ಬೆಳಕಿನ ಹಬ್ಬಕ್ಕೆ ಹಸಿರು ಪಟಾಕಿ ರಂಗು
Team Udayavani, Nov 3, 2021, 5:17 PM IST
ಶಿವಮೊಗ್ಗ: ದೀಪಾವಳಿ ಹಿನ್ನೆಲೆಯಲ್ಲಿ ನಗರದಲ್ಲಿಪಟಾಕಿ ಮಾರಾಟ ಆರಂಭವಾಗಿದೆ. ನಗರದಎರಡು ಕಡೆ ಪಟಾಕಿ ಮಾರಾಟ ಮಳಿಗೆಗಳನ್ನುಸ್ಥಾಪಿಸಲಾಗಿದೆ.
ಬಗೆ ಬಗೆಯ ಪಟಾಕಿಗಳುಮಾರುಕಟ್ಟೆಗೆ ಬಂದಿವೆ. ಆದರೆ ಪೆಟ್ರೋಲ್,ಡೀಸೆಲ್ ದರ ಏರಿಕೆಯಿಂದಾಗಿ ಪಟಾಕಿಗಳ ಬೆಲೆತುಸು ಹೆಚ್ಚಳವಾಗಿದೆ.
ಶಿವಮೊಗ್ಗದ ನೆಹರೂ ಕ್ರೀಡಾಂಗಣ ಮತ್ತು ಸೈನ್ಸ್‌ಮೈದಾನದಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನುಸ್ಥಾಪಿಸಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂಬಗೆ ಬಗೆಯ ಪಟಾಕಿಗಳನ್ನು ಮಳಿಗೆಗಳಲ್ಲಿಇರಿಸಲಾಗಿದೆ.ವಾಯು ಮಾಲಿನ್ಯ ತಡೆಗಟ್ಟುವ ಸಲುವಾಗಿಹಸಿರು ಪಟಾಕಿ ಮಾರಾಟ ಮಾಡುವಂತೆ ಸರ್ಕಾರಸೂಚಿಸಿದೆ. ಕಳೆದ ವರ್ಷ ಹಬ್ಬಕ್ಕೆ ಒಂದೆರಡು ದಿನಮೊದಲು ಹಸಿರು ಪಟಾಕಿ ಮಾರಾಟ ಮಾಡುವಂತೆಸರ್ಕಾರ ಸೂಚಿಸಿದ್ದರಿಂದ, ವ್ಯಾಪಾರಿಗಳು ನಷ್ಟಅನುಭವಿಸಿದ್ದರು.
ಆದ್ದರಿಂದ ಈ ಭಾರಿ ಸಂಪೂರ್ಣಹಸಿರು ಪಟಾಕಿಗಳನ್ನು ಮಾರಾಟಕ್ಕೆ ಇರಿಸಲಾಗಿದೆ.ಗ್ರಾಹಕರು ಕೂಡ ಹಸಿರು ಪಟಾಕಿಯನ್ನೇ ಕೇಳಿಖರೀದಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಈ ಬಾರಿಯೂ ಹತ್ತಾರು ವಿಧದ ಪಟಾಕಿಗಳನ್ನುಮಾರಾಟಕ್ಕೆ ಇಡಲಾಗಿದೆ. ಮಕ್ಕಳು ಇಷ್ಟಪಡುವವಿವಿಧ ಪಟಾಕಿಗಳಿಗೆ ಸ್ವಲ್ಪ ಬೇಡಿಕೆ ಇದೆ. ಬಗೆಬಗೆಯ ಪಿಸ್ತೂಲುಗಳನ್ನು ಇರಿಸಲಾಗಿದ್ದು, ಮಕ್ಕಳಕಣ್ಸೆಳೆಯಲಿವೆ. ಇನ್ನು, ಕಳೆದ ಬಾರಿಗಿಂತಲೂ ಈಭಾರಿ ಪಟಾಕಿ ಬೆಲೆ ಸ್ವಲ್ಪ ಹೆಚ್ಚಳವಾಗಿದೆ ಎಂದುವ್ಯಾಪಾರಿಗಳು ತಿಳಿಸಿದ್ದಾರೆ. ಶೇ.10ರಷ್ಟು ದರಏರಿಕೆಯಾಗಿರುವ ಕುರಿತು ವ್ಯಾಪಾರಿಗಳು ಬೇಸರವ್ಯಕ್ತಪಡಿಸಿದ್ದಾರೆ.ಪೆಟ್ರೋಲ್, ಡಿಸೇಲ್ ದರ ಹೆಚ್ಚಳದ ಬಿಸಿಪಟಾಕಿಗೂ ತಟ್ಟಿದೆ.
ತಮಿಳುನಾಡು ಸೇರಿದಂತೆವಿವಿಧೆಡೆಯಿಂದ ಪಟಾಕಿ ತರಿಸಲಾಗಿದೆ. ಡೀಸೆಲ್‌ದರದ ಏರಿಕೆಯಿಂದಾಗಿ ಪಟಾಕಿ ಸಾಗಣೆ ವೆಚ್ಚದುಬಾರಿಯಾಗಿದೆ. ಇದು ಕೂಡ ಗ್ರಾಹಕರ ಜೇಬುಸುಡಲಿದೆ.ಕೋವಿಡ್ ಮತ್ತು ಲಾಕ್‌ಡೌನ್‌ನಿಂದಾಗಿಪಟಾಕಿ ಉದ್ಯಮದ ಮೇಲೆ ಭಾರೀ ಪೆಟ್ಟುಬಿದ್ದಿದೆ. ಪಟಾಕಿ ಖರೀದಿ ಮಾಡುವವರ ಸಂಖ್ಯೆದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಇದರಪರಿಣಾಮ ಶಿವಮೊಗ್ಗದಲ್ಲಿ ಪಟಾಕಿ ಮಾರಾಟಗಾರರಸಂಖ್ಯೆ ಕುಸಿತ ಕಾಣುತ್ತಿದೆ. ಈ ಬಾರಿ ನೆಹರೂಸ್ಟೇಡಿಯಂನಲ್ಲಿ 11 ಮಳಿಗೆಗಳು ಮಾತ್ರ ಇವೆ.ಕಳೆದ ವರ್ಷ ಸುಮಾರು 15 ಮಳಿಗೆಗಳಿದ್ದವು.ಗ್ರಾಹಕರ ಸಂಖ್ಯೆಯೂ ಇಳಿಮುಖವಾಗಿದೆಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.ನಿರೀಕ್ಷೆಯಂತೆ ಗ್ರಾಹಕರು ಪಟಾಕಿ ಖರೀದಿಗೆಬರುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಪಟಾಕಿ ಮಳಿಗೆ ಬಾಡಿಗೆ ಪಡೆಯಲು ಮಹಾನಗರಪಾಲಿಕಗೆ ನಿಗದಿತ ಶುಲ್ಕ ಪಾವತಿಸಬೇಕು. ಆ ಬಳಿಕಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮಳಿಗೆಗಳನ್ನುಒದಗಿಸಲಾಗುತ್ತದೆ. ಅಗ್ನಿ ಅವಘಡ ಸಂಭವಿಸಿದರೆಬೆಂಕಿ ನಿಯಂತ್ರಿಸಲು ಪ್ರತಿ ಮಳಿಗೆಯ ಮುಂದೆನೀರಿನ ಡ್ರಮ್ ಇಡಲಾಗಿದೆ. ಒಂದು ಬಕೆಟ್‌ನಲ್ಲಿಮರಳು ಮತ್ತು ನೀರು ಇಡಲಾಗಿದೆ.
ಆದರೆಪ್ರತ್ಯೇಕವಾಗಿ ಅಗ್ನಿಶಾಮಕ ವಾಹನ ಮತ್ತುಸಿಬ್ಬಂದಿಯನ್ನು ನಿಯೋಜಿಸಬೇಕು ಎಂದುಕೆಲವು ವ್ಯಾಪಾರಿಗಳು ಆಗ್ರಹಿಸಿದ್ದಾರೆ. ವಿದ್ಯುತ್‌ದೀಪದ ಸಂಪರ್ಕವು ಕಡಿಮೆ ಎಂಬ ಆರೋಪವುಕೇಳಿ ಬಂದಿವೆ. ದೀಪಾವಳಿ ಸಮೀಪದಲ್ಲಿದ್ದರೂಜನರು ಪಟಾಕಿ ಖರೀದಿಗೆ ನಿರಾಸಕ್ತಿ ತೋರಿದ್ದಾರೆ.ಇದು ವ್ಯಾಪಾರಿಗಳನ್ನು ಚಿಂತೆಗೀಡು ಮಾಡಿದೆ.ಬುಧವಾರದಿಂದ ಪಟಾಕಿ ಖರೀದಿ ಬಿರುಸುಪಡೆಯುವ ಸಾದ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.