ಬೆಳಕಿನ ಹಬ್ಬಕ್ಕೆ ಹಣತೆ ವ್ಯಾಪಾರ ಜೋರು

ಹತ್ತಾರು ಮಾದರಿ ಹಣತೆಗಳ ಮಾರಾಟ  ಹಣತೆ ಬೆಲೆ ಹೆಚ್ಚಿದ್ದರೂ ರೂ ಖರೀದಿ ಹಸಿರು ಪಟಾಕಿಗೆ ಆದ್ಯತೆ

Team Udayavani, Nov 3, 2021, 12:18 PM IST

ಬೆಳಕಿನ ಹಬ್ಬಕ್ಕೆ ಹಣತೆ ವ್ಯಾಪಾರ ಜೋರು

ದೇವನಹಳ್ಳಿ: ದೀಪಾವಳಿ ಹಬ್ಬ ಆಚರಿಸಲು ಜಿಲ್ಲೆಯ ಜನತೆ ಉತ್ಸುಕರಾಗಿದ್ದಾರೆ. ಮಹಿಳೆಯರು ಮನೆ ಮುಂದೆ ದೀಪ ಹಚ್ಚಲು ಹಣತೆಗಳ ಖರೀದಿಯಲ್ಲಿ ತೊಡಗಿದ್ದಾರೆ. ಜೇಡಿ ಮಣ್ಣಿನಿಂದ ತಯಾರಿಸಿದ ಬಣ್ಣ ಬಣ್ಣದ ಹಣತೆ ಹಾಗೂ ದೀಪಾಲಂಕಾರಗಳು ಹತ್ತಾರು ಮಾದರಿಯ ಹಣತೆಗಳು ಸೇರಿದಂತೆ ವಿವಿಧ ಬಗೆಯ ಹಣತೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ದೀಪಾವಳಿ ಎಂದರೆ, ದೀಪಗಳ ಸಾಲು. ಕಾರ್ತಿಕ ಮಾಸ ಮುಗಿಯುವವರೆಗೂ ದೀಪ ಹಚ್ಚುವುದು ಸಂಪ್ರದಾಯ. ಭಾರತದಲ್ಲಿ ಧಾರ್ಮಿಕ, ಐತಿಹಾಸಿಕ ಪರಂಪರೆಯನ್ನು ಮಹತ್ವದ್ದಾಗಿದೆ. ವಿಶೇಷವಾಗಿ ಮಣ್ಣಿನ ಹಣತೆಗಳು ಕಣ್ಮನ ಸೆಳೆಯುತ್ತಿದೆ. ನಗರದಲ್ಲಿ ಹಣತೆಗಳ ಖರೀದಿ ಜೋರಾಗಿ ನಡೆದಿದೆ. ಹತ್ತಾರು ಮಾದರಿಯ ಮನಸೆಳೆಯುವ ಹಣತೆಗಳು ಮಾರಾಟಕ್ಕಿಡಲಾಗಿದೆ. ಹಣತೆಗಳ ದರ ಸ್ವಲ್ಪ ಹೆಚ್ಚಾಗಿದ್ದರೂ, ಹಬ್ಬ ಆಚರಿಸಲು ಜನ ಖರೀದಿಯಲ್ಲಿ ತೊಡಗಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ ತಳ್ಳುವ ಗಾಡಿಗಳಲ್ಲಿ, ರಸ್ತೆ ಬದಿಗಳಲ್ಲಿ ಹಣತೆಗಳ ಮಾರಾಟ ಜೋರಾಗಿಯೇ ಇದೆ.

 ಹಸಿರು ಪಟಾಕಿಗೆ ಆದ್ಯತೆ: ಸಾಮಾನ್ಯವಾಗಿ ಮಣ್ಣಿನ ದೀಪ, ಪಿಂಗಾಣಿ ದೀಪ ಹೆಚ್ಚಿನ ಬೇಡಿಕೆ ಇದ್ದು, ಮಣ್ಣಿನ ಅಲಂಕಾರಿಕ ವಸ್ತುಗಳು 5 ರೂ.ಯಿಂದ 150 ರೂ.ಗಳವರೆಗೆ ವ್ಯಾಪಾರ ಮಾಡಲಾಗುತ್ತಿತ್ತು. ಪ್ಲಾಸ್ಟಿಕ್‌ ವಸ್ತುಗಳ ಭರಾಟೆಯಲ್ಲಿ ಜೇಡಿ ಮಣ್ಣಿನಿಂದ ತಯಾರಿಸಿದ ಹಣತೆ ಗ್ರಾಹಕರಿಗೆ ಇಷ್ಟವಾಗುತ್ತಿದೆ.

ಇದನ್ನೂ ಓದಿ;- ಸಾಹಿತಿ, ಕಲಾವಿದರ ಮನೆಗೆ ಭೇಟಿ-ಸನ್ಮಾನ

ಈಗಾಗಲೇ ಜಿಲ್ಲಾಡಳಿತ ಪಟಾಕಿ ಮಾರಾಟ ಮತ್ತು ಸುಡುವುದನ್ನು ನಿಷೇಧಿಸಿದೆ. ಹಸಿರು ಪಟಾಕಿಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದೆ. ವಿವಿಧ ಬಗೆಯ ದೀಪಗಳು: ವಿವಿಧ ವಿನ್ಯಾಸದ ಹಣತೆ ತಯಾರಿಸುವುದರಲ್ಲದೆ, ತೆಂಗಿನ ಕಾಯಿ ಮಾದರಿ ಯ ಆಕಾರ ಅದರಲ್ಲಿ ದೀಪ, ತಳಸಿಕಟ್ಟೆ, ಬೃಂದಾ ವನ, ತಟ್ಟೆಯ ಹಣತೆ, ಒಂದು ದೀಪದಲ್ಲಿ 2 ಹಾಗೂ 5 ಕಡೆ ಬತ್ತಿ ಹಾಕುವ ರೀತಿಯಲ್ಲಿ ಹಣತೆಯ ವಿನ್ಯಾಸ, ಮನೆ ಬಾಗಿಲಿ ನಲ್ಲಿ ದೀಪವಿಟ್ಟಾಗ ಗಾಳಿಯಲ್ಲಿ ಹಾರಿ ಹೋಗ ದಂತೆ ಪುರಾತನ ಕಾಲದ ಲ್ಯಾಂಪ್‌ ರೀತಿಯ ದೀಪ ಗಳು ಗಮನ ಸೆಳೆಯುತ್ತಿದೆ. ಮೂಲತಃ ರಾಜ ಸ್ಥಾನ, ಜೋಧ್‌ ಪುರ, ಇತರೆ ಭಾಗಗಳಿಂದ ದೀಪಗಳನ್ನು ತಂದು ಮಾರಾಟಕ್ಕಿಡಲಾಗಿದೆ. ಕರ್ನಾಟಕದಲ್ಲಿಯೂ ಸಹ ವಿವಿಧ ಅಲಂಕಾರಿಕ ದೀಪಗಳ ಮಾರಾಟವಾಗುತ್ತಿದೆ.

“ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸಬೇಕು. ಹಸಿರುವ ಪಟಾಕಿ ಬಳಸಬೇಕು. ಸುರಕ್ಷತಾ ಕ್ರಮ ಪಾಲಿಸಿ, ಮಾಲಿನ್ಯ ರಹಿತ ದೀಪಾವಳಿಯನ್ನು ಆಚರಿಸಬೇಕು. ಮನೆಗಳ ಹತ್ತಿರ ಸಾರ್ವಜನಿಕರು ಹಣತೆಗಳ ದೀಪವನ್ನು ಹಚ್ಚಿ ದೀಪಾವಳಿಯನ್ನು ಆಚರಿಸುವಂತೆ ಆಗಬೇಕು. ಜಿಲ್ಲಾಡಳಿತಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.” ಕೆ. ಶ್ರೀನಿವಾಸ್‌, ಜಿಲ್ಲಾಧಿಕಾರಿ

“ಹಿರಿಯರು ಅನಾದಿ ಕಾಲ ದಿಂದಲೂ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿ ಭಕ್ತಿ ಸಮರ್ಪಿಸುತ್ತಿದ್ದರು. ಅದನ್ನು ಮುಂದುವರಿಸಿಕೊಂಡು ಹೋಗಲು ಜೇಡಿಮಣ್ಣಿನ ಹಣತೆ ಖರೀದಿಸುತ್ತಿದ್ದೇವೆ. ಈ ಬಾರಿ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ.” ರೂಪಾ, ಗ್ರಾಹಕಿ

●ಎಸ್‌.ಮಹೇಶ್‌

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.