ಮನೆ-ಮನೆಗೆ ಲಸಿಕೆ: ಪ್ರಧಾನಿ ಮೋದಿ ಸಲಹೆ
Team Udayavani, Nov 4, 2021, 6:50 AM IST
ಹೊಸದಿಲ್ಲಿ: “ಜನರಿಗೆ ಲಸಿಕೆ ಹಾಕುವ ವಿಚಾರದಲ್ಲಿ ಉದಾಸೀನ ಸಲ್ಲದು. ಇನ್ನು ಮನೆ-ಮನೆಗೆ ತೆರಳಿ ಲಸಿಕೆ ನೀಡಬೇಕು. ಹೊಸ ರೀತಿಯಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳುವಂತೆ ಮಾಡುವ ಬಗ್ಗೆ ಯೋಚಿಸಿ. ಮನವೊಲಿಕೆಗೆ ಧಾರ್ಮಿಕ ಮುಖಂಡರ ಮೊರೆ ಹೋಗಿ.’ಇದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಜ್ಯ ಸರಕಾರಗಳಿಗೆ, ಅಧಿಕಾರಿಗಳಿಗೆ ನೀಡಿದ ಸೂಚನೆ.
ಶೇ. 50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ 11 ರಾಜ್ಯಗಳ 40 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಆಯಾ ಜಿಲ್ಲೆಗಳು ಒಳ ಪಡುವ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗಿನ ವೀಡಿಯೋ ಸಂವಾದದಲ್ಲಿ ಪ್ರಧಾನಿ ಈ ಸಲಹೆ ಮಾಡಿದ್ದಾರೆ.
ಅಶಾ ಕಾರ್ಯಕರ್ತೆಯರು ಮತ್ತು ಜಿಲ್ಲೆಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಅತ್ಯಂತ ಕುಗ್ರಾಮದಲ್ಲಿರುವ ನಿವಾಸಿಗಳಿಗೆ ಕೂಡ ಲಸಿಕೆ ನೀಡುವಲ್ಲಿ ಶ್ರಮಿಸಿದ್ದಾರೆ. ಅವರು ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, “ನಿಮ್ಮ ಸಹಾಯ ದಿಂದಲೇ 100 ಕೋಟಿ ಡೋಸ್ ಲಸಿಕೆ ನೀಡುವ ಗುರಿ ಸಾಧಿಸಲಾಗಿದೆ’ ಎಂದರು.
ಇನ್ನು ಮನೆ ಮನೆಗೆ
ಇದುವರೆಗೆ ಜನರನ್ನು ಕೇಂದ್ರಗಳಿಗೆ ಕರೆತಂದು ಲಸಿಕೆ ಹಾಕಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾ ಗಿದ್ದಾರೆ. ಮುಂದಿನ ದಿನಗಳಲ್ಲಿ ಅಶಕ್ತರಿಗೆ, ಮನೆಯಿಂದ ಹೊರಬರಲು ಸಾಧ್ಯವಾಗದವರಿಗೆ ಲಸಿಕೆ ನೀಡಲು ಅವರಿದ್ದಲ್ಲಿಗೇ ತೆರಳಬೇಕಾಗಿದೆ. ಈ ಮೂಲಕ ಎಲ್ಲ ಅರ್ಹ ವಯಸ್ಸಿನವರಿಗೆ ಲಸಿಕೆ ನೀಡುವ ಗುರಿ ಸಾಧಿಸಬೇಕು ಮತ್ತು ಸೋಂಕನ್ನು ಪೂರ್ಣ ಪ್ರಮಾಣದಲ್ಲಿ ಮಣಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ:3 ವರ್ಷಗಳಲ್ಲಿ 10000 ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ
ಧಾರ್ಮಿಕ ಮುಖಂಡರನ್ನು ಬಳಸಿ
ಇನ್ನೂ ಲಸಿಕೆಗೆ ಬಾಕಿ ಇರುವವರು ಹಾಕಿಸಿ ಕೊಳ್ಳು ವಂತೆ ಮತ್ತು ಹಲವು ಭಾಗಗಳಲ್ಲಿ ಲಸಿಕೆ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ದೂರ ಮಾಡಲು ಆಯಾ ಪ್ರದೇಶದ ಧಾರ್ಮಿಕ ಮುಖಂಡರನ್ನು ಬಳಸಬೇಕು ಎಂದು ಪ್ರಧಾನಿ ಸಲಹೆ ಮಾಡಿದರು. ಕೆಲವು ಪ್ರದೇಶಗಳಲ್ಲಿ ಮೊದಲ ಡೋಸ್ ಪಡೆಯದವರೂ ಇದ್ದಾರೆ. ಅವರನ್ನು ಗುರುತಿಸಿ ಲಸಿಕೆ ಹಾಕುವ ಬಗ್ಗೆ ಮುತು ವರ್ಜಿ ವಹಿಸಬೇಕಾಗಿದೆ ಎಂದರು.
“100 ವರ್ಷಗಳಿಗೆ ಹೋಲಿಸಿದರೆ ಇದೊಂದು ದೊಡ್ಡ ಪಿಡುಗು ಮತ್ತು ಅದರಿಂದಾಗಿ ಹಲವು ರೀತಿಯ ಸವಾಲುಗಳು ಎದುರಾಗಿವೆ. ಸೋಂಕಿನ ವಿರುದ್ಧದ ಹೋರಾಟದಲ್ಲಿ ದೇಶದಲ್ಲಿ ಹಲವು ಪರಿಹಾರಗಳು, ವಿನೂತನ ಪದ್ಧತಿಗಳ ಆವಿಷ್ಕಾರದ ಮೂಲಕ ಸಮಸ್ಯೆ ನಿಭಾಯಿಸಲು ಕಲಿತಿದ್ದೇವೆ. ನಿಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಲಸಿಕೆ ಹಾಕಿಸುವ ಪ್ರಮಾಣ ಹೆಚ್ಚಿಸಲು ಮತ್ತು ಜನರ ಮನವೊಲಿಕೆಗೆ ಹಲವು ವಿನೂತನ ಕ್ರಮಗಳನ್ನು ಸ್ಥಳೀಯ ಆಡಳಿತ ಕೈಗೊಳ್ಳಬೇಕು’ ಎಂದರು.
ಅ. 29ರಿಂದ ನ. 2ರ ವರೆಗೆ ಪ್ರಧಾನಿ ಇಟೆಲಿ ಮತ್ತು ಯುನೈಟೆಡ್ ಕಿಂಗ್‌ಡಮ್ ಪ್ರವಾಸದಲ್ಲಿದ್ದರು. ನ. 2ರಂದು ಪ್ರವಾಸದಿಂದ ಸ್ವದೇಶಕ್ಕೆ ವಾಪಸಾದ ತತ್‌ಕ್ಷಣವೇ ಲಸಿಕೆ ಹಾಕಿಸುವಲ್ಲಿ ನಿರೀಕ್ಷಿತ ಸಾಧನೆ ಮಾಡದ ಜಿಲ್ಲೆಗಳ ಜಿಲ್ಲಾಧಿ ಕಾರಿಗಳ ಜತೆಗೆ ಸಮಾಲೋಚನೆ ನಡೆಸಿದ್ದು ಮಹತ್ವ ಪಡೆದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Police Raid: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.