ಸತ್ತವರಿಗೆ ಸಾಲ ನೀಡಿದ್ದರೆ ಶೀಘ್ರ ತನಿಖೆ
ನಿಮ್ಮದೇ ಸರ್ಕಾರವಿದೆ, ಎಫ್‌ಐಆರ್ ಹಾಕಿಸಿ ಸಚಿವರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಲಹೆ
Team Udayavani, Nov 3, 2021, 3:30 PM IST
ಕೋಲಾರ: ಮೃತಪಟ್ಟವರ ಹೆಸರಿನಲ್ಲಿ ಕೋಲಾರ- ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮೂಲಕ ಸಾಲ ಮಂಜೂರಾಗಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿ ಎಂದು ಉಸ್ತುವಾರಿ ಸಚಿವ ಮುನಿರತ್ನಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನವಿ ಮಾಡಿದರು.
ನಗರದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ತವರ ಹೆಸರಲ್ಲಿ ಸಾಲ ನೀಡಲಾಗಿದೆ ಎಂಬ ಸಚಿವರ ಆರೋಪವನ್ನು ತಳ್ಳಿಹಾಕಿದರು. ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುತ್ತಿದ್ದೇವೆ. ಸಹಕಾರ ವ್ಯವಸ್ಥೆ ಬಡವರ ವ್ಯವಸ್ಥೆಯಾಗಿದೆ, ಸತ್ತವರ ಹೆಸರಿನಲ್ಲಿ ಸಾಲ ಕೊಟ್ಟಿದ್ದೇವೆ ಎಂಬ ನಿಮ್ಮ ಆರೋಪ ಗಂಭೀರವಾದುದು.
ಅಧಿಕಾರ ತಮ್ಮ ಬಳಿಯೇ ಇದೆ, ನೀವು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದೀರಿ. ವ್ಯವಸ್ಥೆಗೆ ಯಾರು ದೊಡ್ಡವರಲ್ಲ. ತಪ್ಪು ಮಾಡಿದವರ ವಿರುದ್ಧ ಎಫ್‌ಐಆರ್ ಹಾಕಿಸಿ ಎಂದು ಸಲಹೆ ನೀಡಿದರು. ಎಫ್ಐಆರ್ ಹಾಕಿಸಿ: ಸತ್ತವರ ಹೆಸರಿನಲ್ಲಿ ಸಾಲ ನೀಡಲು ಸಾಧ್ಯವೇ ಇಲ್ಲ. ಹೇಳಿಕೆ ಹೇಳಿಕೆಯಾಗಿ ಇರಬಾರದು. ತತ್‌ಕ್ಷಣ ತನಿಖೆ ನಡೆಸಿ ಎಫ್‌ಐಆರ್ ಹಾಕಿಸಿ. ತಪ್ಪು ಮಾಡಿದವರನ್ನು ಶಿಕ್ಷೆಗೆ ಒಳಪಡಿಸು ವುದು ಅಧಿಕಾರದಲ್ಲಿರುವವರ ಜವಾಬ್ದಾರಿ.
ಇದನ್ನೂ ಓದಿ;- ಆಟವಾಡುವ ವೇಳೆ ನೀರಿನ ಗುಂಡಿಯಲ್ಲಿ ಮುಳುಗಿ ಮೂವರು ಮಕ್ಕಳ ಸಾವು
ಅಧ್ಯಕ್ಷ ನಾಗಿ ತಪ್ಪುಗಳು ಆಗದಂತೆ ಎರಡೂ ಜಿಲ್ಲೆಯಲ್ಲಿ ಎಚ್ಚರಿಕೆಯಿಂದ ನಡೆದುಕೊಂಡಿರುವ ಆತ್ಮತೃಪ್ತಿ ಇದೆ ಎಂದು ಹೇಳಿದರು. ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿರುವುದೇ ಆದರೆ, ತ್ವರಿತವಾಗಿ ತನಿಖೆ ನಡೆಸಿ. ಕ್ರಮ ಕೈಗೊಳ್ಳಲಿ, ದಯಮಾಡಿ ಬ್ಯಾಂಕಿಂಗ್ ವ್ಯವಸ್ಥೆಗೆ ಧಕ್ಕೆಯಾಗುವ ಸುಳ್ಳು ಹೇಳಿಕೆಗಳನ್ನು ನೀಡದಿರಿ ಎಂದು ಮನವಿ ಮಾಡಿದರು.
ವಾಸ್ತಾಂಶ ಅರಿಯಿರಿ: ಸಹಕಾರ ಸಂಘಗಳು ಬ್ಯಾಂಕಿನ ವ್ಯಾಪ್ತಿಗೆ ಒಳಪಡುವುದಿಲ್ಲ. ನಿಮ್ಮದೇ ಸರ್ಕಾರದ ಸಹಕಾರ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತವೆ. ರೈತರು, ಮಹಿಳೆಯರು ಸಾಲಕ್ಕಾಗಿ ಸಂಘಕ್ಕೆ ಅರ್ಜಿ ಹಾಕಿದಾಗ ಬೇಡಿಕೆಗೆ ತಕ್ಕಂತೆ ಹಣ ನೀಡಲಾಗುತ್ತದೆ. ವಾಸ್ತವಾಂಶ ಅರಿತು ಮಾತನಾಡಿದರೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ ಎಂದು ಹೇಳಿದರು.
ಬ್ಯಾಂಕ್‌ಗೆ ಶಕ್ತಿ ತುಂಬಿದ್ದೇವೆ: 2014ಕ್ಕೆ ಮುನ್ನಾ ದಿವಾಳಿಯಾಗಿ ಸತ್ತು ಹೋಗಿದ್ದಂತಹ ಬ್ಯಾಂಕಿಗೆ ಶಕ್ತಿ ತುಂಬಿ ಬದುಕಿಸಲಾಗಿದೆ. ಇಲ್ಲಿ ನಮಗೇನು ಅಕಾರ ಶಾಶ್ವತವಲ್ಲ. ಬೆಳೆ ಸಾಲ ಕೊಡುವಾಗ ಮಾರ್ಟ್ ಗೇಜ್(ಅಡವು) ಮಾಡಿಯೇ ಸಾಲ ಮಂಜೂರು ಮಾಡಲಾಗುತ್ತದೆ. ರೈತರು ಆನ್‌ಲೈನ್ ಮೂಲಕವೇ ವ್ಯವಹಾರ ನಡೆಸುತ್ತಾರೆ. ಹೀಗಿರುವಾಗ ಹೇಗೆ ಅವ್ಯವಹಾರ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದರು.
ತಪ್ಪು ಮಾಡಿದ್ರೆ ಜೈಲಿ ಹೋಗಲು ಸಿದ್ಧ: ಬಡ್ಡಿ ಕ್ಲೈಮ್ ಮಾಡುವುದು ಇಲಾಖೆಯ ಅಧಿಕಾರಿಗಳ ಜವಾಬ್ದಾರಿ. ಬಿಲ್ ತಯಾರಿಸುವುದು ಅಧಿಕಾರಿಗಳ ಜವಾಬ್ದಾರಿ. ವ್ಯವಸ್ಥೆಯಲ್ಲಿ ಯಾರು ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಲೇಬೇಕು, ಡಾ. ಬಿ.ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನ ದಡಿ ಬದುಕುತ್ತಿದ್ದೇವೆ. ತಪ್ಪು ಮಾಡಿರುವುದು ಸಾಭೀತಾದರೆ ಜೈಲಿಗೆ ಹೋಗುವುದು ಖಚಿತ. ದೇಶದಲ್ಲಿ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಂದು ಸ್ಪಷ್ಟಪಡಿಸಿದರು. ವಿನಾಕಾರಣ ರಾಜಕೀಯ ಸ್ವಾರ್ಥಕ್ಕಾಗಿ ಬಡವರು, ರೈತರು, ತಾಯಂದಿರಿಗೆ ಆರ್ಥಿಕ ಬಲ ತುಂಬಿರುವ ಬ್ಯಾಂಕ್ ವಿರುದ್ಧ ಮಾತನಾಡಿ, ಬ್ಯಾಂಕಿನ ಘನತೆಗೆ ಚ್ಯುತಿ ತಾರದಿರಿ, ಬ್ಯಾಂಕನ್ನು ಹಾಳು ಮಾಡಿದರೆ ಅದು ರೈತರು, ಮಹಿಳೆಯರಿಗೆ ಮಾಡಿದ ದ್ರೋಹ ವಾಗುತ್ತದೆ, ತಪ್ಪಾಗಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.