರಾಜ್ಯಾದ್ಯಂತ ಜನಸೇವಕ ಯೋಜನೆಯನ್ನು ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.
ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ (ಇ-ಆಡಳಿತ) ಸೋಮವಾರ ವಿಧಾನಸೌಧದ ಪೂರ್ವದ್ವಾರದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಜನಸೇವಕ ಯೋಜನೆಗೆ ಚಾಲನೆ ನೀಡಿದರು. ಇದೇ ವೇಳೆ “ಜನಸ್ಪಂದನ’-ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣ ವ್ಯವಸ್ಥೆ, ಸಹಾಯವಾಣಿ-1902, ಮೊಬೈಲ್ ಆ್ಯಪ್, ವೆಬ್ ಪೋರ್ಟ್‌ಲ್ ಮತ್ತು ಸಾರಿಗೆ ಇಲಾಖೆಯ 30 ಸಂಪರ್ಕರಹಿತ ಆನ್‌ಲೈನ್ ಸೇವೆಗಳನ್ನು ಸಹ ಲೋಕಾರ್ಪಣೆಗೊಳಿಸಲಾಯಿತು.
ಬದಲಾವಣೆಯ ಪರ್ವ: ಸಿಎಂ
ಇಂದು ಕರ್ನಾಟಕದ ಆಡಳಿತದಲ್ಲಿ ಮಹತ್ವದ ದಿನ. ಇದೊಂದು ಬದಲಾವಣೆಯ ಪರ್ವ ಪ್ರಾರಂಭವಾಗುವ ದಿನ. ನಾನು ಸಿಎಂ ಆದ ಸಂದರ್ಭದಲ್ಲಿಯೇ ಜನ ಪರ ಯೋಜನೆ ಜಾರಿಗೆ ತರುತ್ತೇನೆ ಎಂದು ಹೇಳಿದ್ದೆ . ವಿಜಯ ಭಾಸ್ಕರ್ ಅವರ ಆಡಳಿತ ಸುಧಾರಣಾ ಆಯೋಗದ ಶಿಪಾರಸ್ಸಿನಂತೆ ಜನಪರ ಯೋಜನೆಗಳನ್ನು ನವೆಂಬರ್ 1 ರಂದು ಜಾರಿಗೆ ತರುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಾರಿಗೆ ಇಲಾಖೆಯ 30 ಆನ್‌ಲೈನ್ ಸೇವೆಗಳ ಲೋಕಾರ್ಪಣೆ
ವಾಹನ ಮಾರಾಟಗಾರ ಹಂತದಲ್ಲಿ ನೋಂದಣಿ ಪ್ರಕ್ರಿಯೆ, ನೋಂದಣಿ, ರಹದಾರಿ ಹಾಗೂ ಚಾಲನಾ ಅನುಜ್ಞಾ ಪತ್ರ ಮತ್ತಿತರ 30 ಸೇವೆಗಳನ್ನು ಆರ್‌ಟಿಒ ಕಚೇರಿಗಳಿಗೆ ಭೇಟಿ ನೀಡದೇ, ಯಾರದೇ ಸಂಪರ್ಕವಿಲ್ಲದೇ ಮಧ್ಯವರ್ತಿಗಳನ್ನು ನೆಚ್ಚಿಕೊಳ್ಳದೇ ನೇರವಾಗಿ ಆನ್‌ಲೈನ್ ಮೂಲಕ ಪಡೆಯುವ ವ್ಯವಸ್ಥೆಗೆ ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು. 11 ಸಾರಥಿ ಸೇವೆಗಳು, 19 ವಾಹನ್ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ. ಹೆಚ್ಚಿನ ಮಾಹಿತಿಗೆ ಜಠಿಠಿಟs://ಟಚrಜಿvಚಜಚn.ಜಟv.ಜಿn ಗೆ ಸಂಪರ್ಕಿಸಬಹುದು.
ಯಾವ ಇಲಾಖೆಯ ಎಷ್ಟು ಸೇವೆಗಳು
ಜನಸೇವಕ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ 21, ಬಿಬಿಎಂಪಿಯ 18, ಕಾರ್ಮಿಕ ಇಲಾಖೆಯ 9, ಆಧಾರ್ ಪ್ರಾಧಿಕಾರದ 4, ಪೊಲೀಸ್ ಇಲಾಖೆಯ 3, ವಿಕಲಚೇತನ-ಹಿರಿಯ ನಾಗರಿಕರ ಇಲಾಖೆ, ಆರೋಗ್ಯ ಇಲಾಖೆ ಮತ್ತು ಆಹಾರ ಇಲಾಖೆಯ ತಲಾ ಒಂದು ಸೇವೆಗಳು ಲಭ್ಯವಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.