ಬೆಂವಿವಿಯಲ್ಲಿ 30 ಹೊಸ ಕೋರ್ಸ್‌ ಶುರು

ಪದವಿಯ ಮಧ್ಯದಲ್ಲೇ ಎಕ್ಸಿಟ್‌, ಎಂಟ್ರಿಗೆ ಅನುಕೂಲವಾಗುವ ಕೋರ್ಸ್‌ಗಳ ಪಠ್ಯಕ್ರಮ ಅಳವಡಿಕೆ

Team Udayavani, Nov 4, 2021, 10:11 AM IST

ಬೆಂಗಳೂರು ವಿಶ್ವವಿದ್ಯಾಲಯ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಅನು ಷ್ಠಾನದ ಭಾಗವಾಗಿ ಬೆಂಗಳೂರು ವಿಶ್ವವಿದ್ಯಾಲಯ 30 ಹೊಸ ಕೋರ್ಸ್‌ಗಳನ್ನು ಆರಂಭಿಸಿ, ವಿದ್ಯಾರ್ಥಿ ಗಳ ಅನುಕೂಲಕ್ಕಾಗಿ ದಾಖಲಾತಿಗೂ ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರು ವಿಶ್ವವಿದ್ಯಾಲಯ ಆರಂಭಿಸಿರುವ ಹೊಸ ಕೋರ್ಸ್‌ಗಳಲ್ಲಿ ನಾಲ್ಕು ವರ್ಷದ ಬಿ.ಎಸ್ಸಿ ಹಾಗೂ ಬಿ.ಎ ಆನರ್ಸ್‌ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳು, ಪ್ರೊಫೇಷನ್‌ ಡಿಪ್ಲೊಮಾ ಕೋರ್ಸ್‌ಗಳು, ಪ್ರಮಾಣ ಪತ್ರ ಕೋರ್ಸ್‌ಗಳು, ನಾಲ್ಕು ವರ್ಷದ ಬಿ.ಇಡಿ ಹಾಗೂ ಕೆಲವೊಂದು ತಾಂತ್ರಿಕ ಕೋರ್ಸ್‌ಗಳು ಸೇರಿಕೊಂಡಿವೆ.

ಇದನ್ನೂ ಓದಿ:- “ನಾಟಕ, ಅಸಮರ್ಪಕ”: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಲಾಲು ಪ್ರಸಾದ್ ಯಾದವ್ ವ್ಯಂಗ್ಯ

ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಂಡ ನಂತರ ಉದ್ಯೋಗಾವಕಾಶಕ್ಕೆ ಪೂರಕವಾಗುವಂತೆ ಹಾಗೂ ಪದವಿಯ ಮಧ್ಯದಲ್ಲೇ ಎಕ್ಸಿಟ್‌, ಎಂಟ್ರಿಗೆ ಅನುಕೂಲ ಆಗುವಂತೆ ಕೋರ್ಸ್ ಗಳ ಪಠ್ಯಕ್ರಮ ಸಿದ್ಧಪಡಿಸಿ, ವಿನ್ಯಾಸಗೊಳಿಸಲಾಗಿದೆ ಎಂದು ಕುಲಪತಿ ಕೆ.ಆರ್‌.ವೇಣುಗೋಪಾಲ್‌ ಅವರು ಮಾಹಿತಿ ನೀಡಿದರು.

ಹೊಸ ಕೋರ್ಸ್‌ಗಳ ವಿವರ: ನಾಲ್ಕು ವರ್ಷದ ಬಿ. ಎಸ್ಸಿ ಹಾಗೂ ಬಿ.ಎ ಆನರ್ಸ್‌ ಅಡಿಯಲ್ಲಿ ಬಯೋ ಇನ್ಫೋಮೇಷನ್‌ ಮತ್ತು ಬಯೋಟೆಕ್ನಾಲಜಿ, ಹ್ಯೂಮನ್‌ ಡಿಸೀಸ್‌ ಜೆನೆಟಿಕ್ಸ್‌, ಆಹಾರ ಮತ್ತು ಫೌಷ್ಠಿಕಾಂಶ, ಆರ್ಥಶಾಸ್ತ್ರ, ಘನತಾಜ್ಯ ನಿರ್ವಹಣೆ, ಫಿಲ್ಮ್ ಮೇಕಿಂಗ್‌, ಗ್ರಾಫಿಕ್ಸ್‌ ಮತ್ತು ಆ್ಯನಿಮೇಷನ್‌, ಕ್ರೀಮಿನಾಲಜಿ ಮತ್ತು ಫಾರೆನ್ಸಿಕ್‌ ಸೈನ್ಸ್‌, ವಿಪತ್ತು ನಿರ್ವಹಣೆ ಮತ್ತು ಮೆಡಿಸಿನಲ್‌ ಬಾಟನಿ, ಎಂ.ಎ ವಿಭಾಗದಲ್ಲಿ ಟಿಬೆಟಿಯನ್‌ ಲಿಟ್ರೇಚರ್‌, ಟಿಬೆಟಿಯನ್‌ ಲ್ಯಾಂಗ್ವೇಜ್‌, ಬುದ್ಧಿಸ್ಟ್‌ ಫಿಲಾಸಫಿ, ಟಿಬೆಟಿಯನ್‌ ಇತಿಹಾಸ, ಇಟರ್‌ಡಿಸಿಪ್ಲಿನರಿ ಇಂಡಿಯನ್‌ ಕ್ಲಾಸಿಕಲ್‌ ಮ್ಯೂಸಿಕ್‌ ರಿಸರ್ಚ್‌, ಅಡ್ವಟೈಸಿಂಗ್‌ ಆ್ಯಂಡ್‌ ಪಬ್ಲಿಕ್‌ ರಿಸರ್ಚ್‌, ಮಿಡಿಯಾ ಮ್ಯಾನೇಜ್ಮೆಂಟ್‌ ಕೋರ್ಸ್‌ಗಳು ಆರಂಭವಾಗಲಿವೆ.

ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ ಅಡಿಯಲ್ಲಿ ಮ್ಯಾನುಸ್ಕ್ರೀಪ್ಟೋಲಜಿ ಮತ್ತು ಪಾಲಿಯೋಗ್ರಫಿ, ಇಟರ್‌ಡಿಸಿಪ್ಲಿನರಿ ಸ್ಟಡೀಸ್‌ ಇನ್‌ ಇಂಡಿಯನ್‌ ಕ್ಲಾಸಿಕಲ್‌ ಮ್ಯೂಸಿಕ್‌, ಆ್ಯಡಿಟರಿ ವರ್ಬಲ್‌ ಥೇರಪಿ ಕೋರ್ಸ್‌, ಫಿಲ್ಮ್ ಆ್ಯಕ್ಟಿಂಗ್‌, ಥಿಯೇಟರ್‌ ಆರ್ಟ್ಸ್, ಫಿಲ್ಮ್ ಮೇಕಿಂಗ್‌, ಕೃಷಿ ನಿರ್ವಹಣೆ, ಪ್ರೊಫೆಷನ್‌ ಡಿಪ್ಲೊಮಾ ವಿಭಾಗದಲ್ಲಿ ಭರತನಾಟ್ಯಂ, ಒಡಿಶ್ಯಾ, ಪ್ರಮಾಣಪತ್ರ ಕೋರ್ಸ್‌ನಲ್ಲಿ ರಿಸರ್ಚ್‌ ಮೆಥಡ್‌ ಇನ್‌ ಮ್ಯಾನುಸ್ಕ್ರಿಪಾrಲಜಿ ಮತ್ತು ಪಾಲಿಯೋಗ್ರಫಿ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ಟಿಕ್‌ ವಿಭಾಗದಲ್ಲಿ ಕೃತಕ ಬುದ್ದಿಮತ್ತೆ, ಸೈಬರ್‌ ಸೆಕ್ಯೂರಿಟಿ, ಸುಸ್ಥಿತರ ಆರ್ಕಿಟೆಕ್ಚರ್‌, ಇಂಟರ್‌ನೆಟ್‌ ಆಫ್ ಥಿಂಗ್ಸ್‌ ಕೋರ್ಸ್‌ಗಳು ಶುರುವಾಗಲಿದೆ.

ವಿಶ್ವ ವಿದ್ಯಾಲಯದ ಹೊಸ ಯೋಜನೆಗಳು

2021-22ನೇ ಸಾಲಿನಿಂದ ಹೊಸ ಕೋರ್ಸ್‌ಗಳನ್ನು ಆರಂಭಿಸುವ ಜತೆಗೆ ಕೆಲವೊಂದು ಹೊಸ ಯೋಜನೆ ಗಳನ್ನು ವಿಶ್ವವಿದ್ಯಾಲಯವು ಹಾಕಿಕೊಂಡಿದೆ. ರಾಮನಗರ ಸ್ನಾತಕೋತ್ತರ ಕೇಂದ್ರದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 2 ಎಕರೆ ಜಾಗ ನೀಡಿದ್ದು, ಇನ್ನು 8 ಎಕರೆ ಜಾಗ ಖರೀದಿಸಿ, ಸುಸಜ್ಜಿತ ಸ್ನಾತ ಕೋತ್ತರ ಕೇಂದ್ರ ನಿರ್ಮಾಣಕ್ಕೆ ಸಿದ್ಧತೆ ಆರಂಭವಾಗಿದೆ.

17 ಕೋಟಿ ವೆಚ್ಚದಲ್ಲಿ ಯುವಿಸಿಇ ಹುಡುಗರ ಹಾಸ್ಟೆಲ್‌, ಜ್ಞಾನಭಾರತಿ ಆವರಣದಲ್ಲಿ 13.85 ಕೋಟಿ ರೂ. ವೆಚ್ಚದಲ್ಲಿ ಹುಡುಗರ ಹಾಸ್ಟೆಲ್‌ ನಿರ್ಮಾಣವಾಗಲಿದೆ. ಒಬಿಸಿ ಹಾಸ್ಟೆಲ್‌ ಅನ್ನು 5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಹಾಗೆಯೇ 9.7 ಕೋಟಿ ವೆಚ್ಚದಲ್ಲಿ ಜ್ಞಾನಭಾರತಿ ಆವರಣದಲ್ಲಿ ಡಾ.ಕೆ.ವೆಂಕಟಗಿರಿ ಗೌಡ ಸಭಾಂಗಣದ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಯುವಿಸಿಇ ಆವರಣದಲ್ಲಿ 55 ಕೋಟಿ ವೆಚ್ಚದಲ್ಲಿ ಮೆಕೆನಿಕಲ್‌ ಬ್ಲಾಕ್‌ ನಿರ್ಮಾಣ ಆರಂಭವಾಗಿದ್ದು, ಯುವಿಸಿಇಯನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಇದು ಅನುಕೂಲವಾಗಲಿದೆ ಎಂದು ಆಡಳಿತ ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

“ವಿಶ್ವವಿದ್ಯಾಲಯದಲ್ಲಿ ಡಿಜಿಟಲೈಜೇಷನ್‌ಗೆ ಆದ್ಯತೆ ನೀಡುತ್ತಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಭಾಗವಾಗಿ 30 ಹೋಸ ಕೋರ್ಸ್‌ಗಳನ್ನು ಆರಂಭಿಸಿದ್ದೇವೆ. ಪರೀಕ್ಷಾಂಗ ವಿಭಾಗವನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲಾಗಿದೆ. ಮುಂದೆ ಕಚೇರಿ ವ್ಯವಹಾರಗಳನ್ನು ಕಾಗದ ಮುಕ್ತ ಮಾಡಲಿದ್ದೇವೆ. ಸಂಶೋಧನಾ ವಿಷಯವಾಗಿಯೂ ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದ್ದೇವೆ.” ಪ್ರೊ.ಕೆ.ಆರ್‌.ವೇಣುಗೋಪಾಲ್‌, ಕುಲಪತಿ, ಬೆಂಗಳೂರು ವಿವಿ.

ವಿಭಾಗ ಬದಲು ಅರ್ಜಿ ಸಲ್ಲಿಕೆಗೆ 11ರವರೆಗೆ ಅವಕಾಶ ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಅಧೀನದ ಸ್ವಾಯತ್ತ, ಸ್ವತಂತ್ರ ಹಾಗೂ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳು 2021-22ನೇ ಸಾಲಿಗೆ ವಿಭಾಗ ಬದಲಾವಣೆಗೆ ಅವಕಾಶ ನೀಡಲಾಗಿದೆ. ವಿಟಿಯು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಲು ನ.11ರವರೆಗೂ ಅವಕಾಶ ನೀಡಲಾಗಿದೆ. ಕಾಲೇಜುಗಳಲ್ಲಿ ಸಂಬಂಧಪಟ್ಟ ಅರ್ಜಿಯನ್ನು ಪರಿಶೀಲಿಸಲು ನ.13ರವರೆಗೂ ಅವಕಾಶವಿದೆ. ನ.15ರಂದು ವಿಟಿಯು ಮೆರಿಟ್‌ ಪಟ್ಟಿ ಪ್ರಕಟಿಸಲಿದೆ. ನ.18ರೊಳಗೆ ಬದಲಾದ ವಿಭಾಗಕ್ಕೆ ವಿದ್ಯಾರ್ಥಿಗಳು ಸೇರಿಕೊಳ್ಳಬೇಕು ಎಂದು ವಿಟಿಯು ತಿಳಿಸಿದೆ.

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

1-mundaragi

Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.