ತ್ರಯೋದಶಿ-ಧನ್‌ತೇರಾಸ್
Team Udayavani, Nov 2, 2021, 6:55 AM IST
ನಾವು ಅಂತ್ಯಂತ ಸಂಭ್ರಮ ದಿಂದ ಆಚರಿಸುವ ಹಬ್ಬವೆಂದರೆ ಅದು ದೀಪಾವಳಿ. ದೀಪಗಳ ಬೆಳಕುಗಳ ಪಟಾಕಿಗಳ ಈ ಹಬ್ಬವು ಕಾಲದಿಂದ ಕಾಲಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಯ ಕ್ರಮದಲ್ಲಿ ಎಷ್ಟೋ ವ್ಯತ್ಯಾಸಗಳನ್ನು ಹೊಂದಿದೆ. ಹಿಂದೆಲ್ಲ ದೀಪಾವಳಿ ಹಬ್ಬ ಬಂತೆಂದರೆ ಮನೆಯ ಮಕ್ಕಳು ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದರು. ಮನೆ ಹಿರಿಯರು ಪೂಜೆ-ಪುನಸ್ಕಾರಗಳಲ್ಲಿ ತೊಡಗಿಸಿಕೊಂಡರೆ ಉಳಿದವರು ಸಹಕರಿಸುತ್ತಿದ್ದರು. ಹಿರಿ ಹೆಂಗಸರು ವಿವಿಧ ಅಡುಗೆಗಳನ್ನು ತಯಾರಿಸುವುದು, ಹೂ ಕಟ್ಟುವುದು ಮಾಡಿದರೆ, ಯುವತಿಯರು ರಂಗೋಲಿ ಚಿತ್ತಾರ ಬಿಡಿಸುವುದರಲ್ಲಿ ಮಗ್ನರಾಗಿರುತ್ತಿದ್ದರು. ಮಕ್ಕಳಂತೂ ಪಟಾಕಿ ಬಿಡುವುದು, ಗೊಂಬೆಯಾಟ, ಕಣ್ಣಾಮುಚ್ಚಾಲೆ, ಪೂಜೆ ಸಮಯದಲ್ಲಿ ಶ್ಲೋಕ ಹೇಳಿ ಘಂಟೆ ಬಾರಿಸುವುದು, ವಿವಿಧ ತಿಂಡಿ ತಿನಿಸುಗಳನ್ನು ತಿಂದು ಸಂಭ್ರಮಿಸುತ್ತಿದ್ದರು. ಹೀಗೆ ಮನೆ ಮಂದಿಯೆಲ್ಲ ಸಡಗರವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅದೆಷ್ಟೋ ಮನೆಗಳಲ್ಲಿ ಇಂತಹ ಸಂಭ್ರಮಾಚರಣೆ ಕಳೆದುಹೋಗಿದೆ. ಹಿರಿಯರು ಮೃತರಾಗಿ ಸಂಪ್ರದಾಯವನ್ನು ಮುನ್ನಡೆಸುವ ಜವಾಬ್ದಾರಿ ಮಗನ ಮೇಲೆ ಬಿದ್ದಾಗ ಮಗ ತಬ್ಬಿಬ್ಟಾಗತೊಡಗುತ್ತಾನೆ. ಆಚರಿಸುವ ಮನಸ್ಸಿದ್ದರೂ ಮಂತ್ರ ಕ್ರಮ ತಿಳಿಯದು. ತಿಳಿ ಹೇಳುವವರಲ್ಲಿ ಹೋಗಿ ಕೇಳಲು ಪುರುಸೊತ್ತಿಲ್ಲ. “ಪಾರ್ಟಿ ನಡೆಸುವುದೇ ಹಬ್ಬ’ ಎಂಬ ಪಾಶ್ಚಾತ್ಯರ ಅನುಕರಣೆಯು ಅನಿವಾರ್ಯ ಎಂಬಂತಾಗಿದೆ.
ಹೀಗೆ ಈ ದೀಪಾವಳಿಯು ಕೃಷ್ಣಾಷ್ಣಮಿ, ನವರಾತ್ರಿಗಳಂತೆ ಯಾವುದೋ ಒಂದು ದೇವತೆಯನ್ನು ಪೂಜಿಸುವ ಹಬ್ಬವಲ್ಲ. ಅನೇಕ ಪೂಜೆಗಳನ್ನೊಳಗೊಂಡ ಹಬ್ಬ.
ಇಪಾಸಿತ ಚತುರ್ದಾಶ್ಯಾಮಿಂದು ಕ್ಷಯ ತಿಥಾ ವಪಿ|
ಊಜ್ವಾಡಾ ಸ್ವಾತಿ ಸಂಯುಕ್ತೆ ತದಾ ದೀಪಾವಲೀ ಭವೇತ್|
ಕುರ್ಯಾತ್ ಸಂಲಗ್ನ ಮೇತಚ್ಚ ದೀಪೋತ್ಸವ ದಿನತ್ರಯಂ||
ಎಂಬಂತೆ ದೀಪಾವಳಿಯು ಶಾಸ್ತ್ರೋಕ್ತವಾಗಿ ಮೂರೇ ದಿನಗಳ ಹಬ್ಬವಾದರೂ ಸಮಗ್ರವಾಗಿ ಗಮನಿಸಿದಾಗ ಐದು ದಿನಗಳಲ್ಲಿ ಆಚರಣೆಗೊಳ್ಳುವ ಹಬ್ಬವೆಂದು ಸ್ಪಷ್ಟವಾಗುತ್ತದೆ. ಆ 5 ಪ್ರಧಾನ ಅಂಗಗಳೇ ಧನ ಪೂಜೆ, ನರಕಚತುರ್ದಶಿ, ಲಕ್ಷ್ಮೀ ಪೂಜೆ. ಗೋಪೂಜೆ , ಬಲೀಂದ್ರ ಪೂಜೆ. ಹೀಗೆ ದೀಪೋತ್ಸವಗಳು, ಪಟಾಕಿ ಹಾರಿಸುವುದು ಆಶ್ವಿನ ಕೃಷ್ಣ ತ್ರಯೋದಶಿಯಿಂದಾರಂಭಿಸಿ ಐದು ದಿನಗಳೂ ನಡೆಯುತ್ತವೆ.
ಈ ತ್ರಯೋದಶಿಯನ್ನು ಗುಜರಾತ್ ಮತ್ತು ಸೌರಾಷ್ಟ್ರಗಳಲ್ಲಿ ಧನ್‌ತೇರಾಸ್ ಎಂದು ಕರೆಯುತ್ತಾರೆ. ಹಿಂದಿನ ದಿನ ಅಥವಾ ಈ ದಿನ ಮನೆಗಳನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸಿ ಮನೆಯಂಗಳವನ್ನು ಶುಚಿಗೊಳಿಸಿ ರಂಗೋಲಿಯಿಂದ ಚಿತ್ತಾರ ಬಿಡಿಸಿ ಲೋಹದ ಪಾತ್ರೆ ದೀಪಗಳನ್ನು ಶುಚಿಗೊಳಿಸಿ ಧನ ಪೂಜೆಯನ್ನು ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ನಮ್ಮೂರುಗಳಲ್ಲಿಯೂ ಧನತ್ರಯೋದಶಿಯಂದು ಈ ದಿನವನ್ನು ಕರೆದು ಈ ದಿನದಲ್ಲಿ ಧನಪೂಜೆ ಮಾಡುತ್ತಾರೆ. ಶಾಸ್ತ್ರಕಾರರು ತಿಳಿಸಿಕೊಡುವಂತೆ, ಅನುಭವದಲ್ಲಿಯೂ ಧನವು ತುಂಬಾ ಪ್ರಾಧಾನ್ಯವನ್ನು ಗಳಿಸಿಕೊಂಡಿದೆ. ಹಿರಿಯರು ತಿಳಿಸಿಕೊಟ್ಟಂತೆ,
ಯದೇತದ್ದ ವಿಣಂ ನಾಮ ಪ್ರಾಣಾಹ್ಯೇತೇ ಬಹಿಶ್ಚರಾಃ|
ನ ತಸ್ಯಹರತೇ ಪ್ರಾಣಾನ್ ಯೋಯಸ್ಯ ಹರತೇ ಧನಂ||
ಧನವೆಂದರೆ ದೇಹದ ಹೊರಗಿರುವ ಪ್ರಾಣವೇ. ಯಾರಾದರೂ ಯಾರದ್ದಾದರೂ ಧನ ವನ್ನು ಹರಣ ಮಾಡಿದರೆ ಅವನ ಪ್ರಾಣವನ್ನೇ ಹರಣ ಮಾಡಿದಂತೆ ಎಂದಿದ್ದಾರೆ. ಧನ ನಷ್ಟಗಳು ಬಂದಾಗ ಪ್ರಾಣ ನಷ್ಟವೇ ಆದಂತೆ ಭಾಸವಾಗುತ್ತದೆ. ಆದ್ದರಿಂದ ನಮ್ಮ ಪ್ರಾಣ ಸಮಾನವಾದ ಧನದ ಪೂಜೆ ಈ ದಿನ ಅತ್ಯಂತ ಶ್ರೇಷ್ಠವೆಂದು ಹಿರಿಯರು ಉಪದೇಶಿಸಿದ್ದಾರೆ. ಹಾಗೆ,
ಆಶ್ವಿನ ಸ್ಯಾಸಿತೇ ಪಕ್ಷೇ ತ್ರಯೋದಶ್ಯಾಂ ನಿಶಾಮುಖೇ|
ಯಮದೀಪಂ ಬಹಿರ್ದದ್ಯಾದಪ ಮೃತುವಿನ ಶ್ಯತಿ||
ಎಂಬ ಸ್ಕಂದಪುರಾಣದ ಮಾತಿನಂತೆ ಆಶ್ವಯುಜ ಕೃಷ್ಣ ಪಕ್ಷದ ತ್ರಯೋದಶಿಯ ಪ್ರದೋಷವಾದ ಪರ್ವಕಾಲದಲ್ಲಿ ಅಂದರೆ ನವೆಂಬರ್ ಎರಡನೇ ದಿನಾಂಕದಂದು ಸಂಜೆ ಕೈಕಾಲು ಮುಖ ತೊಳೆದು ಅಂಗಳದ ತುಳಸಿಕಟ್ಟೆಯ ಬಳಿ ದಕ್ಷಿಣಕ್ಕೆ ಮುಖಮಾಡಿ ಎಳ್ಳೆಣ್ಣೆಯ ಯಮದೀಪವನ್ನು ಅಪಮೃತ್ಯು ಪರಿಹಾರಕ್ಕಾಗಿ,ಮೃತ್ಯು ನಾ ಪಾಶ ದಂಢಾಭ್ಯಾಂ ಕಾಲೇ ಶ್ಯಾಮಯಾ ಸಹ|
ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜ ಪ್ರಿಯತಾಂ ಮಮ||
ಕಾಲ ಮತ್ತು ಮೃತ್ಯು ದೇವತೆಗಳೊಡನಿರುವ ಪಾಶ, ದಂಡಧಾರಿಯಾಗಿ ಶ್ಯಾಮಲಾ ಪತಿಯೂ ಆದ ಸೂರ್ಯಪುತ್ರನಾದ ಯಮನು ಹಾಗೇ ಯಮಾಂತರ್ಗದ ಸೂರ್ಯ ವಂಶಜನಾದ ರಾಮನು ಪ್ರೀತನಾಗಲಿ ಎಂಬರ್ಥವಿರುವ ಈ ಮಂತ್ರವನ್ನು ಮನೆಯವರೆಲ್ಲರೂ ಹೇಳಿ ಪ್ರತ್ಯೇಕ ದೀಪ ಹಚ್ಚಿಟ್ಟು ನಮಸ್ಕರಿಸಬೇಕು. ಒಂದೇ ದೀಪವಾದರೆ ಒಬ್ಬರ ಅನಂತರ ಒಬ್ಬರಂತೆ ದೀಪ ಎತ್ತಿಟ್ಟರಾಯಿತು.
– ವಿಶ್ವಮೂರ್ತಿ ಬಡಕಿಲ್ಲಾಯ, ಸವಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.