5ನೇ ಶತಮಾನದ ಆರಂಭದಲ್ಲಿ ಶುಭ ನಿರೀಕ್ಷೆ

4ನೇ ಶತಮಾನದ ಕೊನೆಯ ಪರ್ಯಾಯದಲ್ಲಿ ಕೋವಿಡ್‌ ಬಾಧೆ

Team Udayavani, Nov 4, 2021, 6:05 AM IST

5ನೇ ಶತಮಾನದ ಆರಂಭದಲ್ಲಿ ಶುಭ ನಿರೀಕ್ಷೆ

ಅದಮಾರು ಶ್ರೀಗಳು ಮತ್ತು ಕೃಷ್ಣಾಪುರ ಶ್ರೀಗಳು.

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪೂಜಾಪದ್ಧತಿಯ ಬದಲಾವಣೆಯ ಕಾಲಘಟ್ಟ ಸಮೀಪಿಸುತ್ತಿದೆ. ಇದು ಕೇವಲ ಎರಡು ವರ್ಷಗಳಿಗೊಮ್ಮೆಯಾಗುವ ಬದಲಾವಣೆಯಾಗಿರದೆ ಪದ್ಧತಿ ಆರಂಭವಾಗಿ ನಾಲ್ಕನೆಯ ಶತಮಾನದಿಂದ ಐದನೆಯ ಶತಮಾನಕ್ಕೆ ತಿರುವು ಪಡೆಯುವ ಕಾಲಘಟ್ಟವೂ ಹೌದು.

1522ರಲ್ಲಿ ಈ ದ್ವೈವಾರ್ಷಿಕ ಪೂಜಾ ಪದ್ಧತಿ ಆರಂಭಗೊಂಡಿತು. ಈಗ 2022ರ ಪರ್ಯಾಯ ಪೂಜಾ ಪದ್ಧತಿಯ ಸಂಕ್ರಮಣಕಾಲ. ಪದ್ಧತಿ ಆರಂಭಗೊಂಡು 500 ವರ್ಷಗಳು ಕಳೆದು 501ನೇ ವರ್ಷ ಆರಂಭವಾಗುತ್ತಿದೆ. ಈಗಿನ ಅದಮಾರು ಮಠ ಪರ್ಯಾಯ ಅನುಕ್ರಮಣಿಕೆಯಲ್ಲಿ 250ನೆಯದು. ಮುಂದಿನ ಪರ್ಯಾಯ 251ನೆಯದು. 2020ರ ಜ. 18ರಂದು ಅದಮಾರು ಮಠದ ಪರ್ಯಾಯ ಆರಂಭಗೊಂಡಿತು. 2020ರ ಮಾರ್ಚ್‌ 22ರಿಂದ ಭಾರತದಲ್ಲಿ ಕೋವಿಡ್‌ ಕಾಟ ಆರಂಭಗೊಂಡಿತು. ಆದರೆ ಇದು ಜಾಗತಿಕವಾಗಿ ಕಂಡದ್ದು 2019ರ ಡಿ. 31ರಂದು. ಇದಕ್ಕೆ ಎರಡೇ ದಿನ ಮೊದಲು ಹಿರಿಯ ಯತಿ, ಹಲವು ದಾಖಲೆಗಳನ್ನು ದಾಖಲಿಸಿದ ಯತಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನಿರ್ಯಾಣಗೊಂಡರು. ಈ 499 ಮತ್ತು 500ನೇ ವರ್ಷಪೂರ್ತಿ ಶ್ರೀಕೃಷ್ಣ ಮಠ ಮಾತ್ರವಲ್ಲದೆ ಇಡೀ ಜಗತ್ತು ಕೋವಿಡ್‌ ವೈರಸ್‌ ಸೋಂಕಿನಿಂದ ತತ್ತರಿಸಿ ಹೋಯಿತು. 501ನೇ ವರ್ಷಕ್ಕೆ ಮುಂದಿನ ಜ. 18ರಂದು ಕಾಲಿಡುವಾಗ ಲಭ್ಯ ಮಾಹಿತಿ ಪ್ರಕಾರ ಈಗ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ.

ಇದನ್ನೂ ಓದಿ:ಶ್ರೀಕೃಷ್ಣಮಠ: ತೈಲಾಭ್ಯಂಗಪೂರ್ವ ಜಲಪೂರಣ

ಕೋವಿಡ್‌ ಬಾಧೆ ಶ್ರೀಕೃಷ್ಣ ಮಠದ ಪರ್ಯಾಯ ಅದಮಾರು ಮಠವನ್ನು ಮಾತ್ರವಲ್ಲದೆ ಆಂಶಿಕವಾಗಿ ಭಾವೀ ಪರ್ಯಾಯ ಕೃಷ್ಣಾಪುರ ಮಠವನ್ನೂ ಬಾಧಿಸಿದೆ. ಈ ಹಿನ್ನೆಲೆಯಲ್ಲಿ ನಿರ್ಗಮನ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮತ್ತು ಆಗಮನ ಪೀಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರನ್ನು “ಉದಯವಾಣಿ’ ಮಾತನಾಡಿಸಿದಾಗ ಅವರು ಕೊಟ್ಟ ಉತ್ತರ ಹೀಗಿದೆ:

ನಾಲ್ಕನೇ ಶತಮಾನದ ಕೊನೆಯ ಪರ್ಯಾಯ ಅವಧಿ ಪೂರ್ತಿ ಕೋವಿಡ್‌ ಕಾಟದ ಹಿನ್ನೆಲೆಯಲ್ಲಿ ನಿಮ್ಮ ಅಭಿಪ್ರಾಯವೇನು?
ಎಷ್ಟು ಜನರು ಬರುತ್ತಾರೆ. ಹೇಗೆ ನಿಭಾಯಿಸುವುದು ಎಂಬ ಕಳಕಳಿ ಇತ್ತು. 500 ವರ್ಷಗಳ ಹಿಂದೆ ಹೇಗಿದ್ದಿರಬಹುದು ಎಂಬ ಆ ಕಾಲಘಟ್ಟವನ್ನು ಈ ಅವಧಿಯಲ್ಲಿ ಅನುಭವಿಸುವಂತಾಯಿತು. ಎಲ್ಲವೂ ನಿಃಶಬ್ದವಾಗಿತ್ತು. ಲೋಕದ ಜನರಿಗೆ ತೊಂದರೆಯಾದದ್ದು ಹೌದು. ಪೀಠವೇರುವ ಮುನ್ನ ಮಾಡಲಾಗದ ಸುಣ್ಣ ಬಣ್ಣವೇ ಮೊದಲಾದ ಕೆಲಸಗಳನ್ನು ಬಳಿಕ ಪೂರೈಸಲು ಸಾಧ್ಯವಾಯಿತು. ಇದರಿಂದ ಒಂದಿಷ್ಟು ಜನರಿಗೆ ಅನುಕೂಲವೂ ಆಯಿತು. ಆರು ಯತಿಗಳು ಇಲ್ಲಿ ಚಾತುರ್ಮಾಸ್ಯವ್ರತ ಕೈಗೊಂಡದ್ದು ಇಲ್ಲವೇ ಇಲ್ಲ ಎನ್ನಬಹುದು. ಇದೂ ಸಾಧ್ಯವಾಯಿತು. ನಾವು ನಿರ್ದಿಷ್ಟವಾಗಿ ಇದೇಕೆ ಹೀಗಾಯಿತು ಎನ್ನಲಾಗದು. ಏಕೆಂದರೆ ಕೊರೊನಾ ಆಗಲೀ ಇದಕ್ಕೆ ಸಂಬಂಧಿಸಿದ ಪೂರ್ವಾಪರಗಳನ್ನಾಗಲೀ, ಹಿಂದೆ ಆದ ಸಾಂಕ್ರಾಮಿಕ ರೋಗಗಳ ವಿಷಯವನ್ನಾಗಲೀ ಅಧ್ಯಯನ ಮಾಡಿಲ್ಲ. ಲೋಕದಲ್ಲಿ ಏನು ಕಂಡುಬರುತ್ತದೋ ಅದು ನಮಗೂ ಬರುತ್ತದೆ. ಅದನ್ನು ಅನುಭವಿಸಲೇಬೇಕು.

ಆರ್ಥಿಕ ಸಂಕಷ್ಟಗಳನ್ನು ಹೇಗೆ ಇದಿರಿಸಿದ್ದೀರಿ?
ಭಕ್ತರ ಓಡಾಟಕ್ಕೆ ತೊಂದರೆಯಾದ ಕಾರಣ ಆದಾಯದಲ್ಲಿ ಏರುಪೇರಾಯಿತು. ಈಗ ತೊಂದರೆಇಲ್ಲ, ಅಂದಂದಿನ ಆದಾಯ ಆ ದಿನದ ಖರ್ಚಿಗೆ ಹೊಂದಾಣಿಕೆ ಯಾಗುತ್ತದೆ. ಪರ್ಯಾಯ ಕಾಲದಲ್ಲಿ ನಾವು 1 ಕೋ.ರೂ. ಸಾಲಮಾಡಿದ್ದೆವು. ಇದು ಹಣವಿಲ್ಲ ಎಂಬ ಕಾರಣಕ್ಕೆ ಅಲ್ಲ. ನಮ್ಮ ಜಾಗರೂಕತೆಗೆ. ಅದಮಾರು ಮಠದ ನಿಧಿಯನ್ನು ಖರ್ಚು ಮಾಡಿದ್ದೇವೆ.ಕಾಲಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಅದಮಾರು ಶ್ರೀಗಳು ಹೊಂದಿ
ಕೊಳ್ಳಲಿಲ್ಲವೆ? ಹಾಗೆ ನಾವು ಕೂಡ ಹೊಂದಿಕೊಳ್ಳಬೇಕಾಗುತ್ತದೆ. ಆಯಾ ಕಾಲಘಟ್ಟದ ನಿಸರ್ಗ ಮತ್ತು ಸರಕಾರದ ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಪರ್ಯಾಯ ಸಂಚಾರ ಕ್ಷೇತ್ರಗಳ ದರ್ಶನಕ್ಕೆ ಮಾತ್ರ ಸೀಮಿತವಾಗಿದೆ. ಪರ್ಯಾಯೋತ್ಸವಕ್ಕೆ ಸುಮಾರು 1 ಕೋ.ರೂ. ಬೇಕು. ಸರಳವಾಗಿ ಮಾಡಿದರೆ ಖರ್ಚು ಕಡಿಮೆಯಾಗಬಹುದು.

ಟಾಪ್ ನ್ಯೂಸ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.