ಗುಲಾಲ್ ಡಾಟ್ ಕಾಂ ಈ ವಾರ ತೆರೆಗೆ
Team Udayavani, Nov 3, 2021, 11:40 AM IST
ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಕನಸನ್ನು ಹೊತ್ತು ಪ್ರತಿದಿನ ನೂರಾರು ಮಂದಿ ಗಾಂಧಿನಗರಕ್ಕೆ ಅಡಿಯಿಡುತ್ತಿರುತ್ತಾರೆ. ಆದ್ರೆ ಇದರಲ್ಲಿ ಕೆಲವೇ ಕೆಲವು ಮಂದಿಯಷ್ಟೇ ಅಂದುಕೊಂಡಿದ್ದನ್ನು ಸಾಧಿಸಲು ಸಫಲರಾಗುತ್ತಾರೆ. ಉಳಿದಂತೆ ಗಾಂಧಿನಗರಕ್ಕೆ ಹೀಗೆ ಬಂದವರ ಕಥೆಯೇನು? ಈಗ ಇದೇ ವಿಷಯವನ್ನು ಇಟ್ಟುಕೊಂಡು ಇಲ್ಲೊಂದು ತಂಡ “ಗುಲಾಲ್ ಡಾಟ್ ಕಾಂ’ ಹೆಸರಿನಲ್ಲಿ ಚಿತ್ರವನ್ನು ತೆರೆಮೇಲೆ ತರುತ್ತಿದೆ.
ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಸಿನಿಮಾ ಮಾಡಲು ಬರುವ ಆರು ಜನ ಹುಡುಗರು ಇಲ್ಲಿ ಹೇಗೆ ಹಾದಿ ತಪ್ಪುತ್ತಾರೆ. ಅದರಿಂದ ಏನೇನಾಗುತ್ತದೆ. ಕೊನೆಗೆ ಈ ಸುಳಿಯಿಂದ ಆ ಹುಡುಗರು ಹೊರಗೆ ಬರುತ್ತಾರಾ? ಇಲ್ಲವಾ ಅನ್ನೋದೇ “ಗುಲಾಲ್ ಡಾಟ್ ಕಾಂ’ ಚಿತ್ರದ ಕಥಾಹಂದರ. ತಬಲ ನಾಣಿ, ಬಿಗ್‌ಬಾಸ್ ದಿವಾಕರ್, ಜೋಕರ್ ಹನುಮಂತು, ಸದಾನಂದ್, ಮನು ಜಮಖಂಡಿ, ಶಂಕರ್ ಅಂಬಿಕೇರ್, ನೇತ್ರಾ ಗಗನ್, ಸೋನು ಪಾಟೀಲ್, ಪೂಜಾ, ಶೋಭರಾಜ್, ಮೋಹನ್ ಜುನೇಜಾ ಮೊದಲಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:- ನಿರೂಪಕಿ Manjusha ಬ್ಯೂಟಿಫುಲ್ ಫೋಟೋಸ್
ಶಿವು ಜಮಖಂಡಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ದೇಶನ ಮಾಡಿರುವ “ಗುಲಾಲ್ ಡಾಟ್ ಕಾಂ’ ಚಿತ್ರವನ್ನು “ಜವಾರಿ ಜಂಕ್ಷನ್ ಮೂವೀಸ್’ ಬ್ಯಾನರ್‌ನಲ್ಲಿ ಡಾ. ಗೋಪಾಲಕೃಷ್ಣ ಹವಾಲ್ದಾರ್ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಧನಂಜಯ್ ಹೆಚ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಚಿತ್ರಕ್ಕೆ ಮುಂಜಾನೆ ಮಂಜು ಛಾಯಾಗ್ರಹಣ, ಎಲ್.ಆರ್ ಶೆಟ್ಟಿ ಸಂಕಲನವಿದೆ. ಚಿತ್ರವನ್ನು ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಹುಬ್ಬಳ್ಳಿ ಮೊದಲಾದ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ. ಸದ್ಯ ಪ್ರಚಾರ ಕಾರ್ಯಗಳಲ್ಲಿರುವ ಚಿತ್ರತಂಡ ಇದೇ ಶುಕ್ರವಾರ ರಾಜ್ಯಾದ್ಯಂತ ಸುಮಾರು 70ಕ್ಕೂ ಹೆಚ್ಚು ಕೇಂದ್ರಗಳಲ್ಲಿ “ಗುಲಾಲ್ ಡಾಟ್ ಕಾಂ’ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್; ದಶಕದ ಬಳಿಕ ಕನ್ನಡಕ್ಕೆ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.